Neer Dose Karnataka
Take a fresh look at your lifestyle.

ತಾವೇ ಕಟ್ಟಿಸಿದ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಲೀಲಾವತಿ ಅಮ್ಮ: ಈ ಆಸ್ಪತ್ರೆಗೆ ಆಸ್ತಿ ಮಾರಿ ಖರ್ಚು ಮಾಡಿದ್ದು ಎಷ್ಟು ಹಣ ಗೊತ್ತೇ??

ಕನ್ನಡದ ಹಿರಿಯನಟಿ ಲೀಲಾವತಿ ಅವರು ಮತ್ತು ಅವರ ಮಗ ವಿನೋದ್ ರಾಜ್ ಇಬ್ಬರು ಸಹ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದವರು, ಈಗ ನಾಗಮಂಗಲದ ಸೋಲದೇವನಹಳ್ಳಿಯಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರು ಎಷ್ಟೇ ಕಷ್ಟಪಟ್ಟರು ಸಹ, ಸಮಾಜಕ್ಕೆ ಒಳ್ಳೆಯದನ್ನು ಮಾಡುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ಈಗಾಗಲೇ ಹಲವರಿಗೆ ಲೀಲಾವತಿ ಅವರಿಂದ ಸಹಾಯ ಆಗಿದ್ದು, ಇದೀಗ ಲೀಲಾ ಅವರ ಬಹುದಿನಗಳ ದೊಡ್ಡ ಕನಸು ನನಸಾಗಿದೆ. ಲೀಲಾವತಿ ಅವರು ಸೋಲದೇವನಹಳ್ಳಿಹಳ್ಳಿ ಆಸ್ಪತ್ರೆ ಕಟ್ಟಿಸಬೇಕು ಎಂದು ಕನಸು ಇಟ್ಟುಕೊಂಡಿದ್ದರು.

ಆ ಕನಸು ಕೆಲವು ದಿನಗಳ ಹಿಂದೆ ನೆರವೇರಿತು, ಡಾ.ಎಂ.ಲೀಲಾವತಿ ಆಸ್ಪತ್ರೆಯನ್ನು ಸೋಲದೇವನಹಳ್ಳಿಯ ಬಡಜನರಿಗೆ ಸಹಾಯ ಆಗಲೆಂದು ಲೀಲಾವತಿ ಅವರು ಈ ಆಸ್ಪತ್ರೆ ಕಟ್ಟಿಸಿದ್ದಾರೆ, ಕೆಲ ದಿನಗಳ ಹಿಂದೆ ಆಸ್ಪತ್ರೆ ಉದ್ಘಾಟನೆ ನಡೆಯಬೇಕಿತ್ತು, ಆದರೆ ಸಚಿವರಾದ ಉಮೇಶ್ ಕತ್ತಿ ಅವರು ನಿಧನರಾದ ಕಾರಣ ಆಸ್ಪತ್ರೆ ಉದ್ಘಾಟನೆ ಮುಂದಕ್ಕೆ ಹೋಗಿದ್ದು, ಇದೀಗ ಇಂದು ಸೆಪ್ಟೆಂಬರ್ 28ರಂದು ಲೀಲಾವತಿ ಅವರು ಕಟ್ಟಿಸಿರುವ ಆಸ್ಪತ್ರೆಯ ಉದ್ಘಾಟನೇ ನಡೆದಿದೆ. ರಾಜ್ಯಡ್ ಸಿಎಂ ಬಸವಾರಜ್ ಬೊಮ್ಮಾಯಿ ಅವರು ಡಾ.ಎಂ.ಲೀಲಾವತಿ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿ, ಲೀಲಾವತಿ ಅವರನ್ನು ಹಾಡಿ ಹೊಗಳಿದ್ದಾರೆ. ಅವರು ಕಷ್ಟಪಟ್ಟಿದ್ದರು ಸಹ, ಜನರ ಒಳಿತಿಗೆ ಈ ರೀತಿ ಸಮಾಜ ಸೇವೆ ಮಾಡುತ್ತಾ ಇರುವುದಕ್ಕೆ ಬಸವರಾಜ್ ಬೊಮ್ಮಾಯಿ ಅವ

ಲೀಲಾವತಿ ಅವರಿಗೆ ಆಸ್ಪತ್ರೆ ಉದ್ಘಾಟನೆ ಇಂದ ಸಂತೋಷ ಅಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರೊಡನೆ ಮಾತನಾಡಿ, ತಮ್ಮ ಊರಿಗೆ ಒಂದು ಪಶು ಆಸ್ಪತ್ರೆ ಕಟ್ಟಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಸಿಎಂ ಅವರು, ಆದಷ್ಟು ಬೇಗ ಪಶು ಆಸ್ಪತ್ರೆ ಕಟ್ಟಿಸುವ ಬಗ್ಗೆ ನೋಡುವುದಾಗಿ ಹೇಳಿದ್ದಾರೆ. ವಿನೋದ್ ರಾಜ್ ಅವರು ಮಾತನಾಡಿ, ಲೀಲಾವತಿ ಅವರು ಚೆನ್ನೈನ ಜಮೀನು ಮಾರಿ ಬಂದ ಹಣ 1.20 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿ ಆಸ್ಪತ್ರೆ ಕಟ್ಟಿಸಿರುವುದಾಗಿ ಹೇಳಿದ್ದಾರೆ. ಇಂದಿನಿಂದಲೇ ಜನರಿಗೆ ಆಸ್ಪತ್ರೆಯಲ್ಲಿ ಸೇವೆ ಸಿಗುತ್ತದೆ ಎಂದು ವಿನೋದ್ ರಾಜ್ ಅವರು ಸಹ ಬಹಳ ಸಂತೋಷದಿಂದ ಹೇಳಿದ್ದಾರೆ.

Comments are closed.