Neer Dose Karnataka
Take a fresh look at your lifestyle.

ಪೋಷಕ ಪಾತ್ರದಲ್ಲಿ ಸಭ್ಯತೆಯಿಂದ ಕಾಣಿಸಿಕೊಳ್ಳುವ ಜಯಸುಧಾ ರವರ ತೆರೆ ಹಿಂದಿನ ಜೀವನ ಹೇಗಿದೆ ಗೊತ್ತೇ? ಹೇಗಿದೆ ಗೊತ್ತೇ ಕಹಿ ಜೀವನ??

ನಟಿ ಜಯಸುಧಾ ತೆಲುಗು ಚಿತ್ರರಂಗದ ಸ್ಟಾರ್ ನಾಯಕಿಯರಲ್ಲಿ ಒಬ್ಬರು. ಆಗಿನ ಕಾಲದಲ್ಲಿ ಸಹಜ ನಟಿಯಾಗಿ ಜಯಸುಧಾ ಅವರಿಗೆ ಒಳ್ಳೆಯ ಮನ್ನಣೆ ಸಿಕ್ಕಿತ್ತು. ಆ ಸಮಯದಲ್ಲಿ ನಟಿ ಜಯಸುಧಾ ಎಲ್ಲಾ ಸ್ಟಾರ್ ಹೀರೋಗಳ ಜೊತೆಯಾಗಿ ನಟಿಸಿದ್ದರು. ಪಂದಂತಿ ಕಾಪುರಂ ಚಿತ್ರದ ಮೂಲಕ ಜಯಸುಧಾ ಅವರು ತೆಲುಗು ಚಿತ್ರರಂಗಕ್ಕೆ ಪರಿಚಯವಾದರು, 300ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲು ನಟಿಸಿದ್ದಾರೆ. ಜಯಸುಧಾ ಅವರು ನಿರ್ದೇಶಕ ನಾರಾಯಣ ರಾವ್ ಅವರ 27 ಚಿತ್ರಗಳಲ್ಲಿ ನಟಿಸಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಾದೆಂದ್ಲ ಭಾಸ್ಕರ ರಾವ್ ಅವರ ಸಂಬಂಧಿ ರಾಜೇಂದ್ರ ಪ್ರಸಾದ್ ಅವರನ್ನು ಜಯಸುಧಾ ವಿವಾಹವಾಗಿದ್ದರು. ಆದರೆ ಇಬ್ಬರ ನಡುವಿನ ಜಗಳದಿಂದ ಬೇರ್ಪಟ್ಟರು. ಜಯಸುಧಾ ಅವರು 1985ರಲ್ಲಿ ಮುಂಬೈ ಮೂಲದ ನಿತಿನ್ ಕಪೂರ್ ಅವರೊಡನೆ ಎರಡನೇ ಮದುವೆಯಾದರು.

ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2001ರಲ್ಲಿ ಜಯಸುಧಾ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. 2009ರಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸಿಕಂದರಾಬಾದ್ ಶಾಸಕಿಯಾಗಿ ಗೆದ್ದು ಜನಸೇವೆ ಮಾಡಿದರು. ಜಯಸುಧಾ ಅವರ ಅಕ್ಕ ಖ್ಯಾತ ನಟಿ ವಿಜಯನಿರ್ಮಲಾ, ವಿಜಯನಿರ್ಮಲಾ ಅವರು ಜಯಸುಧಾ ಅವರ ತಂದೆಯನ್ನು ಒಪ್ಪಿಸಿ ಚಿತ್ರರಂಗಕ್ಕೆ ಕರೆತಂದರು. ಪಂಜಾಬಿ ನಿರ್ಮಾಪಕ ನಿತಿನ್ ಕಪೂರ್ ಅವರಿಗೆ ಜಯಸುಧಾ ಪರಿಚಯವಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರವಿದೆ. ಆ ಕಾಲದಲ್ಲಿ ಮದ್ರಾಸಿನಲ್ಲಿ ತೆಲುಗು ಸಿನಿಮಾಗಳು ತಯಾರಾಗುತ್ತಿದ್ದವು. ಆಗ ನಿರ್ದೇಶಕ ದಾಸರಿ ನಾರಾಯಣ ಅವರು ತೆಲುಗು, ತಮಿಳು, ಹಿಂದಿ ಸಿನಿಮಾಗಳನ್ನು ಮಾಡುತ್ತಿದ್ದರು. ಈ ನಿರ್ದೇಶಕರು ಮಾಡಿದ ಸಿನಿಮಾಗಳಲ್ಲಿ ಜಿತೇಂದ್ರ ಅವರು ನಾಯಕನಾಗಿ ನಟಿಸುತ್ತಿದ್ದರು.

ಅವರ ಸಹೋದರ ನಿತಿನ್ ಕಪೂರ್ ಅವರು ಮದ್ರಾಸ್‌ನಲ್ಲಿನ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು, ಜಿತೇಂದ್ರ ಅವರು ತಮ್ಮ ಜವಾಬ್ದಾರಿಗಳನ್ನು ನಿತಿನ್ ಕಪೂರ್‌ ಅವರಿಗೆ ನೀಡಿದರು. ಕೆಲಸ ನೋಡಿಕೊಳ್ಳಲು ಶುರುಮಾಡಿ, ಒಂದು ಮನೆ ತೆಗೆದುಕೊಂಡರು ನಿತಿನ್. ಬಳಿಕ ನಿತಿನ್ ಅವರಿಗೆ ಜಯಸುಧಾ ಅವರ ಪರಿಚಯವಾಯಿತು. ನಿತಿನ್ ಕುಮಾರ್ ತೆಗೆದುಕೊಂಡು ಉಳಿದುಕೊಂಡಿದ್ದ ಮನೆಯ ಪಕ್ಕದಲ್ಲೇ ಜಯಸುಧಾ ಅವರ ಮನೆಯೂ ಇತ್ತು. ಪರಿಚಯದ ನಂತರ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಯಿತು. ಇಬ್ಬರಿಗು ಕ್ರಿಕೆಟ್ ತುಂಬಾ ಇಷ್ಟವಾಗಿತ್ತು.ನಿತಿನ್ ಅವರನ್ನು ಮೊದಲ ಸಲ ನೋಡಿದಾಗ ಯಾವುದೋ ಅಪರಿಚಿತ ಸಂಬಂಧ ಅನಿಸಿತು ಎನ್ನುತ್ತಾರೆ ಜಯಸುಧಾ. ಜಯಸುಧಾ ಅವರು ಮೊದಲ ಪತಿ ಅಗಲಿದ ನಂತರ ಹಲವು ಸಂಕಷ್ಟಗಳನ್ನು ಎದುರಿಸಿದ್ದರು. ಆದರೆ ಆ ಕಷ್ಟಗಳ ಬಗ್ಗೆ ಹೆಚ್ಚಿನ ವಿಷಯಗಳನ್ನು ಬಹಿರಂಗಪಡಿಸಲಿಲ್ಲ ನಟಿ ಜಯಸುಧಾ. ಈಗ ಇವರ ಎರಡು ಮದುವೆ ವಿಚಾರಗಳು ವೈರಲ್ ಆಗಿದೆ.

Comments are closed.