Neer Dose Karnataka
Take a fresh look at your lifestyle.

ಉದ್ಯಮವಾಗಲಿ ಅಥವಾ ಬಿಸಿನೆಸ್ ಆಗಲಿ ಯಶಸ್ಸು ಪಡೆಯಬೇಕು ಎಂದರೆ ಚಾಣಕ್ಯ ರವರ ಹೇಳಿರುವ ಈ ವಿಷಯಗಳನ್ನು ನೆನಪಿನಲ್ಲಿಡಿ. ಯಾವ್ಯಾವು ಗೊತ್ತೇ?

1,479

ಚಾಣಕ್ಯ ಅವರು ಬರೆದಿರುವ ನೀತಿಶಾಸ್ತ್ರ ಜೀವನ ನಡೆಸಲು ಬಹಳ ಸಹಾಯ ಮಾಡುತ್ತದೆ. ನಮಗೆ ಗೊತ್ತಿಲ್ಲದೆ ಇರುವ ಹಲವು ವಿಚಾರಗಳನ್ನು ನೀತಿಶಾಸ್ತ್ರದಲ್ಲಿ ಚಾಣಕ್ಯ ತಿಳಿಸಿದ್ದಾರೆ. ಅವರು ನೀತಿಶಾಸ್ತ್ರದಲ್ಲಿ ತಿಳಿಸಿರುವ ವಿಚಾರಗಳನ್ನು ಅನುಸರಿಸಿದರೆ ಜೀವನದಲ್ಲಿ ಬಹಳ ಸಂತೋಷವಾಗಿರುತ್ತಾರೆ. ಬಿಸಿನೆಸ್, ಉದ್ಯೋಹ, ವೈವಾಹಿಕ ಜೀವನದ ವಿಚಾರಗಳು ಇಂತಹ ಎಲ್ಲಾ ವಿಚಾರಗಳ ಬಗ್ಗೆ ಚಾಣಕ್ಯ ಅವರು ನೀತಿಶಾಸ್ತ್ರದಲ್ಲಿ ತಿಳಿಸಿದ್ದಾರೆ. ಉದ್ಯೋಗದಲ್ಲಿ ನೀವು ಯಶಸ್ಸು ಪಡೆಯಬೇಕಾದರೆ, ಅದಕ್ಕೆ ಸಂಬಂಧಿಸಿದ ಹಾಗೆ ಚಾಣಕ್ಯ ಶಾಸ್ತ್ರದಲ್ಲಿ ಏನು ಹೇಳಿದ್ದಾರೆ ಎಂದು ತಿಳಿಸುತ್ತೇವೆ ನೋಡಿ..

ರಿಸ್ಕ್ ತೆಗೆದುಕೊಳ್ಳಲು ಧೈರ್ಯವಿರಬೇಕು :- ರಿಸ್ಕ್ ತೆಗೆದುಕೊಳ್ಳಲು ಒಂದು ಸಾರಿ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಬಾರದು. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರಿಂದ ನಿಮಗೆ ಬಹಳ ಒಳ್ಳೆಯದು ನಡೆಯುತ್ತದೆ. ಎಂಥದ್ದೇ ಕಷ್ಟದ ಸಮಯದಲ್ಲೂ ಇಟ್ಟ ಹೆಜ್ಜೆ ಹಿಂದಕ್ಕೆ ಇಡಬಾರದು, ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ವೈಫಲ್ಯವಾದಾಗ ಅಧೈರ್ಯ ತೋರಿಸಬಾರದು. ನೀವು ನಿಮ್ಮ ಗುರಿಯ ಕಡೆಗೆ ಗಮನ ಹರಿಸಬೇಕು, ನಿಮ್ಮ ಗುರಿಯ ಬಗ್ಗೆ ತಿಳಿದುಕೊಳ್ಳಬೇಕು. ಅದರಿಂದ ನೀವು ನಿಮ್ಮ ಗುರಿಯಲ್ಲಿ ಯಶಸ್ಸು ಸಾಧಿಸಲು ಸುಲಭವಾಗಿ ಏರ್ಪಾಡು ಮಾಡಿಕೊಳ್ಳಬಹುದು. ಎಲ್ಲವನ್ನು ಪ್ಲಾನ್ ಮಾಡಿ ಶುರು ಮಾಡಿದರೆ, ಸುಲಭವಾಗಿ ನಡೆಯುತ್ತದೆ.

ಕಷ್ಟಪಟ್ಟು ಕೆಲಸ ಮಾಡಬೇಕು :- ಚಾಣಕ್ಯರು ಹೇಳಿರುವ ಪ್ರಕಾರ, ಮನುಷ್ಯ ಜೀವನದಲ್ಲಿ ವಿಜಯ ಸಾಧಿಸಬೇಕಾದರೆ ತಮ್ಮ ಕಷ್ಟಗಳನ್ನು ಕೀಳಾಗಿ ಕಾಣಬಾರದು. ಕಠಿಣ ಶ್ರಮಪಟ್ಟು ಕ್ರಮಶಿಕ್ಷಣದಲ್ಲಿ ಇರಬೇಕು. ಇದರಿಂದಾಗಿ ನಿಮ್ಮ ಕೆಲಸಗಳನ್ನು ಕೂಡ ಸರಿಯಾದ ಸಮಯಕ್ಕೆ ಮುಗಿಸಿಕೊಳ್ಳುತ್ತೀರಿ.

Leave A Reply

Your email address will not be published.