Neer Dose Karnataka
Take a fresh look at your lifestyle.

ಈ ಬಾರಿಯ ಬಿಗ್ ಬಾಸ್ ಗೆಲ್ಲುವ ಭರವಸೆ ಮೂಡಿಸಿ ಎಂಟ್ರಿ ಕೊಟ್ಟಿರುವ ನೇಹಾ ಹಾಗೂ ವಿನೋದ್ ರವರ ವಿಶೇಷತೆಗಳು ಏನು ಗೊತ್ತೇ??

ಬಿಗ್ ಬಾಸ್ ಕನ್ನಡ ಸೀಸನ್ 9 ಶೋ ನಿನ್ನೆಯಷ್ಟೇ ಶುರುವಾಗಿದೆ. ಈ ಬಾರಿ 18 ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. 9 ನವೀನರು ಅಂದರೆ ಹೊಸ ಸ್ಪರ್ಧಿಗಳು ಹಾಗೂ 9 ಪ್ರವೀಣರು ಅಂದರೆ ಈಗಾಗಲೇ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳು ಹೀಗೆ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ 18 ಸ್ಪರ್ಧಿಗಳಲ್ಲಿ ನಟಿ ನೇಹಾ ಗೌಡ ಹಾಗೂ ವಿನೋದ್ ಗೊಬ್ಬರಗಾಲ ವಿಶೇಷವಾಗಿ ಭರವಸೆ ಮೂಡಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ನೇಹಾ ಗೌಡ ಅವರ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ, ಕಲರ್ಸ್ ಕನ್ನಡ ವಾಹಿನಿಯ ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಗೊಂಬೆ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ ನೇಹಾ. ಅಷ್ಟೇ ಅಲ್ಲದೆ, ರಾಜ ರಾಣಿ ಶೋ ಮೊದಲ ಸೀಸನ್ ನಲ್ಲಿ ಪತಿ ಚಂದನ್ ಅವರ ಜೊತೆಯಾಗಿ ಸ್ಪರ್ಧಿಸಿ, ವಿನ್ನರ್ ಆಗಿ ಹೊರಹೊಮ್ಮಿದರು. ಲಕ್ಷ್ಮೀ ಬಾರಮ್ಮ ಧಾರವಾಹಿ ಬಳಿಕ ನೇಹಾ ಅವರು ಇನ್ಯಾವುದೇ ಧಾರವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಬಿಗ್ ಬಾಸ್ ಶೋಗೆ ಹೊಸ ಭರವಸೆ ಹಾಗೂ ಗೆಲ್ಲುವ ಉತ್ಸಾಹದ ಜೊತೆಗೆ ಬಂದಿದ್ದಾರೆ..

ಇನ್ನು ವಿನೋದ್ ಗೊಬ್ಬರಗಾಲ ಅವರು ಮೊದಲು ಕಾಣಿಸಿಕೊಂಡಿದ್ದು ಮಜಾಭಾರತ ಶೋನಲ್ಲಿ, ಬಳಿಕ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಕೂಡ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ವಿನೋದ್ ಮಾಡುವ ಕಾಮಿಡಿಗೆ ನಗದೇ ಇರಲು ಸಾಧ್ಯ ಆಗುವುದಿಲ್ಲ. ವಿನೋದ್ ಅವರೇ ಹೇಳಿದ ಹಾಗೆ ಚಿಕ್ಕ ವಯಸ್ಸಿನಲ್ಲಿ ಅವರು ಹಳ್ಳಿಮೇಷ್ಟ್ರು ಸಿನಿಮಾದ ಕಪ್ಪೆರಾಯನ ಹಾಗೆ ಇದ್ದರಂತೆ, ಎಲ್ಲರೂ ಅದೇ ರೀತಿ ಕರೆಯುತ್ತಿದ್ದರಂತೆ. ಆದರೆ ಈಗ ಅದ್ಯಾವುದು ಬೇಸರ ತರುವುದಿಲ್ಲ ಎಂದಿದ್ದಾರೆ. ಇವರಿಗೆ ಈಗಾಗಲೇ ಬಿಗ್ ಬಾಸ್ ಒಂದು ಟಾಸ್ಕ್ ಸಹ ನೀಡಿದ್ದಾರೆ. ಮನೆಯ ಸ್ಪರ್ಧಿಗಳನ್ನು ಕಿಚನ್ ಗೆ ಕರೆದುಕೊಂಡು ಹೋಗಿ ವಿಟಿ ಬಗ್ಗೆ ಮಾತನಾಡಬೇಕು ಎಂದು. ಅದನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ ವಿನೋದ್.

Comments are closed.