Neer Dose Karnataka
Take a fresh look at your lifestyle.

ಕೊನೆಯಲ್ಲಿ ಊಹಿಸದ ಟ್ವಿಸ್ಟ್ ಗಳು, ರಂಗೇರಿದ ಬಿಗ್ ಬಾಸ್: ಫೈನಲ್ ಆಗಿ ರಾಯಲ್ ಬಿಗ್ ಬಾಸ್ ಮನೆ ಎಂಟ್ರಿ ಕೊಟ್ಟವರು ಯಾರು ಗೊತ್ತೇ??

ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 9, ಟಿವಿ ಸೀಸನ್ ನಿನ್ನೆಯಷ್ಟೇ ಶುರುವಾಗಿದೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಂದು ಬಿಗ್ ಬಾಸ್ ಶೋ ನಿರೂಪಣೆ ಮಾಡಿ, ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿಕೊಟ್ಟಿದ್ದಾರೆ. ಈ ಬಾರಿ ಸೀಸನ್ 9, ಅದರ ವಿಶೇಷವಾಗಿ, 9 ಪ್ರವೀಣರು ಹಾಗು 9 ನವೀನರು ಎನ್ನುವ ಕಾನ್ಸೆಪ್ಟ್ ನಲ್ಲಿ ಶೋ ಶುರುವಾಗಿದೆ. ಅಂದರೆ 9 ಜನ ಹೊಸ ಸ್ಪರ್ಧಿಗಳು, ಓಟಿಟಿ ಸೀಸನ್ ನ ಟಾಪ್ 4 ಸ್ಪರ್ಧಿಗಳು ಹಾಗೂ 5 ಜನ ಹಿಂದಿನ ಬಿಗ್ ಬಾಸ್ ಸೀಸನ್ ನ ಸ್ಪರ್ಧಿಗಳು ಎಂಟ್ರಿ ಕೊಟ್ಟು ಆಗಿದೆ.

100 ದಿನಗಳ ಈ ಆಟ ಈಗ ಶುರುವಾಗಿದ್ದು, ಮುಂದಿನ ಪಯಣ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಬಿಗ್ ಬಾಸ್ ಮನೆಗೆ ಹೋದ ಸ್ಪರ್ಧಿಗಳ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಕೊಡುತ್ತೇವೆ ನೋಡಿ.. ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ, ಮನೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಬಿಬಿಕೆ1 ರನ್ನರ್ ಅಪ್ ಅರುಣ್ ಸಾಗರ್ ಅವರು, ಎರಡನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಅಶ್ವಿನಿ ನಕ್ಷತ್ರ ಧಾರವಾಹಿ ಖ್ಯಾತಿಯ ನಟಿ ಮಯೂರಿ, ಮೂರನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ನಾಗಿಣಿ ಧಾರವಾಹಿ ಖ್ಯಾತಿಯ ನಟಿ ದೀಪಿಕಾ ದಾಸ್, ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಒನ್ ಲೈನರ್ ಡೈಲಾಗ್ ಇಂದ ಫೇಮಸ್ ಆಗಿರುವ ಸೈಕ್ ನವಾಜ್, ಐದನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ದಿವ್ಯ ಉರುಡುಗ. ಆರನೇ ಸ್ಪರ್ಧಿಯಾಗಿ ಕಿರುತೆರೆ ನಟ ದರ್ಶ್ ಚಂದ್ರಪ್ಪ ಎಂಟ್ರಿ ಕೊಟ್ಟರು, ಏಳನೇ ಸ್ಪರ್ಧಿಯಾಗಿ ಪ್ರಶಾಂತ್ ಸಂಬರ್ಗಿ ಎಂಟ್ರಿ ಕೊಟ್ಟರು.

ಎಂಟನೇ ಸ್ಪರ್ಧಿಯಾಗಿ ಕಮಲಿ ಧಾರವಾಹಿ ಖ್ಯಾತಿಯ ಅಮೂಲ್ಯ ಗೌಡ ಎಂಟ್ರಿ ಕೊಟ್ಟರು, ಒಂಬತ್ತು ಮತ್ತು ಹತ್ತನೇ ಸ್ಪರ್ಧಿಯಾಗಿ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಎಂಟ್ರಿ ಕೊಟ್ಟರು, ಹನ್ನೊಂದನೇ ಸ್ಪರ್ಧಿಯಾಗಿ ವಿನೋದ್ ಗೊಬ್ಬರಗೊಳ, ಹನ್ನೆರಡನೇ ಸ್ಪರ್ಧಿಯಾಗಿ ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ನೇಹಾ ಗೌಡ, ಹದಿಮೂರನೇ ಸ್ಪರ್ಧಿಯಾಗಿ ರೂಪೇಶ್ ರಾಜಣ್ಣ, ಹದಿನಾಲ್ಕು ಮತ್ತು ಹದಿನೈದನೇ ಸ್ಪರ್ಧಿಗಳಾಗಿ ರಾಕೇಶ್ ಅಡಿಗ ಮತ್ತು ಆರ್ಯವರ್ಧನ್, ಹದಿನಾರನೇ ಸ್ಪರ್ಧಿಯಾಗಿ ಬೈಕರ್ ಐಶ್ವರ್ಯ ಪಿಸ್ಸೇ, ಹದಿನೇಳನೇ ಸ್ಪರ್ಧಿಯಾಗಿ ಕಾವ್ಯಶ್ರೀ ಹಾಗೂ 18ನೇ ಸ್ಪರ್ಧಿಯಾಗಿ ಅನುಪಮಾ ಗೌಡ ಎಂಟ್ರಿ ಕೊಟ್ಟಿದ್ದಾರೆ.

Comments are closed.