Neer Dose Karnataka
Take a fresh look at your lifestyle.

ಕೊನೆಯ ಪಂದ್ಯಕ್ಕೂ ಮುನ್ನ ಬಂದಿತ್ತು ಜ್ವರ: ಆದರೆ ಸೂರ್ಯ ಡಾಕ್ಟರ್ ಬಳಿ ಹೇಳಿದ್ದೇನು ಗೊತ್ತೇ?? ಪಂದ್ಯದ ಕೊನೆ ಕ್ಷಣ ನಡೆದದ್ದು ಏನು ಗೊತ್ತೇ??

ಪ್ರಸ್ತುತ ಭಾರತ ತಂಡದ ಸ್ಟಾರ್ ಪ್ಲೇಯರ್ ಮಿಂಚಿನ ಆಟಗಾರ ಎಂದು ಹೆಸರು ಪಡೆದಿರುವವರು ಸೂರ್ಯಕುಮಾರ್ ಯಾದವ್. ಇವರು ಆಡುತ್ತಿರುವ ಪ್ರತಿಯೊಂದು ಇನ್ನಿಂಗ್ಸ್ ನಲ್ಲು ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ನಿನ್ನೆ ನಡೆದ ಆಸ್ಟ್ರೇಲಿಯಾ ವರ್ಸಸ್ ಭಾರತ 3ನೇ ಹಾಗೂ ಕೊನೆಯ ನಿರ್ಣಾಯಕ ಪಂದ್ಯದ ಭಾರತಕ್ಕೆ ಬಹಳ ಮುಖ್ಯವಾದ ಆಟ ಆಗಿತ್ತು. ಆಸ್ಟ್ರೇಲಿಯಾ ತಂಡ ನೀಡಿದ 186 ರನ್ ಅನ್ನು ಭಾರತ ತಂಡ ಚೇಸ್ ಮಾಡಬೇಕಿತ್ತು.

ನಿನ್ನೆಯ ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ನಲ್ಲಿ, ರಾಹುಲ್ ಹಾಗೂ ರೋಹಿತ್ ಇಬ್ಬರು ಔಟ್ ಆದ ಬಳಿಕ, ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೋಹ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ಅದರಲ್ಲೂ ಸೂರ್ಯಕುಮಾರ್ ಯಾದವ್ ಅವರು ಕೇವಲ 36 ಎಸೆತಗಳಲ್ಲಿ ಅಜೆಯ 69 ರನ್ ಗಳನ್ನು ಚಚ್ಚಿದರು. ನಿನ್ನೆಯ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡರು ಸೂರ್ಯ. ಆದರೆ ನಿನ್ನೆ ಪಂದ್ಯಕ್ಕಿಂತ ಅವರಿಗೆ ಆರೋಗ್ಯ ತಪ್ಪಿತ್ತು, ಹೊಟ್ಟೆನೋವು ಮತ್ತು ಜ್ವರ ಬಂದಿತ್ತು, ಹಾಗಿದ್ದರೂ ಸಹ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲೇಬೇಕು ಎಂದು ನಿರ್ಧಾರ ಮಾಡಿದ್ದ ಸೂರ್ಯಕುಮಾರ್ ಯಾದವ್ ಅವರ ಆರೋಗ್ಯದ ವಿಚಾರದ ಬಗ್ಗೆ ಅವರೇ ಮಾತನಾಡಿದ್ದಾರೆ.

“ವೆದರ್ ಬದಲಾವಣೆ ಮತ್ತು ಪ್ರಯಾಣ ಮಾಡಿದ ಕಾರಣ ನನಗೆ ಹೊಟ್ಟೆನೋವು ಮತ್ತು ಜ್ವರ ಬಂದಿತ್ತು, ಆದರೆ ಪಂದ್ಯ ಬಹಳ ಮುಖ್ಯ ಮತ್ತು ನಿರ್ಣಾಯಕವಾಗಿತ್ತು ಎಂದು ನನಗೆ ಗೊತ್ತಿತ್ತು, ಹಾಗಾಗಿ ನಾನು ಫಿಸಿಯೋ ಮತ್ತು ವೈದ್ಯರಲ್ಲಿ ನಾನು ಹೇಳಿದೆ, ಇದು ವಿಶ್ವಕಪ್ ಫೈನಲ್ ಆಗಿದ್ದರೆ ಏನಾಬೇಕಿತ್ತು? ನೀವು ನನಗೆ ಏನಾದರು ಔಷಧಿ ಕೊಡಿ, ಏನಾದರೂ ಮಾಡಿ, ಈ ರೀತಿ ಅನಾರೋಗ್ಯದಿಂದ ಇರಲು ನನ್ನಿಂದ ಸಾಧ್ಯವಿಲ್ಲ. ಪಂದ್ಯಕ್ಕೆ ನಾನು ಸಿದ್ಧವಾಗುವ ಹಾಗೆ ಮಾಡಿ ಎಂದು ಕೇಳಿಕೊಂಡೇ. ಜೆರ್ಸಿ ಹಾಕೊಂಡು ಮೈದಾನಕ್ಕೆ ಬರುವ ಆ ಅನುಭವವೇ ಬೇರೆ ರೀತಿ ಇರುತ್ತೆ.. ನಾನು ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುವ ರೀತಿಯಲ್ಲೇ ಮೈದಾನದಲ್ಲೂ ಆಡುತ್ತೇನೆ..” ಎಂದು ಹೇಳಿದ್ದಾರೆ ಸೂರ್ಯಕುಮಾರ್ ಯಾದವ್.

Comments are closed.