Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಬಿಗ್ ಬಾಸ್ 9 ರಲ್ಲಿ ಯಾರ್ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಗೊತ್ತೆ?? ಯಾವೆಲ್ಲ ಖ್ಯಾತ ಸೆಲೆಬ್ರೆಟಿಗಳು ಬರುತ್ತಿದ್ದಾರೆ ಗೊತ್ತೇ??

35

ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಮುಕ್ತಾಯವಾಗಿ, ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಲು ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 24ರಿಂದ ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಲಿದೆ. ಪ್ರೊಮೋಗಳು ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈಗಾಗಲೇ ಬಿಗ್ ಬಾಸ್ ಓಟಿಟಿ ಸೀಸನ್ ಇಂದ ನಾಲ್ಕು ಸ್ಪರ್ಧಿಗಳು ಟಿವಿ ಬಿಗ್ ಬಾಸ್ ಗೆ ಸೆಲೆಕ್ಟ್ ಆಗಿದ್ದು ಆಗಿದೆ. ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ ಸೆಲೆಕ್ಟ್ ಆಗಿದ್ದಾರೆ.

ಇದೀಗ ಈ ವರ್ಷದ ಹೊಸ ಕಾನ್ಸೆಪ್ಟ್ ಪ್ರಕಾರ ಹಳೆಯ ಬಿಗ್ ಬಾಸ್ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ. ಸೀಸನ್ 1 ರಿಂದ 8ನೇ ಸೀಸನ್ ವರೆಗೂ ಬಂದಿದ್ದ ಸ್ಪರ್ಧಿಗಳಲ್ಲಿ ಐವರು ಸ್ಪರ್ಧಿಗಳು ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಸೆಲೆಕ್ಟ್ ಆಗಲಿದ್ದಾರೆ. ಅವರಲ್ಲಿ ಅಕ್ಕ ಧಾರವಾಹಿ ಖ್ಯಾತಿಯ ಅನುಪಮಾ ಗೌಡ, ನಾಗಿಣಿ ಧಾರವಾಹಿ ಖ್ಯಾತಿಯ ದೀಪಿಕಾ ದಾಸ್, ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಶೋಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಇವರಷ್ಟೇ ಅಲ್ಲದೆ ಹೊಸ ಸ್ಪರ್ಧಿಗಳು ಸಹ ಮನೆಯೊಳಗೆ ಹೋಗಲಿದ್ದಾರೆ.

ನನ್ನರಸಿ ರಾಧೆ ಧಾರವಾಹಿ ಖ್ಯಾತಿಯ ನಟ ಅಭಿನವ್ ವಿಶ್ವನಾಥನ್, ಖ್ಯಾತ ಬೈಕ್ ರೇಸರ್ ಸಂದೇಶ್ ಅವರು, ಸೀತಾವಲ್ಲಭ ಧಾರವಾಹಿಯ ನಟಿ ಸುಪ್ರಿಯಾ ಸತ್ಯನಾರಾಯಣ ಅವರು, ಕಮಲಿ ಧಾರವಾಹಿ ಖ್ಯಾತಿಯ ನಟಿ ಅಮೂಲ್ಯ ಗೌಡ ಅವರು, ಹಾಗೂ ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋ ಇಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ನಟ ಪ್ರವೀಣ್ ಅವರು ಬಿಗ್ ಬಾಸ್ ಶೋಗೆ ಹೊಸ ಸ್ಪರ್ಧಿಗಳಾಗಿ ಬರುತ್ತಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ಶನಿವಾರ ಶೋ ಶುರುವಾಗುವ ವರೆಗೂ ಕಾಯಬೇಕಿದೆ

Leave A Reply

Your email address will not be published.