Neer Dose Karnataka
Take a fresh look at your lifestyle.

ಒಂದು ವರ್ಷ ರಿಚಾರ್ಜ್ ತಲೆ ನೋವು ಇರಬಾರದು ಎಂದರೆ, ಏರ್ಟೆಲ್ ನಲ್ಲಿ ಈ ಪ್ಲಾನ್ ಹಾಕಿಕೊಳ್ಳಿ. ಹೆಚ್ಚು ಹಣ ಕೂಡ ಬೇಡ.

42

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಏರ್ಟೆಲ್ ಸಂಸ್ಥೆ ಗ್ರಾಹಕರಿಗೆ ಉತ್ತಮವಾದ ಸೇವೆಗಳನ್ನು ನೀಡುವಲ್ಲಿ ಎರಡನೆಯ ಸ್ಥಾನದಲ್ಲಿದೆ. ಏರ್ಟೆಲ್ ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಯೋಜನೆಗಳನ್ನು ನೀಡುತ್ತಿದೆ. ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚು ಕಾಂಪಿಟೇಶನ್ ಇರುವ ಕಾರಣ, ಏರ್ಟೆಲ್ ಸಂಸ್ಥೆ ಇದೀಗ ಹೊಸ ಪ್ಲಾನ್ ಅನ್ನು ಹೊರತಂದಿದೆ. ಕಡಿಮೆ ಬೆಲೆಯಲ್ಲಿ ಒಳ್ಳೆಯ ಆಫರ್ ಈ ಪ್ಲಾನ್ ನಲ್ಲಿದ್ದು, ಈ ಪ್ಲಾನ್ ರೀಚಾರ್ಜ್ ಮಾಡಿ ಒಂದು ವರ್ಷದ ವರೆಗೂ ನೆಮ್ಮದಿಯಾಗಿ ಇರಬಹುದು. ಅದರ ಬಗ್ಗೆ ತಿಳಿಸುತ್ತೇವೆ ನೋಡಿ.

ಏರ್ಟೆಲ್ ಸಂಸ್ಥೆ ಹೊರತಂದಿರುವ ಈ ಹೊಸ ಪ್ಲಾನ್ ಒಂದು ವರ್ಷದ ಮಾನ್ಯತೆ ಹೊಂದಿದ್ದು, ತಿಂಗಳಿಗೆ 200 ರೂಪಾಯಿಗಿಂತ ಕಡಿಮೆ ಹಣದಲ್ಲಿ ಒಂದು ವರ್ಷ ಪೂರ್ತಿ ಈ ಯೋಜನೆ ನಿಮಗೆ ಇರುತ್ತದೆ. ಬಹಳ ಉಳಿತಾಯ ಎನ್ನಿಸುವ ಈ ಯೋಜನೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ. ಇದು, ₹1799 ರೂಪಾಯಿಯ ಪ್ಲಾನ್ ಆಗಿದ್ದು,ಈ ಪ್ಲಾನ್ ನ ಅವಧಿ 365 ದಿನಗಳ ವರೆಗೂ ಇರುತ್ತದೆ, ಇದರಲ್ಲಿ 3600 ಉಚಿತ ಎಸ್.ಎಂ.ಎಸ್ ಗಳು ಗ್ರಾಹಕರಿಗೆ ಸಿಗಲಿದೆ. ಈ ಪ್ಲಾನ್ ನಲ್ಲಿ ಏರ್ಟೆಲ್ ಗ್ರಾಹಕರಿಗೆ ಒಂದು ವರ್ಷದ ವರೆಗೂ ಎಲ್ಲ ನೆಟ್ವರ್ಕ್ ಗಳಿಗೂ ಅನಿಯಮಿತ ಉಚಿತ ಕರೆಗಳು ಸಿಗುತ್ತದೆ.

ಜೊತೆಗೆ ಒಂದು ವರ್ಷಕ್ಕೆ 24ಜಿಬಿ ಉಚಿತ ಡೇಟಾ ಸಿಗುತ್ತದೆ. ಒಂದು ವರ್ಷಕ್ಕೆ 24ಜಿಬಿ ಡೇಟಾ ಸಿಗುತ್ತದೆ, ಒಂದು ವೇಳೆ ಡೇಟಾ ಖಾಲಿ ಆದರೆ, ಹೆಚ್ಚುವರಿ ಡೇಟಾ ರೀಚಾರ್ಜ್ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲದೆ, ಉಚಿತ ಹಲೋ ಟ್ಯುನ್ಸ್, ವಿಂಕ್ ಮ್ಯೂಸಿಕ್ ಹಾಗೂ ಇನ್ನಿತರ ಸೇವೆಗಳನ್ನು ಈ ಯೋಜನೆಯ ಮೂಲಕ ಗ್ರಾಹಕರು ಪಡೆಯಬಹುದು. ಜೊತೆಗೆ 100 ರೂಪಾಯಿ ಫಾಸ್ಟ್ಯಾಗ್ ಕ್ಯಾಶ್ ಬ್ಯಾಕ್ ಸಹ ಸಿಗುತ್ತದೆ. ಒಂದು ವರ್ಷ ಪೂರ್ತಿ ನೀವು ಈ ಸೇವೆಯನ್ನು ಪಡೆಯಬಹುದು.

Leave A Reply

Your email address will not be published.