Neer Dose Karnataka
Take a fresh look at your lifestyle.

ಪಂದ್ಯವನ್ನು ಗೆಲ್ಲಿಸಿದರು ಕೂಡ ಬೇಸರ ಹೊರಹಾಕಿದ ಕೊಹ್ಲಿ: ಯಾಕೆ ಗೊತ್ತೇ?? ಪಂದ್ಯ ಹೇಗಿರಬೇಕಿತ್ತಂತೆ ಗೊತ್ತೇ??

ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. 187 ರನ್ಸ್ ಟಾರ್ಗೆಟ್ ಬೆನ್ನತ್ತಲು, ಭಾರತ ತಂಡದ ಆರಂಭ ಚೆನ್ನಾಗಿರಲಿಲ್ಲ. ಕೆ.ಎಲ್.ರಾಹುಲ್ ಹಾಗು ರೋಹಿತ್ ಶರ್ಮಾ ಅವರ ವಿಕೆಟ್ಸ್ ಅನ್ನು ಬಹುಬೇಗ ಕಳೆದುಕೊಂಡರು, ನಂತರ ಬಂದ ವಿರಾಟ್ ಕೋಹ್ಲಿ ಹಾಗು ಸೂರ್ಯಕುಮಾರ್ ಯಾದವ್ ಅವರ ಜೊತೆಯಾಟದಲ್ಲಿ 104 ರನ್ ಗಳಿಸಿದರು. ವಿರಾಟ್ ಅವರು 48 ಎಸೆತಗಳಲ್ಲಿ 63 ರನ್ ಗಳು, ಸೂರ್ಯಕುಮಾರ್ ಯಾದವ್ ಅವರು 36 ರನ್ ಗಳಲ್ಲಿ 69 ರನ್ ಗಳಿಸಿದರು.

ಸೂರ್ಯಕುಮಾರ್ ಹಾಗು ವಿರಾಟ್ ಇಬ್ಬರು ಸಹ ಆಗಾಗ ಸಿಕ್ಸರ್ ಹಾಗು ಬೌಂಡರಿಗಳನ್ನು ಭಾರಿಸುವ ಮೂಲಕ ತಂಡವನ್ನು ಗೆಲುವಿನ ಕಡೆಗೆ ತೆಗೆದುಕೊಂಡು ಹೋದರು. ಇನ್ನು ನಂತರ ಬಂದ ಹಾರ್ದಿಕ್ ಪಾಂಡ್ಯ ಅವರು ಸಹ ಒಳ್ಳೆಯ ಬ್ಯಾಟಿಂಗ್ ಮಾಡಿದರು. ಭಾರತ ತಂಡ ಪಂದ್ಯವನ್ನು ಗೆದ್ದಿದ್ದರು ಸಹ, ವಿರಾಟ್ ಕೋಹ್ಲಿ ಅವರು ಕೆಲವು ಬೇಸರದ ಮಾತುಗಳನ್ನಾಡಿದ್ದಾರೆ. “ಪಂದ್ಯ ಅಷ್ಟು ಹೊತ್ತು ನಡೆಯಬೇಕಿರಲಿಲ್ಲ. ಕೊನೆಯ ಓವರ್ ಸಮಯಕ್ಕೆ 4 ಅಥವಾ 5 ರನ್ ಗಳು ಮಾತ್ರ ಉಳಿದಿರಬೇಕಿತ್ತು. ಆಗಾಗ ಬೌಂಡರಿಗಳನ್ನು ಹೊಡೆಯಬೇಕಿತ್ತು. ತಂಡಕ್ಕೆ ನನ್ನ ಕೊಡುಗೆಯಿಂದ ನನಗೆ ಸಂತೋಷವಿದೆ. ನಾನು ಒಂದು ಬ್ರೇಕ್ ತೆಗೆದುಕೊಂಡು ನಂತರ ನೆಟ್ಸ್ ಗೆ ಹೋಗಿ ನನ್ನ ಫಿಟ್ನೆಸ್ ಮೇಲೆ ಗಮನ ಹರಿಸಿದೆ.

ಅದೆಲ್ಲವೂ ಈಗ ಚೆನ್ನಾಗಿ ಕಂಬ್ಯಾಕ್ ಮಾಡಿದೆ. ನನ್ನ ತಂಡಕ್ಕೆ ನಾನು ಅತ್ಯುತ್ತಮವಾದ ಕೊಡುಗೆ ನೀಡಬೇಕು. ಜಾಂಪ ಉತ್ತಮವಾದ ಬೌಲರ್, ನಾನು ಸ್ಕೋರ್ ಮಾಡುವ ರನ್ಸ್ ಗಳನ್ನು ಕಂಟ್ರೋಲ್ ಮಾಡುತ್ತಾರೆ, ನಾನು ಅದನ್ನು ಮೀರಿ ಆಡಬೇಕಿತ್ತು. ಅವರು ಸ್ಟಂಪ್ಸ್ ಗೆ ಅಟ್ಯಾಕ್ ಮಾಡುತ್ತಾರೆ ಎಂದು ನನಗೆ ಗೊತ್ತಿತ್ತು, ಹಾಗಾಗಿ ನಾನು ಅದಾಗಲೇ ಲೆಗ್ ಹೊರಗಡೆ ನಿಂತಿದ್ದೆ. ಕಳೆದ ಮ್ಯಾಚ್ ನಲ್ಲಿ ನನಗೆ ಸ್ವಲ್ಪ ನಿರಾಶೆಯಾಗಿತ್ತು. ಆದರೆ ಈ ಮ್ಯಾಚ್ ನಲ್ಲಿ ಅಂದುಕೊಂಡ ಹಾಗೆ ನಡೆಯಿತು. ಮಿಡ್ಲ್ ಓವರ್ಸ್ ಗಳಲ್ಲಿ ಬಿಗ್ ಹಿಟ್ಸ್ ಹೊಡೆದು, ಪಂದ್ಯದ ಹಾಗೂ ತಂಡದ ಸಂದರ್ಭಕ್ಕೆ ಸಹಾಯ ಮಾಡಿದೆ..” ಎಂದು ಹೇಳಿದ್ದಾರೆ ಕೋಹ್ಲಿ.

Comments are closed.