Neer Dose Karnataka
Take a fresh look at your lifestyle.

ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಚಾನ್ಸ್ ಪಡೆದ ದರ್ಶನ್: ಸಂಭಾವನೆಯಾಗಿ ಸಿಕ್ಕ ದುಬಾರಿ ವಾಚ್ ಬೆಲೆ ಎಷ್ಟು ಗೊತ್ತೇ??

4,565

ನಟ ದರ್ಶನ್ ಅವರು ಒಂದು ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಆ ಸಿನಿಮಾ ಸೂಪರ್ ಹಿಟ್ ಆಗುವುದು ಪಕ್ಕಾ. ದರ್ಶನ್ ಅವರು ಪ್ರಸ್ತುತ ಕ್ರಾಂತಿ ಸಿನಿಮಾ ಚಿತ್ರೀಕರಣ ಮುಗಿಸಿ, ಆ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇನ್ನು ಡಿ56 ಸಿನಿಮಾದಲ್ಲಿ ಸಹ ದರ್ಶನ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಇದಲ್ಲದೆ ದರ್ಶನ್ ಅವರು ಬಿ.ಸಿ.ಪಾಟೀಲ್ ಅವರು ನಿರ್ಮಾಣ ಮಾಡುತ್ತಿರುವ ಗರಡಿ ಸಿನಿಮಾದಲ್ಲಿ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮಾತ್ರವಲ್ಲದೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ಅವರು ಒಂದು ಸಿನಿಮಾ ಪ್ರೊಮೋಷನ್ ಗಾಗಿ ಬರುತ್ತಾರೆ ಎಂದರೆ ಆ ಸಿನಿಮಾ ಹಿಟ್ ಆಗುವುದು ಗ್ಯಾರಂಟಿ. ಇನ್ನು ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದರೆ ಆ ಸಿನಿಮಾಗೆ ಇನ್ನು ಹೆಚ್ಚಿನ ಬಲ ಬರುವುದು ಗ್ಯಾರಂಟಿ. ಇತ್ತೀಚೆಗೆ ದರ್ಶನ್ ಅವರು ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮತ್ತೊಂದು ಸಿನಿಮಾ ಮತ್ಯಾವುದು ಅಲ್ಲ, ಶಾಸಕ ಜಮೀರ್ ಅಹ್ಮದ್ ಅವರ ಮಗ ಜೈದ್ ಖಾನ್ ನಾಯಕನಾಗಿ ನಟಿಸಿರುವ ಬನಾರಸ್ ಸಿನಿಮಾದಲ್ಲಿ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದು, ಚಿತ್ರತಂಡ ಈ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಜಮೀರ್ ಅಹ್ಮದ್ ಅವರು ಹಾಗೂ ದರ್ಶನ್ ಅವರು ಆತ್ಮೀಯರಾಗಿರುವ ಕಾರಣ ಅವರ ಮಗನ ಸಿನಿಮಾದಲ್ಲಿ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ, ಸ್ನೇಹಿತರ ಸಿನಿಮಾದಲ್ಲಿ ನಟಿಸಲು ದರ್ಶನ್ ಅವರು ಸಂಭಾವನೆ ಪಡೆಯುವುದಿಲ್ಲ. ಹಾಗಾಗಿ ದರ್ಶನ್ ಅವರಿಗೆ ದುಬಾರಿ ಗಿಫ್ಟ್ ಸಹ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಜಮೀರ್ ಅಹ್ಮದ್ ಅವರು ದರ್ಶನ್ ಅವರಿಗೆ ಒಂದು ದುಬಾರಿ ವಾಚ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ ಎಂದು ಮಾಹಿರಿ ಸಿಕ್ಕಿದೆ.

Leave A Reply

Your email address will not be published.