Neer Dose Karnataka
Take a fresh look at your lifestyle.

ವಿಶ್ವಕಪ್ ಗೆ ಕೆಲವೇ ದಿನಗಳು ಇರುವಾಗಲೇ ಭಾರತ ತಂಡಕ್ಕೆ ಬಿಗ್ ಶಾಕ್: ಕೊನೆಯ ಕ್ಷಣದಲ್ಲಿ ಕೈ ಕೊಡುತ್ತಾರೆಯೇ ಖಡಕ್ ಆಟಗಾರ. ಈತನಿಲ್ಲದೆ ವಿಶ್ವಕಪ್ ಗೆಲುವು ಸಾಧ್ಯನಾ??

ಜಸ್ಪ್ರೀತ್ ಬುಮ್ರ ಅವರು ಟೀಮ್ ಇಂಡಿಯಾದ ಚಾಣಾಕ್ಷ ಬೌಲರ್ ಆಗಿ ಗುರುತಿಸಿಕೊಂಡವರು. ಇವರು ಮೈದಾನಕ್ಕೆ ಇಳಿದರೆ, ಎದುರಾಳಿ ತಂಡದ ಬ್ಯಾಟ್ಸ್ಮನ್ ಮಗಳಿಗೆ ಭಯ ಆಗುತ್ತಿದ್ದಂತೂ ಸತ್ಯ. ಆದರೆ ಈಗ ಬುಮ್ರ ಅವರಿಗೆ ಪದೇ ಪದೇ ಆರೋಗ್ಯ ಕೆಡುತ್ತಿದೆ. ಬೆನ್ನು ನೋವಿನ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದ ಬುಮ್ರ ಅವರು, ಏಷ್ಯಾಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನಾಡಿದರು. ನಿನ್ನೆಯಿಂದ ಸೌತ್ ಆಫ್ರಿಕಾ ವಿರುದ್ಧದ 3ಪಂದ್ಯಗಳ ಟಿ20 ಪಂದ್ಯ ನಡೆದಿದೆ .

ಆಸ್ಟ್ರೇಲಿಯಾ ಸರಣಿಯಲ್ಲಿ ಪಂದ್ಯವನ್ನಾಡಿದ ಬಳಿಕ ಬುಮ್ರ ಅವರು ಬೆನ್ನು ನೋವು ಎಂದು ಹೇಳಿ, ಸೌತ್ ಆಫ್ರಿಕಾ ಸರಣಿಯ ಪಂದ್ಯದಲ್ಲಿ ಪಾಲ್ಗೊಂಡಿಲ್ಲ. ಪದೇ ಪದೇ ಬುಮ್ರ ಅವರಿಗೆ ಆರೋಗ್ಯದಲ್ಲಿ ಈ ರೀತಿ ಸಮಸ್ಯೆ ಆಗುತ್ತಿರುವುದು ಭಾರತ ತಂಡಕ್ಕೆ ಆತಂಕ ತಂದಿದೆ. ಟಿ20 ವಿಶ್ವಕಪ್ ಶುರುವಾಗಲು ಉಳಿದಿರುವುದು ಕೆಲವು ದಿನಗಳು ಮಾತ್ರ, ಈ ಸಮಯದಲ್ಲಿ ಈ ರೀತಿ ಆಗಿರುವುದರಿಂದ ಬುಮ್ರ ಅವರು ಟ್ರೋಲ್ ಸಹ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬುಮ್ರ ಅವರನ್ನು ಗಾಯಗಳ ರಾಜ ಎಂದು ಕರೆಯಲಾಗುತ್ತಿದೆ. ಪದೇ ಪದೇ ಈ ರೀತಿ ಆಗುತ್ತಿರುವುದಕ್ಕೆ ತೀವ್ರವಾಗಿ ಟೀಕೆಗೆ ಒಳಗಾಗಿದ್ದಾರೆ.

ಸೌತ್ ಆಫ್ರಿಕಾ ಸರಣಿಯ ಮೊದಲ ಪಂದ್ಯದಲ್ಲಿ ಇವರು ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ, ನಿನ್ನೆಯ ಪಂದ್ಯದಲ್ಲಿ ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್ ಹಾಗು ದೀಪಕ್ ಚಾಹರ್ ಅವರ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡ 20 ಓವರ್ ಗಳಲ್ಲಿ 106 ರನ್ ಗಳನ್ನು ಮಾತ್ರ ಸೌತ್ ಆಫ್ರಿಕಾ ತಂಡಕ್ಕೆ ಬಿಟ್ಟುಕೊಟ್ಟಿತು. ಇತ್ತ ಬುಮ್ರ ಅವರು ಟ್ರೋಲ್ ಆಗುತ್ತಿದ್ದಾರೆ, ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಸೌತ್ ಆಫ್ರಿಕಾ ಮತ್ತು ಪಾಕಿಸ್ತಾನ್ ವಿರುದ್ಧದ ಪಂದ್ಯಗಳಲ್ಲಿ ವಿಶ್ರಾಂತಿ ನೀಡಿ, ಸೆಮಿ ಫೈನರ್ ಹಾಗು ಫೈನಲ್ಸ್ ನಲ್ಲಿ ಈ ಆಟಗಾರನನ್ನು ತಾಜಾವಾಗಿ ಇರಿಸಲು ವಿಶ್ರಾಂತಿ ಕೊಡಿ ಎನ್ನುತ್ತಿದ್ದಾರೆ. ಇನ್ನು ಕೆಲವರು, ಇವರ ಬೆನ್ನು ನೋವಿನ ಸಮಸ್ಯೆ ತೀರಿಲ್ಲ, ಎರಡೇ ಪಂದ್ಯಕ್ಕೆ ಬೆನ್ನು ನೋವು ಅಂತಿದ್ದಾರೆ, ಇವರಿಂದ ವಿಶ್ವಕಪ್ ಪಂದ್ಯಗಳನ್ನಾಡಲು ಸಾಧ್ಯವಾಗುತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

Comments are closed.