Neer Dose Karnataka
Take a fresh look at your lifestyle.

ಬಿಗ್ ಬಾಸ್ ತೆರಳಿರುವ ಅಮೂಲ್ಯ ಗೌಡ ಖಡಕ್ ವಾರ್ನಿಂಗ್: ಅದೊಂದು ವಿಚಾರ ತೆಗೆದ್ರೆ ಅವರ ಕಥೆ ಮುಗಿಯುತ್ತದೆ. ಏನಂತೆ ಗೊತ್ತೇ??

605

ಬಿಗ್ ಬಾಸ್ ಕನ್ನಡ ಸೀಸನ್ 9 ಶೋಗೆ ಸ್ಪರ್ಧಿಯಾಗಿ ಜೀಕನ್ನಡ ವಾಹಿನಿಯ ಕಮಲಿ ಧಾರವಾಹಿ ಖ್ಯಾತಿಯ ನಟಿ ಅಮೂಲ್ಯ ಗೌಡ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆಯಷ್ಟೇ ಅಮೂಲ್ಯ ಗೌಡ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 9 ಪ್ರವೀಣರು ಹಾಗೂ 9 ನವೀನರು , ಒಟ್ಟಾರೆಯಾಗಿ 18 ಸ್ಪರ್ಧಿಗಳು ಈ ಬಾರಿ, ಮನೆಯೊಳಗೆ ಹೋಗಿದ್ದಾರೆ. ಅವರಲ್ಲಿ ಅಮೂಲ್ಯ ಗೌಡ ಅವರು ಒಂದು ರೀತಿ ಆಕರ್ಷಣೆ ಆಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಕಮಲಿ ಸೀರಿಯಲ್ ನಲ್ಲಿ ನಾಲ್ಕು ವರ್ಷಗಳಿಂದ ನಾಯಕಿಯ ಪಾತ್ರದಲ್ಲಿ ನಟಿಸುತ್ತಿದ್ದರು, ಇದೀಗ ಧಾರವಾಹಿ ಮುಕ್ತಾಯ ಆಗುವ ಹಂತಕ್ಕೆ ಬಂದಿದ್ದು, ಅಮೂಲ್ಯ ಅವರು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ. ಸಿನಿಮಾದಲ್ಲಿ ನಟಿಸಬೇಕು ಎನ್ನುವ ಕನಸು ಇವರಿಗೆ ಇದೆ. ಬಿಗ್ ಬಾಸ್ ಮನೆಯೊಳಗೆ ಹೋಗುವ ಮೊದಲು ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರೊಡನೆ ಮಾತನಾಡುವಾಗ ಎಲ್ಲರಿಗು ಒಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. ಅದೇನು ಎಂದು ಈಗ ತಿಳಿಸುತ್ತೇವೆ ನೋಡಿ..

ಅಮೂಲ್ಯ ಗೌಡ ಅವರು ತಮ್ಮ ಕೆರಿಯರ್ ಬಗ್ಗೆ ಮಾತನಾಡಿ, “ನನ್ನ ಬಗ್ಗೆ ಗೊತ್ತಿಲ್ಲದೆ, ಕೆಲವರು ಏನೇನೋ ಮಾತನಾಡಿದ್ದಾರೆ. ಯಾರೋ ಸಿನಿಮಾ ಮಾಡುತ್ತಾರೆ ಅಂತ ನಾವು ಮಾಡೋದು ಅಲ್ಲ..ನಮಗೆ ಸಮಯ ಬರಬೇಕು. ನನ್ನ ಸಮಯ ಈಗ ಬಂದಿದೆ ಎಂದು ನನಗೆ ಅನ್ನಿಸುತ್ತದೆ..” ಎಂದಿದ್ದಾರೆ. ಅಷ್ಟೇ ಅಲ್ಲದೆ, ಒಂದು ವಾರ್ನಿಂಗ್ ಸಹ ನೀಡಿದ್ದಾರೆ, “ನನಗೆ ರೆಸ್ಪೆಕ್ಟ್ ಕೊಡದೆ ಮಾತನಾಡೋದು ಅಂದ್ರೆ ಇಷ್ಟ ಆಗಲ್ಲ. ಕೋಪ ಬರುತ್ತದೆ..” ಎಂದು ಹೇಳಿದ್ದಾರೆ. ಈ ಮೂಲಕ ಅಮೂಲ್ಯ ಅವರು ಯಾವ ಕಾರಣಕ್ಕೆ ಜಗಳ ಆಡಬಹುದು ಎನ್ನುವುದನ್ನು ತಿಳಿಸಿದ್ದಾರೆ..

Leave A Reply

Your email address will not be published.