Neer Dose Karnataka
Take a fresh look at your lifestyle.

ಭಾರತ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ ಆಕಾಶ್ ಚೋಪ್ರಾ: ನೀಡಿದ ಕಾರಣ ಏನು ಗೊತ್ತೇ?? ಅದೊಂದು ಕಾರಣ ಅಂತೇ.

ಆಕ್ಟೊಬರ್ 16ರಿಂದ ವಿಶ್ವಕಪ್ ಪಂದ್ಯಗಳು ಆಸ್ಟ್ರೇಲಿಯಾದಲ್ಲಿ ಶುರುವಾಗಲಿದ್ದು, ಅದಕ್ಕಾಗಿ ಪೂರ್ವಸಿದ್ಧತೆಗಳನ್ನು ಭಾರತ, ಪಾಕಿಸ್ತಾನ್ ಹಾಗೂ ಬೇರೆ ಎಲ್ಲಾ ತಂಡಗಳು ಸಹ ನಡೆಸುತ್ತಿವೆ. ಪ್ರಸ್ತುತ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮೂರು ಸರಣಿ ಟಿ20 ಪಂದ್ಯಗಳು ನಡೆಯುತ್ತಿದೆ. ಈ ಸಮಯದಲ್ಲಿ ಕ್ರಿಕೆಟ್ ಪಂಡಿತರು ಹಾಗೂ ಮಾಜಿ ಕ್ರಿಕೆಟ್ ಆಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಇದೀಗ ಭಾರತದ ಮಾಜಿ ಆಟಗಾಟ ಆಕಾಶ್ ಚೋಪ್ರಾ ಅದೊಂದು ಕಾರಣದಿಂದ ಭಾರತ ತಂಡ ವಿಶ್ವಕಪ್ ಗೆಲ್ಲದೆ ಇರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಡೆದ ಪಂದ್ಯ ನೋಡಿದರೆ, ಅಕ್ಷರ್ ಪಟೇಲ್ ಅವರನ್ನು ಹೊರತುಪಡಿಸಿ ಇನ್ನೆಲ್ಲಾ ಬೌಲರ್ ಗಳು ಸಹ, 10ಕ್ಕಿಂತ ಹೆಚ್ಚು ರನ್ ಗಳನ್ನು ನೀಡಿದ್ದರು. ಇದರ ಬಗ್ಗೆ ಆಕಾಶ್ ಚೋಪ್ರಾ ಅವರು ಮಾತನಾಡಿದ್ದು, “ಜಸ್ಪ್ರೀತ್ ಬುಮ್ರ ಮತ್ತು ಹರ್ಷಲ್ ಪಟೇಲ್ ತಂಡಕ್ಕೆ ಮರಳಿ ಬಂದರೆ ಎಲ್ಲವು ಸರಿ ಹೋಗುತ್ತದೆ ಎಂದು ಭಾವಿಸಿದ್ದೆವು ಆದರೆ ಅವರಿಬ್ಬರು ಬಂದರು ಯಾವುದು ಸರಿಹೋಗಿಲ್ಲ. ಐಪಿಎಲ್ ನಲ್ಲಿ ಗಮನಿಸಿದ್ದರೆ ಮುಂಬೈ ತಂಡದ ಪರವಾಗಿ ಚೆನ್ನಾಗಿ ಬೌಲಿಂಗ್ ಮಾಡಿದ್ದು ಬುಮ್ರ ಅವರು ಮಾತ್ರ, ಅವರು 5 ರಿಂದ 6 ವಿಕೆಟ್ ಪಡೆಯಬಹುದು, ಅದಕ್ಕಿಂತ ಹೆಚ್ಚಿನ ವಿಕೆಟ್ಸ್ ಪಡೆಯಲು ಸಾಧ್ಯವಿಲ್ಲ.

ಬೌಲಿಂಗ್ ವಿಭಾಗದಲ್ಲಿ ಸಮಸ್ಯೆ ಇದೆ ಎಂದು ನನಗೆ ಅನ್ನಿಸುತ್ತದೆ. ವಿಕೆಟ್ ತೆಗೆಯುವಲ್ಲಿ ಬೌಲರ್ ಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಯುಜವೇಂದ್ರ ಚಾಹಲ್ ಅವರು ನಿಧಾನವಾಗಿ ಬೌಲಿಂಗ್ ಮಾಡುವುದಕ್ಕಿಂತ ಸ್ವಲ್ಪ ವೇಗವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಸ್ಪಿನ್ನರ್ ಗಳು ಸ್ಲೋ ಬಾಲ್ಸ್ ಹಾಕದೆ ವಿಕೆಟ್ ಪಡೆಯಲು ಹೇಗೆ ಸಾಧ್ಯ. ಈ ರೀತಿಯ ಬೌಲಿಂಗ್ ಲೈನಪ್ ಇಟ್ಟುಕೊಂಡು ಭಾರತ ತಂಡ ಗೆಲ್ಲುವ ಸಾಧ್ಯತೆ ಬಹಳ ಕಡಿಮೆ ಇದೆ. 208 ರನ್ ನೀಡಿ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ನಿಜಕ್ಕೂ ಕಷ್ಟವಾಗುತ್ತದೆ..”ಎಂದಿದ್ದಾರೆ ಆಕಾಶ್ ಚೋಪ್ರಾ.

Comments are closed.