ಕೊಹ್ಲಿ, ದಿನೇಶ್, ಪಾಂಡ್ಯ ಅಲ್ಲ, ಭಾರತ ವಿಶ್ವಕಪ್ ಗೆಲ್ಲಬೇಕು ಎಂದರೆ ಆತನೊಬ್ಬ ತಂಡದಲ್ಲೇ ಇರಲೇಬೇಕು ಎಂದ ಮನೋಜ್ ತಿವಾರಿ. ಯಾರಂತೆ ಗೊತ್ತೇ??
ಭಾರತ ತಂಡದ ಯುವ ಆಟಗಾರರಲ್ಲಿ ಒಬ್ಬರಾದವರು ರಿಷಬ್ ಪಂತ್, ಇವರು ಹಲವು ಬಾರಿ ಭಾರತ ತಂಡದ ಪರವಾಗಿ ಆಡಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್ ಹಾಗೂ ಏಕದಿನ ಸರಣಿಗಳಲ್ಲಿ ಅದ್ಭುತವಾದ ಪ್ರದರ್ಶನ ನೀಡುವ ಪಂತ್ ಅವರು ಟಿ20 ಪಂದ್ಯಗಳಲ್ಲಿ ನಿರೀಕ್ಷೆಯ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಭಾರತ ತಂಡವು ಪಂತ್ ಅವರ ಮೇಲೆ ನಂಬಿಕೆ ಇಟ್ಟು ಸಾಕಷ್ಟು ಅವಕಾಶಗಳನ್ನು ನೀಡಿತು. ಆದರೆ ಪಂತ್ ಅವರು ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ.
ಏಷ್ಯಾಕಪ್ ಸರಣಿಯಲ್ಲಿ 4 ಪಂದ್ಯಗಳಲ್ಲಿ 50 ರನ್ ಗಳಿಸಿ ವೈಫಲ್ಯ ಅನುಭವಿಸಿದರು. ಇದುವರೆಗೂ 58 ಟಿ20 ಪಂದ್ಯಗಳನ್ನು ಆಡಿರುವ ಪಂತ್ ಅವರು 934 ರನ್ ಗಳಿಸಿದ್ದಾರೆ, ಅದರಲ್ಲಿ 3 ಅರ್ಧಶತಕ ಇದೆ. ಇನ್ನುಳಿದ ಎರಡು ಫಾರ್ಮೇಟ್ ಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಪಂತ್ ಅವರು ಟಿ20 ಪಂದ್ಯಗಳಲ್ಲಿ ಹಿನ್ನಡೆಯಲ್ಲಿದ್ದಾರೆ. ವಿಶ್ವಕಪ್ ಗಿಂತ ಮೊದಲು ಭಾರತ ತಂಡ ಆಡಲು ಹೆಚ್ಚು ಪಂದ್ಯಗಳು ಇಲ್ಲ. ಪ್ರಸ್ತುತ ಭಾರತ ವರ್ಸಸ್ ಅಸ್ಟ್ರೇಲಿಯಾ ಟಿ20 ಸರಣಿ ಪಂದ್ಯಗಳು ನಡೆಯುತ್ತಿವೆ. ಅದರಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಪಂತ್ ಬದಲಾಗಿ ಆಯ್ಕೆಮಾಡಿಕೊಳ್ಳಲಾಗಿದೆ. ಇನ್ನು ಸೌತ್ ಆಫ್ರಿಕಾ ತಂಡದ ವಿರುದ್ಧ ಸಹ ಪಂದ್ಯಗಳು ನಡೆಯಲಿದೆ.

ಏಷ್ಯಾಕಪ್ ನಲ್ಲಿ ಒಂದು ಸಾರಿ ರಿಷಬ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಇಬ್ಬರನ್ನು ಸಹ ಕಣಕ್ಕೆ ಇಳಿಸಲಾಗಿತ್ತು, ಆದರೆ ಈಗ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹೀಗಿರುವಾಗ, ಮಾಜಿ ಆಟಗಾರ ಮನೋಜ್ ತಿವಾರಿ ಅವರು ರಿಷಬ್ ಪಂತ್ ಅವರಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದಾರೆ, ರಿಷಬ್ ಪಂತ್ ಅವರ ಫೋಟೋ ಟ್ವೀಟ್ ಮಾಡಿ, “ಮ್ಯಾಚ್ ವಿನ್ನರ್ ಆಟಗಾರ ರಿಷಬ್ ಪಂತ್ ತಂಡದಲ್ಲಿ ಇರುವಾಗ, ಅವರನ್ನು ಆಡಿಸಲೇಬೇಕು. ಭಾರತ ತಂಡ ವರ್ಲ್ಡ್ ಕಪ್ ಗೆಲ್ಲಬೇಕೆಂದರೆ ರಿಷಬ್ ಪಂತ್ ಪ್ಲೇಯಿಂಗ್ 11 ನಲ್ಲಿ ಇನ್ನುಮುಂದೆ ಇರಲೇಬೇಕು..” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
When u have a match winner like him in your option then make him play at any cost. If India has to win the World Cup then he has to be in the playing eleven for me from now onwards 👍 #RishabhPant #IndianCricketTeam #INDvsAUS pic.twitter.com/gLJwYtzSI7
— MANOJ TIWARY (@tiwarymanoj) September 20, 2022