Neer Dose Karnataka
Take a fresh look at your lifestyle.

ಮುಗಿಯಿತು ಡಾನ್ಸ್ ಕರ್ನಾಟಕ ಡಾನ್ಸ್. ಅಸಲಿಗೆ ನಿಜವಾಗಲೂ ಅಪ್ಪು ಟ್ರೋಫಿ ಸೇರುತ್ತಿರುವುದು ಯಾರ ಕೈ ಗೆ ಗೊತ್ತೇ??

254

ಜೀಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕಿರುತೆರೆ ವೀಕ್ಷಕರಿಗೆ ಬಹಳ ಮನರಂಜನೆ ಕೊಡುತ್ತಾ ಬಂದಿದೆ. 5 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ ಡಿಕೆಡಿ ಶೋ ಇದೀಗ 6ನೇ ಸೀಸನ್ ಸಹ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಡಿಕೆಡಿ ಶೋ ಹಿಂದೆಂಗಿಂತಲು ಈ ಬಾರಿ ಬಹಳ ವಿಶೇಷವಾಗಿತ್ತು, ಆದರೆ ಕಾರಣ ಕರುನಾಡ ಚಕ್ರವರ್ತಿ ಡಾ.ಶಿವ ರಾಜ್ ಕುಮಾರ್ ಅವರು ವಿಶೇಷ ಮಹಾಗುರುವಾಗಿ ಜಡ್ಜ್ ಸ್ಥಾನವನ್ನು ಅಲಂಕರಿಸಿದ್ದರು. ಇವರ ಜೊತೆಗೆ ಚಿನ್ನಿ ಪ್ರಕಾಶ್ ಮಾಸ್ಟರ್, ರಕ್ಷಿತಾ ಪ್ರೇಮ್ ಹಾಗೂ ಅರ್ಜುನ್ ಜನ್ಯ ಸಹ ಇದ್ದರು..

ಇನ್ನು ಈ ಶೋಗೆ ಬಂದ ಸ್ಪರ್ಧಿಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕರ್ನಾಟಕದ ಮೂಲೆ ಮೂಲಗಳಿಂದ ಹುಡುಕಿ ತಂದಿರುವ ಪ್ರತಿಭೆಗಳು ಇವರೆಲ್ಲರು. ಒಬ್ಬೊಬ್ಬರ ಡ್ಯಾನ್ಸಿಂಗ್ ಶೈಲಿಗಳು ಸಹ ಅಮೇಜಿಂಗ್ ಆಗಿರುತ್ತದೆ, ಜಡ್ಜ್ ಗಳನ್ನು ಮೂಲವಿಸ್ಮಿತರನ್ನಾಗಿ ಮಾಡುತ್ತದೆ ಎಂದರೆ ತಪ್ಪಾಗುವುದಿಲ್ಲ. ಮಕ್ಕಳು ಅಷ್ಟು ಸಾಹಸಮಯವಾಗಿ ಡ್ಯಾನ್ಸ್ ಮಾಡುವಾಗ ಶಿವಣ್ಣ ಅವರೆ ಶಾಕ್ ಆಗಿ ವೇದಿಕೆ ಮೇಲೆ ಬಂದಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಈಗ ಡಿಕೆಡಿ ಶೋ ಫೈನಲ್ಸ್ ಹಂತ ತಲುಪಿದ್ದು, ಈ ಬಾರಿ ಡಿಕೆಡಿ ಶೋ ಟ್ರೋಫಿ ಸಹ ಬಹಳ ಸ್ಪೆಷಲ್. ಅಪ್ಪು ಅವರು ಡ್ಯಾನ್ಸ್ ಮಾಡುತ್ತಿರುವ ಆಕಾರದಲ್ಲಿರುವ ಪವರ್ ಟ್ರೋಫಿ ಇದಾಗಿದೆ.

ಡಿಕೆಡಿ ಶೋ ವಿನ್ನರ್ ಗೆ ಈ ಟ್ರೋಫಿ ಸಿಗಲಿದೆ, ಡಿಕೆಡಿ ಫಿನಾಲೆಗೆ7 ಜೋಡಿಗಳು ತಲುಪಿದ್ದು, ಅವರಲ್ಲಿ ಒಬ್ಬ ಜೋಡಿಗೆ ಪವರ್ ಟ್ರೋಫಿ ಸಿಗಲಿದೆ. ಅದರಲ್ಲೂ ಶಿವಣ್ಣ ಅವರ ಕೈಯಿಂದ ಟ್ರೋಫಿ ಪಡೆಯುವುದು ಅದೃಷ್ಟವೆ ಸರಿ. ಡಿಕೆಡಿ ಶೋ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ಕನಕಪುರದ ಸರ್ಕಾರಿ ಡಿಗ್ರಿ ಕಾಲೇಜ್ ಗ್ರೌಂಡ್ ನಲ್ಲಿ ಸೆಪ್ಟೆಂಬರ್ 21ರಂದು ನಡೆಯಲಿದ್ದು, ಶನಿವಾರ ಸಂಚಿಕೆಯ ಪ್ರಸಾರವಾಗಲಿದೆ. ಈಗಾಗಲೇ ಈ ಶೋ ವಿನ್ನರ್ ಆಗುವುದು ಯಾರು ಎನ್ನುವ ಕುತೂಹಲ ಶುರುವಾಗಿದ್ದು, ಪವರ್ ಟ್ರೋಫಿ ಯಾರ ಪಾಲಾಗುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.