Neer Dose Karnataka
Take a fresh look at your lifestyle.

ವಿರಾಟ್ ಕೊಹ್ಲಿ ಫುಲ್ ಗರಂ: RCB RCB ಎಂದವರಿಗೆ ಖಡಕ್ ಆಗಿಯೇ ಉತ್ತರ ಕೊಟ್ಟ ಕೊಹ್ಲಿ. ಯಾಕೆ ಗೊತ್ತೇ??

447

ಭಾರತ ಹಾಗು ಆಸ್ಟ್ರೇಲಿಯಾ ವಿರುದ್ಧದ ಮೂರು ಸರಣಿ ಪಂದ್ಯಗಳು ಈಗ ಮುಗಿದಿದ್ದು, ಈ ಸರಣಿಯನ್ನು ಭಾರತ ತಂಡ ಗೆದ್ದಿದೆ. ಮೊದಲ ಪಂದ್ಯವನ್ನು ಭಾರತ ಸೋತು, ಆಸ್ಟ್ರೇಲಿಯಾ ತಂಡ ಗೆದ್ದಿತು. ನಾಗ್ಪುರದಲ್ಲಿ 2ನೇ ಪಂದ್ಯವನ್ನು ಭಾರತ ತಂಡ ಗೆದ್ದಿತು. ಈ ಪಂದ್ಯ ಮಳೆಯ ಕಾರಣ, 2 ಗಂಟೆಗಳ ಕಾಲ ತಡವಾಗಿ ಶುರುವಾಗಿ, 8 ಓವರ್ ಗಳಿಗೆ ಸೀಮಿತವಾಗಿ ಈ ಪಂದ್ಯದಲ್ಲಿ, ಆಸ್ಟ್ರೇಲಿಯಾ 91 ರನ್ ಗಳಿಸಿತು, ಇದನ್ನು ಬೀಟ್ ಮಾಡಿದ ಭಾರತ ತಂಡ 92 ರನ್ ಗಳಿಸಿತು.

ಈ ಪಂದ್ಯ ಮುಗಿದ ಬಳಿಕ ವಿರಾಟ್ ಕೋಹ್ಲಿ ಅವರು ಡ್ರೆಸ್ಸಿಂಗ್ ರೂಮ್ ನಲ್ಲಿದ್ದರು, ಅಲ್ಲಿಂದ ಹೊರಗೆ ನೋಡಿದಾಗ, ಅಭಿಮಾನಿಗಳು ಆರ್.ಸಿ.ಬಿ, ಆರ್.ಸಿ.ಬಿ ಎಂದು ಘೋಷಣೆ ಕೂಗಲು ಶುರು ಮಾಡುತ್ತಾರೆ, ಅಭಿಮಾನಿಗಳ ಕಡೆ ನೋಡುವ ವಿರಾಟ್ ಕೋಹ್ಲಿ ಅವರು ಸ್ವಲ್ಪ ಕೋಪಗೊಂಡ ಹಾಗೆ ಕಾಣಿಸಿಕೊಳ್ಳುತ್ತಾರೆ, ಬಳಿಕ ತಮ್ಮ ಜೆರ್ಸಿಯಲ್ಲಿರುವ ಭಾರತದ ಜೆರ್ಸಿಯನ್ನು ತೊರಿಸುತ್ತಾರೆ, ಆ ಮೂಲಕ ತಾವು ಈಗ ಆಡುತ್ತಿರುವುದು ಭಾರತ ತಂಡಕ್ಕಾಗಿ ಎಂದು ಹೇಳುತ್ತಾರೆ, ಆಗ ಆರ್.ಸಿ.ಬಿ ಎಂದು ಕೂಗುವುದನ್ನು ಅಭಿಮಾನಿಗಳು ನಿಲ್ಲಿಸುತ್ತಾರೆ.

ಆಗ ವಿರಾಟ್ ಅವರ ಪಕ್ಕದಲ್ಲೇ ಇದ್ದ ಆರ್.ಸಿ.ಬಿ ತಂಡದ ಮತ್ತೊಬ್ಬ ಆಟಗಾರ ಹರ್ಷಲ್ ಪಟೇಲ್ ಅವರು ಕೂಡ ವಿರಾಟ್ ಕೋಹ್ಲಿ ಅವರ ಪಕ್ಕದಲ್ಲೇ ಇದ್ದರು, ಅವರು ಕೂಡ ನಗುವುದನ್ನು ನೋಡಬಹುದಿತ್ತು. ವಿರಾಟ್ ಕೋಹ್ಲಿ ಅವರು ಆರ್.ಸಿ.ಬಿ ಅಭಿಮಾನಿಗಳಿಗೆ ನೀಡಿದ ಈ ಸಂದೇಶದ ವಿಡಿಯೋ ಈಗ ಭಾರಿ ವೈರಲ್ ಆಗಿದ್ದು, ಅಭಿಮಾನಿಗಳು ಕೋಹ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ನಿನ್ನೆಯಷ್ಟೇ ಭಾರತ ವರ್ಸಸ್ ಆಸ್ಟ್ರೇಲಿಯಾ ಮೂರನೆಯ ಪಂದ್ಯ ಸಹ ನಡೆದಿದ್ದು, ಭಾರತ ತಂಡ ಗೆದ್ದು, ಸರಣಿಯನ್ನು ತನ್ನದಾಗಿಸಿಕೊಂಡಿದೆ.

Leave A Reply

Your email address will not be published.