Neer Dose Karnataka
Take a fresh look at your lifestyle.

ಬಿಡುಗಡೆಯಾಯ್ತು ಭಾರತದ ಟಾಪ್ 10 ಹೀರೋಗಳ ಪಟ್ಟಿ; ಕನ್ನಡವರು ಯಾರ್ಯಾರು ಸ್ಥಾನ ಪಡೆದಿದ್ದಾರೆ ಗೊತ್ತೇ?? ಯಶ್ ರವರಿಗೆ ಎಷ್ಟನೇ ಸ್ಥಾನ ಗೊತ್ತೇ??

420

ನಮ್ಮ ದಕ್ಷಿಣ ಭಾರತ ಕಲಾವಿದರು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಡುತ್ತಿದ್ದಾರೆ. ಇದೀಗ ಓರ್ಮ್ಯಾಕ್ಸ್ ಸಂಸ್ಥೆಯು ನಡೆಸಿರುವ ಸಮೀಕ್ಷೆಯ ಪ್ರಕಾರ, ಭಾರತದ ಟಾಪ್ 10 ಮೋಸ್ಟ್ ಪಾಪ್ಯುಲರ್ ನಟರ ಲಿಸ್ಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ನಮ್ಮ ದಕ್ಷಿಣ ಭಾರತದ ನಟರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲಿ ಯಾವ ನಟರ ಎಷ್ಟರಲ್ಲಿದೆ, ಕನ್ನಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ, ಯಶ್ ಅವರ ಸ್ಥಾನ್ ಎಷ್ಟು, ಎಲ್ಲವನ್ನು ತಿಳಿಸುತ್ತೇವೆ ನೋಡಿ..

ಓರ್ಮ್ಯಾಕ್ಸ್ ಸಮೀಕ್ಷೆಯ ಪ್ರಕಾರ, ಮೋಸ್ಟ್ ಪಾಪ್ಯುಲರ್ ನಟರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಕಾಲಿವುಡ್ ನ ಖ್ಯಾತ ನಟ ದಳಪತಿ ವಿಜಯ್ ಅವರು. ಇನ್ನು ನಮ್ಮ ಕನ್ನಡದ ಹೆಮ್ಮೆಯ ನಟ, ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಯಶ್ ಅವರು 5ನೇ ಸ್ಥಾನದಲ್ಲಿ ಇದ್ದಾರೆ. ನಟ ಪ್ರಭಾಸ್ ಅವರು ಎರಡನೇ ಸ್ಥಾನದಲ್ಲಿದ್ದಾರೆ, ಪ್ರಭಾಸ್ ಅವರ ಸಾಲು ಸಾಲು ಸಿನಿಮಾಗಳು ಸೋಲುತ್ತಿದ್ದರು ಸಹ ಅವರು 2ನೇ ಸ್ಥಾನ ಪಡೆದುಕೊಂಡಿದ್ದಾರೆ..ಆರ್.ಆರ್.ಆರ್ ಸಿನಿಮಾ ಯಶಸ್ಸಿನ ಕಾರಣ ಜ್ಯೂನಿಯರ್ ಎನ್.ಟಿ.ಆರ್ ಅವರಿಗೆ ಮೂರನೇ ಸ್ಥಾನ ಸಿಕ್ಕಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ನಾಲ್ಕನೇ ಸ್ಥಾನ ಸಿಕ್ಕಿದೆ. ಆರನೇ ಸ್ಥಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇದ್ದಾರೆ. ಏಳನೇ ಸ್ಥಾನದಲ್ಲಿ ಆರ್.ಆರ್.ಆರ್ ಯಶಸ್ಸಿನ ಖ್ಯಾತ ನಟ ರಾಮ್ ಚರಣ್ ಇದ್ದಾರೆ. ಎಂಟನೇ ಸ್ಥಾನದಲ್ಲಿ ತೆಲುಗಿನ ಮತ್ತೊಬ್ಬ ಖ್ಯಾತ ನಟ ಮಹೇಶ್ ಬಾಬು ಇದ್ದಾರೆ, 9ನೇ ಸ್ಥಾನದಲ್ಲಿ ತಮಿಳಿನ ಖ್ಯಾತ ನಟ ಸೂರ್ಯ ಇದ್ದು, 10ನೇ ಸ್ಥಾನದಲ್ಲಿ ತಮಿಳಿನ ಮತ್ತೊಬ್ಬ ಖ್ಯಾತ ನಟ ಅಜಿತ್ ಇದ್ದಾರೆ. ಈ ಲಿಸ್ಟ್ ನಲ್ಲಿ ಬಾಲಿವುಡ್ ಇಂದ ಆಯ್ಕೆಯಾಗಿರುವ ಒಬ್ಬರೇ ನಟ ಅಕ್ಷಯ್ ಕುಮಾರ್. ನಮ್ಮ ದಕ್ಷಿಣ ಭಾರತದ ನಟರ ಬೆಳವಣಿಗೆ ನಿಜಕ್ಕೂ ಮೆಚ್ಚುವಂಥದ್ದಾಗಿದೆ.

Leave A Reply

Your email address will not be published.