Neer Dose Karnataka
Take a fresh look at your lifestyle.

ಸಮಂತಾ ಹಾಗೂ ನಾಗ ಚೈತನ್ಯ ರವರ ವಿಚ್ಛೇದ್ದನಕ್ಕೆ ಕಾರಣ ಎನ್ನುತ್ತಿರುವ ಈಕೆ ಯಾರು ಗೊತ್ತೇ?? ಈಕೆಯ ಬ್ಯಾಕ್ಗ್ರೌಂಡ್ ಏನು ಗೊತ್ತೇ??

4,987

ಟಾಲಿವುಡ್ ನಲ್ಲಿ ಬಹಳ ಮುದ್ದಾದ ಜೋಡಿಯಾಗಿ ಗುರುತಿಸಿಕೊಂಡಿದ್ದ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಜೋಡಿ ಬೇರೆ ಬೇರೆಯಾಗಿ ಅಕ್ಟೋಬರ್ 2ಕ್ಕೆ ಒಂದು ವರ್ಷ ಆಗುತ್ತದೆ. ಯಾರು ಊಹಿಸದ ರೀತಿಯಲ್ಲಿ ಈ ಜೋಡಿ ಬೇರೆಯಾದರು. ಇವರ ವಿಚ್ಛೇದನ ವಿಚಾರ ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಚರ್ಚೆ ಮಾಡಲ್ಪಟ್ಟ ವಿಷಯ ಆಯಿತು. ಇವರಿಬ್ಬರು ಬೇರೆಯಾಗಿ ವರ್ಷವೇ ಕಳೆಯುತ್ತಿದ್ದರು, ಇವರಿಬ್ಬರ ಬಗ್ಗೆ ಒಂದಲ್ಲಾ ಒಂದು ಸುದ್ದಿ ಕೇಳಿಬರುತ್ತಲೇ ಇರುತ್ತವೆ. ಚೈತನ್ಯ ಸಮಂತಾ ಬ್ರೇಕಪ್ ಬಗ್ಗೆ ಬೇರೆ ಬೇರೆ ಸ್ಟೋರಿಗಳು ಕೇಳಿಬರುತ್ತಲೇ ಇದೆ, ಅವರಿಬ್ಬರು ಈ ವಿಷಯಗಳ ಬಗ್ಗೆ ಹೆಚ್ಚಾಗಿ ಪ್ರತಿಕ್ರಿಯೆ ನೀಡದ ಕಾರಣ ಈ ಕುರಿತು ಚರ್ಚೆಗಳು ಇನ್ನು ಹೆಚ್ಚಾಗುತ್ತಿದೆ.

ಸಮಂತಾ ಹಾಗೂ ಚೈತನ್ಯ ಜೋಡಿ ಬೇರೆ ಬೇರೆಯಾಗಲು ಹಲವು ಕಾರಣಗಳು ಕೇಳಿಬರುತ್ತಿದೆ, ಆದರೆ ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ ನಾಗಾರ್ಜುನ ಅವರ ಸೋದರ ಸೊಸೆ ಯಾರ್ಲಗಡ್ಡ ಸುಪ್ರಿಯಾ ಅವರಿಂದಲೇ ನಾಗಚೈತನ್ಯ ಮತ್ತು ಸಮಂತಾ ಬೇರೆಯಾಗಿದ್ದು ಎನ್ನುವ ಹೊಸ ಸುದ್ದಿ ಕೇಳಿಬರುತ್ತಿದೆ. ಅಷ್ಟಕ್ಕೂ ಇವರಿಬ್ಬರು ಬೇರೆಯಾಗುವುದಕ್ಕೆ ಸುಪ್ರಿಯಾ ಹೇಗೆ ಕಾರಣ ಆಗ್ತಾರೆ ಎಂದು ನೋಡುವುದಾದರೆ, ಸುಪ್ರಿಯಾ ಹಾಗೂ ಯುವನಟ ಆಡಿವಿ ಶೇಷ್ ಪ್ರೀತಿಮಾಡುತ್ತಿದ್ದಾರಂತೆ. ಮದುವೆ ಮಾಡಿಕೊಳ್ಳಬೇಕು ಎಂದು ಕೂಡ ಅಂದುಕೊಂಡಿದ್ದರಂತೆ, ಆದರೆ ಮೊದಲಿನಿಂದಲೂ ಸುಪ್ರಿಯಾ ಹಾಗೂ ಸಮಂತಾ ಇಬ್ಬರಿಗೂ ಅಷ್ಟಕ್ಕಷ್ಟೇ ಎನ್ನುವ ಹಾಗಿದ್ದು, ಆ ಸಮಯದಲ್ಲಿ ಸುಪ್ರಿಯಾ ಅವರ ಮದುವೆಯನ್ನು ಸಮಂತಾ ಹಾಳು ಮಾಡಿದ ಕಾರಣ, ಆ ಕೋಪದಿಂದ ನಾಗಚೈತನ್ಯ ಹಾಗೂ ಸಮಂತಾ ವಿಚ್ಛೇದನಕ್ಕೆ ಸುಪ್ರಿಯಾ ಅವರೇ ಕಾರಣವಾಗಿದ್ದಾರೆ ಎಂದು ಕೆಲವರು ಬರೆದಿದ್ದಾರೆ.

ಇದೆಲ್ಲವೂ ಪ್ರಯೋಜನವಿಲ್ಲದ ಸುದ್ದಿಗಳು ಎಂದು ಕೆಲವರು ತಳ್ಳಿ ಹಾಕಿದರು. ಇನ್ನು ಕೆಲವರು ಅನಾವಶ್ಯಕವಾಗಿ ಇದೆಲ್ಲಾ ಇಷ್ಯುಗಳನ್ನು ಕ್ರಿಯೇಟ್ ಮಾಡಲು ಈ ರೀತಿ ಬರೆಯಲಾಗುತ್ತಿದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಈ ವಿಚಾರದ ಬಗ್ಗೆ ಸುಪ್ರಿಯಾ ಅವರು ಏನಾದರು ಪ್ರತಿಕ್ರಿಯೆ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ಸುಪ್ರಿಯಾ ಅವರ ವಿಚಾರಕ್ಕೆ ಬರುವುದಾದರೆ, ಮೊದಲಿಗೆ ಸುಪ್ರಿಯಾ ಅವರು ವರುಣ್ ರೆಡ್ಡಿ ಅವರನ್ನು ಪ್ರೀತಿಸುತ್ತಿದ್ದರು, ಉಷಾ ಕಿರಣ್ ಮೂವೀಸ್ ಸಂಸ್ಥೆಯಿಂದ ತಯಾರಾದ ಇಷ್ಟಮ್ ಸಿನಿಮಾದ ನಾಯಕ ವರುಣ್ ರೆಡ್ಡಿ, ಇಬ್ಬರು ಮದುವೆ ಸಹ ಆದರೂ, ಆದರೆ ಕಾರಣಾಂತರಗಳಿಂದ ಕೆಲಸಮಯದ ನಂತರ ಇಬ್ಬರು ಬೇರೆಯಾದರು, ನಂತರ ವರುಣ್ ಸಾವನ್ನಪ್ಪಿದರು. ಬಹಳ ಸಮಯದ ನಂತರ ಗೂಢಾಚಾರಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ರೀಎಂಟ್ರಿ ಕೊಟ್ಟರು ಸುಪ್ರಿಯಾ, ಆ ಸಮಯದಲ್ಲಿ ನಟ ಅಡಿವಿ ಶೇಷ್ ಪರಿಚಯವಾಗಿ ಪ್ರೀತಿ ಶುರುವಾಗಿದೆ.

Leave A Reply

Your email address will not be published.