Neer Dose Karnataka
Take a fresh look at your lifestyle.

ಆ ದಿನ ಕೊನೆಗೂ ಬಂದೆ ಬಿಡ್ತು: ಇಂದೇ ರೂಪುಗೊಳ್ಳುತ್ತಿದೆ ಬುಧಾದಿತ್ಯ ಯೋಗ. ಅದೃಷ್ಟ ಬರುತ್ತಿರುವುದು ಯಾವ್ಯಾವ ರಾಶಿಗಳಿಗೆ ಗೊತ್ತೇ??

45

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಗೊತ್ತಿದೆ. ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಾನವನ್ನು ಬದಲಾಯಿಸುತ್ತದೆ. ಇಂದು ಸೆಪ್ಟೆಂಬರ್ 17ರಂದು ಕನ್ಯಾ ರಾಶಿಗೆ ಸೂರ್ಯನ ಪ್ರವೇಶ ಆಗಿದೆ, ಸೆಪ್ಟೆಂಬರ್ 21ರಂದು ಕನ್ಯಾರಾಶಿಯಲ್ಲಿ ಬುಧ ಗ್ರಹದ ಹಿಮ್ಮುಖ ಚಲನೆ ಶುರುವಾಗಿದೆ. ಇದರಿಂದಾಗಿ ಬುಧ ಮತ್ತು ಸೂರ್ಯ ಜೊತೆಯಾಗುವುದರಿಂದ ಬುಧಾದಿತ್ಯ ಯೋಗ ಶುರುವಾಗುತ್ತಿದ್ದು, ಈ ಯೋಗದಿಂದ ಮೂರು ರಾಶಿಗಳಿಗೆ ಮಂಗಳಕರ ಫಲವಿದೆ. ಆ ಮೂರು ರಾಶಿಗಳು ಯಶಸ್ಸು ಮತ್ತು ಹೆಚ್ಚಿನ ಹಣವನ್ನು ಪಡೆಯುತ್ತಾರೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ರಾಶಿಯವರಿಗೆ ವಿಶೇಷವಾದ ಪ್ರಯೋಜನ ಇದೆ. ಕೆಲಸ ಮಾಡುವವರು ಬಡ್ತಿ ಪಡೆಯುತ್ತಾರೆ, ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ, ಆದರೆ ಆರ್ಥಿಕವಾಗಿ ಸಮಸ್ಯೆ ಆಗುವುದಿಲ್ಲ. ಕೆಲಸ ಮಾಡುವ ಕಡೆ ನಿಮಗೆ ಗೌರವ ಸಿಗುತ್ತದೆ. ಕೆಲಸ ಬದಲಾಯಿಸುವ ಪ್ಲಾನ್ ನಲ್ಲಿದ್ದರೆ ಇದು ಅತ್ಯುತ್ತಮವಾದ ಸಮಯ ಆಗಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹೊಸ ಕೆಲಸ ಅಥವಾ ಹೂಡಿಕೆ ಶುರು ಮಾಡಲು ಇದು ಒಳ್ಳೆಯ ಸಮಯ ಆಗಿದೆ. ನೀವು ವ್ಯಾಪಾರ ಮಾಡುತ್ತಿದ್ದರೆ ಅದು ವಿಸ್ತರಣೆ ಆಗಲಿದೆ..ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ.

ಕನ್ಯಾ ರಾಶಿ :- ಬುಧಾದಿತ್ಯ ಯೋಗ ನಿಮಗೆ ವಿಶೇಷವಾದ ಪ್ರಯೋಜನ ನೀಡುತ್ತದೆ, ಕೆಲಸದಲ್ಲಿ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಚೆನ್ನಾಗಿರುತ್ತದೆ. ಕೆಲಸದಿಂದ ನೀವು ಪ್ರವಾಸಕ್ಕೆ ಹೋಗುವ ಅವಕಾಶ ಬರುತ್ತದೆ. ಇದರಿಂದಾಗಿ ನಿಮಗೆ ಹೆಚ್ಚಿನ ಲಾಭ ಆಗುತ್ತದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ, ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ ನಿಮ್ಮ ಹಣ ವಾಪಸ್ ಬರುತ್ತದೆ. ಹೊಸ ಕೆಲಸ ಶುರು ಮಾಡಲು ಇದು ಸರಿಯಾದ ಸಮಯ ಆಗಿದೆ. ನಿಮ್ಮ ಸಂಗಾತಿಯ ಸಹಾಯದಿಂದ ಉತ್ತಮವಾಗಿ ಯಶಸ್ಸು ಗಳಿಸುತ್ತೀರಿ.

ಮೀನಾ ರಾಶಿ :- ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ. ವ್ಯಾಪಾರದಲ್ಲಿ ಏಳಿಗೆ ಇರುತ್ತದೆ, ಕುಟುಂಬದ ವಾತಾವರಣ ಚೆನ್ನಾಗಿರುತ್ತದೆ. ಉದ್ಯೋಗದ ಜಾಗದಲ್ಲಿ ಮೆಚ್ಚುಗೆ ಸಿಗುತ್ತದೆ, ನಿಮ್ಮ ಮೇಲಧಿಕಾರಿ ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ. ಪಾರ್ಟ್ನರ್ಶಿಪ್ ಕೆಲಸದಿಂದ ಲಾಭ ಸಿಗುತ್ತದೆ. ಸರ್ಕಾರಿ ಕೆಲಸ ಹೊಂದಿರುವವರಿಗೆ ಇದು ಬಹಳ ಒಳ್ಳೆಯ ಸಮಯ ಆಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಗೌರವ ಮರಿಯಾದೆ ಸಿಗುತ್ತದೆ

Leave A Reply

Your email address will not be published.