ಕೇವಲ ಹತ್ತು ಸಾವಿರ ರೂಪಾಯಿ ಹೂಡಿಕೆ ಮಾಡಿ, ಲಕ್ಷ ಲಕ್ಷ ಗಳಿಸುವ ಬಿಸಿನೆಸ್ ಐಡಿಯಾ ಏನು ಗೊತ್ತೇ?? ನೀವೇನು ಮಾಡ್ಬೇಕು ಗೊತ್ತೇ??
ಕೋವಿಡ್ ಸೋಂಕು ನಮ್ಮ ದೇಶಕ್ಕೆ ಬಂದಾಗಿನಿಂದ ಲಕ್ಷಾಂತರ ಜನರು ಕೆಲಸ ಕಳೆದುಕೊಂಡರು. ಆ ಸಮಯದಲ್ಲಿ ಏನು ಮಾಡಬೇಕೆಂದು ತೋಚದೆ ಕೆಲವರು ಬ್ಯುಸಿನೆಸ್ ಮಾಡಬೇಕು ಎಂದು ಸಹ ಪ್ಲಾನ್ ಮಾಡಿಕೊಂಡಿದ್ದಾರೆ. ಇಂದು ಸಹಜ ಸ್ಥಿತಿಗೆ ಎಲ್ಲವೂ ಮರಳಿದ್ದರು ಸಹ, ಜನರಿಗೆ ಬ್ಯುಸಿನೆಸ್ ಮಾಡಬೇಕು ಎನ್ನುವ ಮೈಂಡ್ ಸೆಟ್ ಕಡಿಮೆ ಆಗಿಲ್ಲ. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಸಂಪಾದನೆ ಮಾಡಬೇಕು ಎಲ್ಲರೂ ಬಯಸುತ್ತಾರೆ. ಅಂಥವರಿಗೆ ಇಂದು ಒಂದು ಬ್ಯುಸಿನೆಸ್ ಐಡಿಯಾ ನೀಡಲಿದ್ದೇವೆ. ಇದು ಉಪ್ಪಿನಕಾಯಿ ಬ್ಯುಸಿನೆಸ್. ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡುವುದು. ನಮ್ಮ ದೇಶದಲ್ಲಿ ಉಪ್ಪಿನಕಾಯಿ ಸೇವಿಸುವವರ ಸಂಖ್ಯೆ ದೊಡ್ಡದು.
ಎಲ್ಲಾ ಸಮಯದಲ್ಲೂ ಉಪ್ಪಿಕಾಯಿಗೆ ಬೇಡಿಕೆ ಇರುತ್ತದೆ, ವಿವಿಧವಾದ ಉಪ್ಪಿನಕಾಯಿ ಸೇವಿಸಲು ಜನರಿಗು ಸಹ ಆಸಕ್ತಿ ಹೆಚ್ಚು. ಹಾಗಾಗಿ ಉಪ್ಪಿನಕಾಯಿ ಬ್ಯುಸಿನೆಸ್ ನಿಮಗೆ ಲಾಭ ತರುವುದು ಗ್ಯಾರಂಟಿ. ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಲು ನಿಮಗೆ ಹೆಚ್ಚು ಹಣ ಖರ್ಚಾಗುವುದಿಲ್ಲ. 10,000 ರೂಪಾಯಿ ಹೂಡಿಕೆಯಿಂದ ಶುರು ಮಾಡಿ, ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಹಣಗಳಿಕೆ ಮಾಡಬಹುದು. ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಲು, 900ಅಡಿ ಚದರ ವಿಸ್ತೀರ್ಣ ಇರುವಷ್ಟು ಜಾಗ ಬೇಕಾಗುತ್ತದೆ. ಉಪ್ಪಿನಕಾಯಿ ತಯಾರಿಸಿ, ಒಣಗಿಸಲು ಇಷ್ಟು ವಿಶಾಲವಾದ ಜಾಗ ಅಗತ್ಯವಿದೆ. ಉಪ್ಪಿನಕಾಯಿ ತಯಾರಿಕೆಯ ಬಗ್ಗೆ ಗಮನಹರಿಸಬೇಕಾದ ಕೆಲವು ವಿಷಯಗಳನ್ನು ಈಗ ತಿಳಿಸುತ್ತೇವೆ..

ಉಪ್ಪಿನಕಾಯಿಯನ್ನು ಬಹಳ ಜಾಗರೂಕವಾಗಿ ಹಾಗೂ ಚೆನ್ನಾಗಿ ತಯಾರಿಸಬೇಕು, ಶುಚಿಯಾಗಿ ತಯಾರಿಸುವುದರಿಂದ ಅವುಗಳು ಬೇಗ ಹಾಳಾಗುವುದಿಲ್ಲ. ನೀವು ತಯಾರಿಸಿದ ಉಪ್ಪಿನಕಾಯಿಯನ್ನು ಗ್ರಾಹಕರಿಗೆ ಇಷ್ಟ ಆಗುವ ರೀತಿಯಲ್ಲಿ ಮಾರುಕಟ್ಟೆಗೆ ನೀಡಬೇಕು, ಇದರಿಂದ ಹೆಚ್ಚಿನ ಗ್ರಾಹಕರಿಗೆ ನೀವು ತಯಾರಿಸಿರುವ ಉಪ್ಪಿನಕಾಯಿ ಬಗ್ಗೆ ಗೊತ್ತಾಗುತ್ತದೆ, ಹಾಗೂ ಹೆಚ್ಚಿನ ಜನರು ಕೊಂಡುಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ ಕಾಲಕ್ರಮೇಣ ನಿಮ್ಮ ಬ್ಯುಸಿನೆಸ್ ಹೆಚ್ಚಿನ ಜನರನ್ನು ತಲುಪುತ್ತದೆ, ಹಾಗೂ ನೀವು ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಸಂಪಾದಿಸಬಹುದು. ವಾರ್ಷಿಕವಾಗಿ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದು. ಉಪ್ಪಿನಕಾಯಿ ಬ್ಯುಸಿನೆಸ್ ಶುರು ಮಾಡಲು, ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಇಂದ ಲೈಸೆನ್ಸ್ ಪಡೆದಿರಬೇಕಾಗುತ್ತದೆ.