Neer Dose Karnataka
Take a fresh look at your lifestyle.

ಕಬ್ಜ ಟ್ರೈಲರ್ ನೋಡಿದ ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ ಹೇಳಿದ್ದೇನು ಗೊತ್ತೆ?? ಉಪ್ಪಿ ಪಾನ್ ಇಂಡಿಯಾ ಸಿನಿಮಾ ಕುರಿತು ಕೊಟ್ಟ ಷಾಕಿಂಗ್ ಹೇಳಿಕೆ ಏನು ಗೊತ್ತೇ??

25

ಕನ್ನಡ ಚಿತ್ರರಂಗ ಈ ವರ್ಷ ದೊಡ್ಡ ಮಟ್ಟದ ಸಿನಿಮಾಗಳನ್ನು ಭಾರತ ಚಿತ್ರರಂಗಕ್ಕೆ ನೀಡಿದೆ. ಜೇಮ್ಸ್, ಕೆಜಿಎಫ್2, ಚಾರ್ಲಿ, ವಿಕ್ರಾಂತ್ ರೋಣ ಹೀಗೆ ಬಾಕ್ಸ್ ಆಫೀಸ್ ಶೇಕ್ ಮಾಡುತ್ತಿರುವ ಸಾಲು ಸಾಲು ಸಿನಿಮಾಗಳು ಬರುತ್ತಲೇ ಇದೆ. ಇದೀಗ ಕನ್ನಡ ಚಿತ್ರರಂಗದಿಂದ ಮತ್ತೊಂದು ದೊಡ್ಡ ಸಿನಿಮಾ ತಯಾರಾಗುತ್ತಿದೆ. ಅದು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆಯಾಗಿ ಅಭಿನಯಿಸಿರುವ ಕಬ್ಜ ಸಿನಿಮಾ ಆಗಿದೆ.

ಈ ಸಿನಿಮಾ ಆರಂಭವಾದಾಗಿನಿಂದಲೂ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಸುದೀಪ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಶ್ರೀಯಾ ಸರನ್ ಸಿನಿಮಾಗೆ ನಾಯಕಿಯಾಗಿದ್ದಾರೆ. ಈ ಸಿನಿಮಾದ ಟೀಸರ್ ಸೆಪ್ಟೆಂಬರ್ 17ರಂದು ಬಿಡುಗಡೆ ಆಯಿತು. ಬೆಂಗಳೂರಿನಲ್ಲಿ ದೊಡ್ಡದಾಗಿ ಕಬ್ಜ ಟೀಸರ್ ಲಾಂಚ್ ಮಾಡಲಾಯಿತು. ಕಬ್ಜ ಸಿನಿಮಾ ಟೀಸರ್ ಸಿನಿಪ್ರಿಯರ ಮೆಚ್ಚುಗೆಯಿಂದ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಈ ಸಿನಿಮಾ ಟೀಸರ್ ಲಾಂಚ್ ಗೆ ವಿಶೇಷ ಅತಿಥಿಯಾಗಿ ತೆಲುಗು ಚಿತ್ರರಂಗದ ಖ್ಯಾತ ನಟ ರಾಣಾ ದಗ್ಗುಬಾಟಿ ಬಂದಿದ್ದರು. ಕಬ್ಜ ಟೀಸರ್ ನೋಡಿ ಪ್ಯಾನ್ ಇಂಡಿಯಾ ಸ್ಟಾರ್ ರಾಣಾ ಹೇಳಿದ್ದೇನು ಗೊತ್ತಾ? ಉಪೇಂದ್ರ ಅವರ ಬಗ್ಗೆ ನಟ ರಾಣಾ ಹೇಳಿದ್ದೇನು? ತಿಳಿಸುತ್ತೇವೆ ನೋಡಿ..

“ಈ ಸಮಾರಂಭದಲ್ಲಿ ಉಪೇಂದ್ರ ಸರ್ ಅವರ ಮುಂದೆ ನಿಲ್ಲೋದಕ್ಕೆ ತುಂಬಾ ಹೆಮ್ಮೆ ಆಗ್ತಾ ಇದೆ. ಸರ್ ಕಲಾವಿದರಾಗಿ ಈ ದೇಶದಲ್ಲಿ ಯಾವುದಾದರು ಹೀರೋ ಪಾತ್ರಗಳ ರಚನೆಯನ್ನ ಅರ್ಥ ಮಾಡಿಕೊಂಡಿದ್ದರೆ ಅದು ನಿಮ್ಮ ಸಿನಿಮಾಗಳನ್ನು ನೋಡಿದ ಮೇಲೆ ಮಾತ್ರ. ಈಗ ಎಲ್ಲರೂ ಪ್ಯಾನ್ ಇಂಡಿಯಾ ಅದು ಇದು ಅಂತಿದ್ದಾರೆ, ನಾನು 90ರ ದಶಕದಲ್ಲೇ ಉಪೇಂದ್ರ ಅವರ ಸಿನಿಮಾಗಳ ತೆಲುಗು ಡಬ್ ವರ್ಷನ್ ನೋಡ್ತಾ ಇದ್ದೆ. ಈ ಟೀಸರ್ ನೋಡಿ ತುಂಬಾ ಹೆಮ್ಮೆ ಆಗ್ತಿದೆ, ಚಂದ್ರು ಅವರು ಮತ್ತು ಅವರ ಟೀಮ್. ಸುಂದರವಾದ ಸಿನಿಮಾಗಳ ಮೂಲಕ ಕನ್ನಡ ಈಗ ತುಂಬಾ ಮುಂದಕ್ಕೆ ಬಂದಿದೆ. ಇನ್ನು ಹೆಚ್ಚು ಸಿನಿಮಾಗಳು ಇದೆ ರೀತಿ ನಮ್ಮ ದೇಶ ಹೆಮ್ಮೆ ಪಡುವ ಹಾಗೆ ಬರುತ್ತದೆ, ಕಬ್ಜ ಕೂಡ ಅಂಥ ಸಿನಿಮಾಗಳಲ್ಲಿ ಒಂದಾಗಿರುತ್ತದೆ…” ಎಂದು ಕಬ್ಜ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ನಟ ರಾಣಾ ದಗ್ಗುಬಾಟಿ.

Leave A Reply

Your email address will not be published.