Neer Dose Karnataka
Take a fresh look at your lifestyle.

ಹೆಣ್ಣು ಮಕ್ಕಳು ತವರಿಗೆ ಹೋಗುವ ಮುನ್ನ ಈ ಚಿಕ್ಕ ಕೆಲಸ ಮಾಡಿದರೆ ಸಾಕು, ಹಣ ಹುಡುಕಿಕೊಂಡು ಬಂದು ಶ್ರೀಮಂತರಾಗುತ್ತೀರಿ.

ಹೆಣ್ಣು ಸಂಸಾರದ ಕಣ್ಣು ಎಂದು ಹೇಳುತ್ತಾರೆ. ಹೆಣ್ಣಾಗಿ ಹುಟ್ಟುವವಳು ಒಂದು ಮನೆಯಲ್ಲಿ ಹುಟ್ಟಿ ಮತ್ತೊಂದು ಮನೆಯಲ್ಲಿ ಬೆಳಗುವ ದೀಪವಾಗಿರುತ್ತಾಳೆ. ಹೆಣ್ಣಿಗೆ ಮದುವೆ ಬಳಿಕ ತಂದೆ ತಾಯಿ ಮೇಲೆ ಹಾಗೂ ತವರು ಮನೆಯ ಮೇಲೆ ವಿಶೇಷವಾದ ಪ್ರೀತಿ ಮತ್ತು ಆತ್ಮೀಯತೆ ಬೆಳೆಯುತ್ತದೆ ಎಂದರೆ ತಪ್ಪಲ್ಲ. ಮದುವೆ ನಂತರ ತವರು ಮನೆಗೆ ಹೋಗಿ ಕುಟುಂಬವನ್ನು ಒಂದು ಸಾರಿ ನೋಡಬೇಕು ಎಂದು ಅಪೇಕ್ಷೇ ಪಡುತ್ತಾಳೆ. ಆದರೆ ಗಂಡನ ಮನೆಯಲ್ಲಿ ಆಕೆಗೆ ಇರುವ ಕೆಲಸಗಳಿಂದ ತವರು ಮನೆಗೆ ಹೋಗಲು ಸಾಧ್ಯ ಆಗುವುದಿಲ್ಲ. ಈ ರೀತಿಯ ಸಂದರ್ಭಗಳ ಜೊತೆಗೆ ಒಂದು ಹೆಣ್ಣಿಗೆ ಮದುವೆಯ ಬಳಿಕ ಬಹಳಷ್ಟು ಶಾಸ್ತ್ರ ಸಂಪ್ರದಾಯಗಳನ್ನು ಪೂರ್ತಿ ಮಾಡಬೇಕಾಗಿ ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೆಣ್ಣಾದವಳು ಗಂಡನ ಮನೆಯಿಂದ ತವರು ಮನೆಗೆ ಹೋಗುವ ಮೊದಲು ಕೆಲವು ವಿಚಾರಗಳನ್ನು ಪಾಲಿಸಬೇಕು, ಇದರಿಂದಾಗಿ ಗಂಡನ ಮನೆಗೆ ಬಹಳ ಒಳ್ಳೆಯದಾಗುತ್ತದೆ, ಹಾಗೂ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆ ಸಣ್ಣ ಕೆಲಸಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಹೆಣ್ಣಿಗೆ ಶುಕ್ರ ಗ್ರಹದ ಜೊತೆಗೆ ಸಂಬಂಧ ಇರುತ್ತದೆ, ಬುಧ ಮತ್ತು ಶನಿ ಶುಕ್ರನಿಗೆ ಆಪ್ತರಾಗಿರುತ್ತಾರೆ. ಅದರಿಂದಾಗಿ ಬುಧವಾರ ಮತ್ತು ಶನಿವಾರ ಹೆಣ್ಣು ತನ್ನ ತವರು ಮನೆಗೆ ಹೋಗಬಹುದು. ಆದರೆ ಸೂರ್ಯ ಮತ್ತು ಚಂದ್ರ ಗ್ರಹ ಎಂದರೆ ಶುಕ್ರನಿಗೆ ಅಷ್ಟಕ್ಕಷ್ಟೇ ಎನ್ನುವ ಹಾಗೆ ಇರುತ್ತದೆ. ಹಾಗಾಗಿ ಭಾನುವಾರದಂದು ಹೆಣ್ಣುಮಕ್ಕಳು ತವರು ಮನೆಗೆ ಹೋಗಬಾರದು.

ಹೆಣ್ಣಿನ ಜಾತಕದಲ್ಲಿ ಚಂದ್ರನು ಶಕ್ತಿಶಾಲಿಯಾಗಿದ್ದು, ಬುಧ ದುರ್ಬಲವಾಗಿದ್ದರೆ, ಬುಧವಾರದಂದು ಕೂಡ ತವರು ಮನೆಗೆ ಹೋಗಬಾರದು. ಹಾಗೂ ಚತುರ್ಥಿ ಮತ್ತು ಸಪ್ತಮಿಯ ಹೆಣ್ಣುಮಕ್ಕಳು ಅತ್ತೆ ಮನೆಯಿಂದ ತವರು ಮನೆಗೆ ಹೋಗುವುದು ಬಹಳ ಶುಭಫಲ ತರುತ್ತದೆ ಎಂದು ಹೇಳಲಾಗುತ್ತದೆ. ತವರು ಮನೆಯಿಂದ ಅತ್ತೆ ಮನೆಗೆ, ಶುಕ್ರವಾರ, ಹುಣ್ಣಿಮೆಯ ದಿನ ಅಥವಾ ಏಕಾದಶಿಯ ದಿನ ಬರಬಹುದು, ಇದು ಒಳ್ಳೆಯದಾಗಿದ್ದು, ಗಂಡನ ಮನೆಗೆ ಶುಭಫಲ ತರುತ್ತದೆ..ಗ್ರಹಣದ ದಿನ ತವರು ಮನೆಗೆ ಹೋಗುವುದರಿಂದ ಎರಡು ಕುಟುಂಬದವರಿಗೆ ಆರ್ಥಿಕ ಸಮಸ್ಯೆ ಉಂಟಾಗಬಹುದು. ತಾಯಿ ಮನೆಯಲ್ಲೇ ಕೆಲ ದಿನ ಉಳಿದಿಕೊಳ್ಳಲು ಬಯಸುವವರು, 9ನೇ ದಿನ ಗಂಡನ ಮನೆಗೆ ಬರಬೇಡಿ, 11ನೇ ದಿನದವರೆಗೂ ಅಲ್ಲೇ ಇದ್ದು, 12ನೇ ದಿನ ಗಂಡನ ಮನೆಗೆ ಬನ್ನಿ, ಇದರಿಂದ ಎರಡು ಮನೆಯಲ್ಲಿ ಅಭಿವೃದ್ಧಿ ಆಗುತ್ತದೆ.

Comments are closed.