Neer Dose Karnataka
Take a fresh look at your lifestyle.

ನವರಾತ್ರಿಯ ಸಮಯದಲ್ಲಿ ಶುಕ್ರ ದೆಸೆ ಆರಂಭ: ಕಷ್ಟವೆಲ್ಲ ಮುಗಿದು ಅದೃಷ್ಟ ಆರಂಭವಾಗುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ??

ಸೆಪ್ಟೆಂಬರ್ 26ರಿಂದ ಶರನ್ನವರಾತ್ರಿ ಶುರುವಾಗಲಿದ್ದು, ಅಕ್ಟೋಬರ್ 5ರವರೆಗು ನವರಾತ್ರಿ ನಡೆಯಲಿದೆ. ಇದರಿಂದ ಕೆಲವು ರಾಶಿಗಳಿಗೆ ದೇವಿಯ ವಿಶೇಷ ಕೃಪೆ ಪ್ರಾಪ್ತಿಯಗಲಿದೆ. 5 ರಾಶಿಗಳಿಗೆ ನವರಾತ್ರಿಯಲ್ಲಿ ಅದೃಷ್ಟ ಬೆಳಗಲಿದೆ, ದೊಡ್ಡ ಮಟ್ಟದಲ್ಲಿ ಹಣ ಗಳಿಸುತ್ತಾರೆ. ಈ ಸಮಯದಲ್ಲಿ ಕನ್ಯಾರಾಶಿಗೆ ಶುಕ್ರಗ್ರಹದ ಪ್ರವೇಶ ಆಗಿದೆ. ಇದರ ಪರಿಣಾಮ 5 ರಾಶಿಗಳ ಮೇಲೆ ಇರುತ್ತದೆ. ಸೆಪ್ಟೆಂಬರ್ 24ರಂದು ಕನ್ಯಾ ರಾಶಿಗೆ ಶುಕ್ರನ ಪ್ರವೇಶ ಆಗಿದೆ, ಹಾಗಾಗಿ ಈ ಕೃಪೆ ಆಶೀರ್ವಾದ ಪಡೆಯುವ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರಿಗೆ ಶುಕ್ರ ಸಂಚಾರ ಲಾಭ ತರುತ್ತದೆ ಎಂದು ಸಾಬೀತಾಗುತ್ತದೆ. ಕೆಲಸದಲ್ಲಿ ಏಳಿಗೆ ಕಾಣಬಹುದು, ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ವ್ಯಾಪಾರ ಮಾಡುತ್ತಿರುವವರಿಗೆ ದೊಡ್ಡ ಮಟ್ಟದಲ್ಲಿ ಹಣ ಸಿಗಬಹುದು. ಹಣ ಹೂಡಿಕೆ ಮಾಡಲು ಇದು ಸರಿಯಾದ ಸಮಯ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದರಿಂದ ಪ್ರಯೋಜನವಾಗುತ್ತದೆ. ಶುಭ ಕಾರ್ಯಕ್ಕಾಗಿ ಹೆಚ್ಚಿನ ಪ್ರಯಾಣ ಮಾಡಬಹುದು. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ, ಹೊಸ ಮನೆ ಅಥವಾ ವಾಹನ ಖರೀದಿ ಯೋಗ ಇದೆ.

ವೃಷಭ ರಾಶಿ :- ಶುಕ್ರನ ಸಂಚಾರ ಈ ರಾಶಿಯವರ ಅದೃಷ್ಟವನ್ನು ಪ್ರಜ್ವಲಿಸುತ್ತದೆ. ವಿಶೇಷವಾಗಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುತ್ತದೆ. ನವರಾತ್ರಿ ಸಮಯದಲ್ಲಿ ಲಾಭ ಅತ್ಯಂತ ಉತ್ತಮವಾಗಿರುತ್ತದೆ. ಹೊಸ ಕೆಲಸ ಅಥವಾ ವ್ಯವಹಾರ ಪ್ರಾರಂಭಿಸುವ ಯೋಜನೆ ಇದ್ದರೆ, ಈ ಒಂಬತ್ತು ದಿನಗಳು ತುಂಬಾ ಮಂಗಳಕರ ಆಗಿರುತ್ತದೆ. ಅದೃಷ್ಟ ನಿಮಗೆ ಒಳ್ಳೆಯದನ್ನು ಮಾಡುತ್ತದೆ. ಮದುವೆ ಆಗಿಲ್ಲದೆ ಇರುವವರಿಗೆ ಸಾಧ್ಯವಾಗಬಹುದು, ಒಳ್ಳೆಯ ಜೀವನ ಸಂಗಾತಿ ಸಿಗಬಹುದು. ಪ್ರೀತಿ ಪ್ರೇಮದ ವಿಷಯಗಳಲ್ಲಿ ಯಶಸ್ಸು ಸಿಗಲಿದೆ.

ಮಿಥುನ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಈ ರಾಶಿಯ ಜನರ ಜೀವನದಲ್ಲಿ ಬಹಳಷ್ಟು ಸಂತೋಷವನ್ನು ತರುತ್ತದೆ. ಕುಟುಂಬದಲ್ಲಿ ನಗು ಮತ್ತು ಸಂತೋಷದ ವಾತಾವರಣ ಇರುತ್ತದೆ. ಗ್ರಹಗಳ ಸಮಸ್ಯೆಗಳು ಕೊನೆಯಾಗುತ್ತದೆ, ಹಣದ ಬರುವಿಕೆ ಹೆಚ್ಚಾಗುತ್ತದೆ. ನ್ಯಾಯಾಲಯದ ಪ್ರಕರಣಗಳು ಇತ್ಯರ್ಥವಾಗುತ್ತದೆ. ಹಳೆಯ ರೋಗಗಳಿಂದ ಮುಕ್ತಿ ಪಡೆಯುತ್ತೀರಿ. ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ವ್ಯವಹಾರದಲ್ಲಿ ದೊಡ್ಡ ಪ್ಲಾನ್ ರೂಪಿಸಬಹುದು.

ಕರ್ಕಾಟಕ ರಾಶಿ :- ಶುಕ್ರನ ಸ್ಥಾನ ಬದಲಾವಣೆ ಮತ್ತು ನವರಾತ್ರಿಯ ಈ ರಾಶಿಯವರಿಗೆ ಮಂಗಳಕರ ಎಂದು ಸಾಬೀತು ಮಾಡುತ್ತದೆ. ನ ಹಳೆಯ ಕನಸುಗಳು ನನಸಾಗುತ್ತವೆ. ದೇವಿಯ ಅನುಗ್ರಹದಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನೀವು ಯಶಸ್ಸನ್ನು ಅನುಭವಿಸುತ್ತೀರಿ, ಶತ್ರುಗಳು ನಿಮ್ಮ ಬಗ್ಗೆ ಅಸೂಯೆ ಪಡುತ್ತಾರೆ. ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ, ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ. ಎಂದಿಗಿಂತಲು ಹೆಚ್ಚು ಸಂತೋಷವಾಗಿರುತ್ತೀರಿ. ಮಕ್ಕಳಿಂದ ಒಳ್ಳೆಯ ಸುದ್ದಿ ಬರಲಿದೆ.

ಸಿಂಹ ರಾಶಿ :- ನವರಾತ್ರಿ ಸಮಯವು ಈ ರಾಶಿಯವರಿಗೆ ಬಹಳ ಸಂತೋಷವನ್ನು ತರುತ್ತದೆ. ಶುರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತಾರೆ. ವೃತ್ತಿಜೀವನದಲ್ಲಿ ಉತ್ತಮ ಏಳಿಗೆ ಹೊಂದುತ್ತೀರಿ. ವಿದೇಶ ಪ್ರವಾಸ ಯೋಗ ಬರುತ್ತದೆ. ನೆರಿಂದ ನಿಮ್ಮ ಕೆಲಸ ಮತ್ತು ನಡವಳಿಕೆಗೆ ಮೆಚ್ಚುಗೆ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ, ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ.

Comments are closed.