Neer Dose Karnataka
Take a fresh look at your lifestyle.

ನಟ ದೇವರಾಜ್ ಹಟ್ಟುಹಬ್ಬಕ್ಕೆ ಸರ್ಪ್ರೈಸ್ ಕೊಟ್ಟ ಡಿಬಾಸ್ ದರ್ಶನ್! ಭಾವುಕರಾದ ದೇವರಾಜ್. ಡಿ ಬಾಸ್ ಕೊಟ್ಟಿದ್ದೇನು ಗೊತ್ತೇ??

5,309

ಚಂದನವನದ ಖ್ಯಾತ ಹಿರಿಯ ನಟರಲ್ಲಿ ಒಬ್ಬರು ದೇವರಾಜ್. 80ರ ದಶಕದಿಂದ ಈಗಿನವರೆಗೂ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ, ವಿಲ್ಲನ್ ಆಗಿ ಮತ್ತು ಹೀರೋ ಆಗಿ ಸಹ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ದೇವರಾಜ್ ಅವರು ಬಹಳ ಕಷ್ಟಪಟ್ಟು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬೆಳೆದು ಬಂದ ನಟ ಆಗಿದ್ದಾರೆ. ಇವರ ಮಕ್ಕಳಾದ ಪ್ರಜ್ವಲ್ ದೇವರಾಜ್ ಹಾಗೂ ಪ್ರಣಾಮ್ ದೇವರಾಜ್ ಸಹ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ..

ಇತ್ತೀಚೆಗೆ ನಟ ದೇವರಾಜ್ ಅವರ ಹುಟ್ಟುಹಬ್ಬ ಇತ್ತು, 63ನೇ ವರ್ಷಕ್ಕೆ ಕಾಲಿಟ್ಟರು ನಟ ದೇವರಾಜ್. ಈ ಹುಟ್ಟುಹಬ್ಬವನ್ನು ಬಹಳ ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಲಾಗಿದೆ. ದೇವರಾಜ್ ಅವರ ಹುಟ್ಟುಹಬ್ಬವನ್ನು ಅವರ ಇಬ್ಬರು ಮಕ್ಕಳು ಹಾಗೂ ಕುಟುಂಬ ಸುಂದರವಾಗಿ ಆಚರಿಸಿದರು. ಆದರೆ ಜೊತೆಗೆ ದೇವರಾಜ್ ಅವರ ಕುಟುಂಬದ ಜೊತೆಗೆ ಆತ್ಮೀಯವಾಗಿರುವ ನಟ ದರ್ಶನ್ ಅವರು ದೇವರಾಜ್ ಅವರ ಹುಟ್ಟುಹಬ್ಬಕ್ಕೆ ಒಂದು ಸುಂದರವಾದ ಸರ್ಪ್ರೈಸ್ ನೀಡಿದ್ದಾರೆ.

ದರ್ಶನ್ ಅವರು ನೀಡಿರುವ ಸರ್ಪ್ರೈಸ್ ಏನು ಅಂದರೆ, ದೇವರಾಜ್ ಅವರ ಹುಟ್ಟುಹಬ್ಬಕ್ಕೆ ನಟ ದರ್ಶನ್ ಅವರು ಬೆಂಗಳೂರು ಹೊರವಲಯಕ್ಕೆ ಹತ್ತಿರದಲ್ಲಿರುವ ಕಡೆ ಸರ್ಪ್ರೈಸ್ ಪಾರ್ಟಿ ಒಂದನ್ನು ಅರೇಂಜ್ ಮಾಡಿದ್ದಾರೆ. ದೇವರಾಜ್ ಅವರು, ಹಾಗೂ ಅವರ ಪತ್ನಿ, ಮಕ್ಕಳಾದ ಪ್ರಜ್ವಲ್ ಹಾಗೂ ಪ್ರಣಾಮ್, ಸೊಸೆ ರಾಗಿಣಿ ಚಂದ್ರನ್ ಹಾಗೂ ದರ್ಶನ್ ಅವರ ಆಪ್ತ ಸ್ನೇಹಿತರ ಬಳಗ ಸಹ ಈ ಪಾರ್ಟಿಯಲ್ಲಿ ಪಾಲ್ಗೊಂಡಿತ್ತು ಎನ್ನಲಾಗಿದೆ. ಬಹಳ ಹಿಂದಿನ ಸಮಯದಿಂದಲೂ ದರ್ಶನ್ ಅವರು ದೇವರಾಜ್ ಅವರ ಕುಟುಂಬಕ್ಕೆ ಬಹಳ ಆಪ್ತರಾಗಿದ್ದು, ಈಗ ಹಿರಿಯನಟನ ಹುಟ್ಟುಹಬ್ಬಕ್ಕೆ ಸುಂದರವಾದ ಸರ್ಪ್ರೈಸ್ ನೀಡಿದ್ದಾರೆ.

Leave A Reply

Your email address will not be published.