ನಿಮ್ಮ ಮನೆಯಲ್ಲಿನ ಅಡುಗೆ ಮನೆ ಕ್ಲೀನ್ ಇರಬೇಕು ಎಂದರೆ, ಏನು ಮಾಡಬೇಕು ಗೊತ್ತೇ?? ಸಿಂಪಲ್ ಆಗಿ ಮಾಡಿ ಈ ಸೂಪರ್ ಐಡಿಯಾ.
ಪ್ರತಿ ಮನೆಯಲ್ಲೂ ಅಡುಗೆ ಮನೆ ಬಹಳ ಮುಖ್ಯವಾದ ಜಾಗ. ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಅಡುಗೆ ಮನೆಯನ್ನು ಸದಾ ಚೆನ್ನಾಗಿ ಸ್ವಚ್ಛವಾಗಿ ಇಟ್ಟುಕೊಳ್ಳಲು ಇಂದು ಕೆಲವು ಐಡಿಯಾಗಳನ್ನು ನಿಮಗೆ ನೀಡುತ್ತೇವೆ. ಅಡುಗೆ ಮನೆಯನ್ನು ಚೆನ್ನಾಗಿಡಲು ಸ್ಟವ್ ಟಾಪ್ ಅನ್ನು ಎರಡು ದಿನಗಳಿಗೆ ಒಂದು ಸಾರಿ ಕ್ಲೀನ್ ಮಾಡಿ, ಸ್ವಚ್ಛ ಮಾಡುವ ನಿಮ್ಮ ಕೆಲಸ ಇದರಿಂದ ಸುಲಭವಾಗುತ್ತದೆ. ಕೆಲ ದಿನಗಳು ಬಿಟ್ಟು ಮಾಡಲು ಹೋದರೆ, ಕ್ಲೀನ್ ಆಗುವುದಿಲ್ಲ.
*ಅಡುಗೆ ಮನೆಯಲ್ಲಿ ವಸ್ತುಗಳನ್ನು ಇಟ್ಟುಕೊಳ್ಳುವ ಡಬ್ಬಗಳನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು. ಒಂದೊಂದು ವಸ್ತುವನ್ನು ಒಂದೊಂದು ಮೂಲೆಯಲ್ಲಿ ಇಡುಬಾರದು, ಇದರಿಂದ ಅಡುಗೆ ಮನೆಯಲ್ಲಿ ಹಗರಣ ಆಗುತ್ತದೆ.
*ತಕ್ಷಣವೇ ಪಾತ್ರೆಗಳನ್ನು ತೊಳೆದು ಇಟ್ಟುಕೊಳ್ಳುವುದರಿಂದ ಕೆಲಸ ಹೊರೆ ಕಡಿಮೆ ಆಗುತ್ತದೆ. ಜೊತೆಗೆ ಕಿಚನ್ ಕ್ಲೀನ್ ಆಗಿ ಇರುತ್ತದೆ.
*ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ, ಕೈ ಒರೆಸಲು ಪ್ರತ್ಯೇಕವಾಗಿ ಬೇರೆ ಬಟ್ಟೆ ಬಳಸಿ, ಅದನ್ನು ವಾಶ್ ಮಾಡಿ ಒಣಗಿಸಿ. ಇದರಿಂದ ವೈರಸ್ ಬರುವುದಿಲ್ಲ.

*ಅಡುಗೆ ಮಾಡುವಾಗ ಬಿಟ್ಟು ಬೇರೆ ಸಮಯದಲ್ಲಿ ಸಿಂಕ್ ಅನ್ನು ಕ್ಲೀನ್ ಮಾಡಿ, ಹಾಗೆ ಬಿಟ್ಟರೆ ವಾಸನೆ ಬರಲು ಶುರುವಾಗುತ್ತದೆ, ಇದರಿಂದಾಗಿ ಎಷ್ಟೇ ಕ್ಲೀನ್ ಮಾಡಿದರು ಸರಿ ಇಲ್ಲ ಎಂದೇ ಅನ್ನಿಸುತ್ತದೆ.
*ಪಾತ್ರೆಗಳನ್ನು ಬಟ್ಟೆಗಳಿಂದ ಒರೆಸಿ, ಅಥವಾ ಮಗುಚಿ ಇಡುವ ಮೂಲಕ ಹಾರಲು ಬಿಡಿ. ಕಬ್ಬಿಣದ ಪ್ಯಾನ್, ದೋಸೆಕಲ್ಲು ಇವುಗಳನ್ನು ಒರೆಸುವುದನ್ನು ಮರೆಯಬೇಡಿ. ಹಾಗು ಕೂದಲು ಓಪನ್ ಬಿಟ್ಟು ಅಡುಗೆ ಮಾಡಬೇಡಿ.
*ಅಡುಗೆ ಮನೆಯಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಇಡಬೇಡಿ, ಜಿರಳೆ ಸಮಸ್ಯೆ ತಡೆಯಲು, ಇರುವೆ ಪುಡಿ ಮಾಡಿ ಸ್ಪ್ರೇ ಮಾಡಿ, ಅದರ ಮೇಲೆ ಪೇಪರ್ ಹಾಕಿ.
*ಅಡುಗೆ ಮಾಡುವಾಗ ಎಕ್ಸ್ ಹಾಸ್ಟ್ ಫ್ಯಾನ್ ಬಳಸಿ.