Neer Dose Karnataka
Take a fresh look at your lifestyle.

ವಿದ್ಯಾರ್ಥಿಗಳಿಗೆ ಬಂಪರ್ ಯೋಜನೆ: ವಿದ್ಯಾರ್ಥಿ ವೇತನ ಘೋಷಣೆ ಮಾಡಿದ ಕೇಂದ್ರ: ಅರ್ಜಿ ಹೇಗೆ ಸಲ್ಲಿಸಬೇಕು ಗೊತ್ತೇ??

ಪ್ರತಿ ವರ್ಷ ಕೇಂದ್ರ ಸರ್ಕಾರವು ದುರ್ಬಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸುತ್ತದೆ. 82 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಾರೆ. CBSE ಹಾಗೂ ICSE ಪಾಲುಗಳನ್ನು ಬೇರೆ ಮಾಡಿ ಈ ಸ್ಕಾಲರ್ಶಿಪ್ ನೀಡಲಾಗುತ್ತದೆ. 12ನೇ ತರಗತಿ ನಂತರ ವಿದ್ಯಾರ್ಥಿ ವೇತನ ಪಡೆಯಲು ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ವಿದ್ಯಾರ್ಥಿವೇತನ ಪಡೆಯಲು ಅರ್ಹವಾದ ವಿದ್ಯಾರ್ಹತೆ ಇದೆ, ಅದರ ಬಗ್ಗೆ ತಿಳಿದುಕೊಂಡ ನಂತರ ನೀವು ಇದಕ್ಕೆ ಅರ್ಜಿ ಸಲ್ಲಿಸಬಹುದು.

ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ತು, SEB, CBSE ಅಥವಾ ICSE ಯಲ್ಲಿ 12ನೇ ತರಗತಿ ಪೂರ್ಣಗೊಳಿಸಿ, ಶೇ.80ರಷ್ಟು ಅಂಕ ಗಳಿಸಿರಬೇಕು. ಹಾಗೂ ವಿದ್ಯಾರ್ಥಿಗಳು AICTE, UJC, MCA, DCI ಅಥವಾ ಇನ್ನಿತರ ನಿಯಂತ್ರಿತ ಸಂಸ್ಥೆಗಳಿಂದ ಮಾನ್ಯತೆ ಪಡೆದಿರುವ ಕಾಲೇಜುಗಳಲ್ಲಿ ಅಥವಾ ವಿಶ್ವವಿದ್ಯಾನಿಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಥವಾ ವೃತ್ತಿಪರ ಕೋರ್ಸ್ ಗಳನ್ನು ಓದುತ್ತಿರಬೇಕು. ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು. ಈಗಾಗಲೇ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಬೇರೆ ಸ್ಕಾಲರ್ಶಿಪ್ ಪ್ರಯೋಜನ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡುವ ಹಾಗಿಲ್ಲ.

ಈ ವಿದ್ಯಾರ್ಥಿ ವೇತನದಲ್ಲಿ ಮುಂದುವರೆಯಲು ಪ್ರತಿ ವರ್ಷ ವಿದ್ಯಾರ್ಥಿಗೆ 10 ಸಾವಿರ ರೂಪಾಯಿ ಸ್ಕಾಲರ್ಶಿಪ್ ನೀಡಲಾಗುತ್ತದೆ. 10 ಸಾವಿರ ರೂಪಾಯಿಗಳನ್ನು ಮೂರು ವರ್ಷಗಳ ವರೆಗೂ ನೀಡಲಾಗುತ್ತದೆ. 12ನೇ ತರಗತಿ ನಂತರ 5 ವರ್ಷಗಳ ಕೋರ್ಸ್ ಮಾಡುತ್ತಿರುವವರಿಗೆ ವರ್ಷಕ್ಕೆ 20 ಸಾವಿರ ರೂಪಾಯಿಯನ್ನು ಸ್ಕಾಲರ್ಶಿಪ್ ಆಗಿ ನೀಡಲಾಗುತ್ತದೆ. B.tech, Engineering ಅಧ್ಯಯನ ಮಾಡುತ್ತಿರುವವರಿಗೆ ಅಧ್ಯಯನ ಪೂರ್ತಿ ಆಗುವ ವರೆಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. 4 ವರ್ಷಗಳ ಪದವಿ ಮುಗಿದ ಬಳಿಕ ಸ್ನಾತಕೋತ್ತರ ಪದವಿ ಮುಂದುವರೆಸಲು, 20 ಸಾವಿರ ಸ್ಕಾಲರ್ಶಿಪ್ ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು, https://scholarships.gov.in/fresh/loginPage ಈ ಲಿಂಕ್ ಸಂಪರ್ಕಿಸಿ.

Comments are closed.