Neer Dose Karnataka
Take a fresh look at your lifestyle.

ಪುಟ್ಟಕ್ಕನ ಮಕ್ಕಳು ಸಹನಾ ರವರ ನಿಜ ಜೀವನದ ಫೋಟೋ ನೋಡಿದರೆ ಫಿದಾ ಆಗೋದು ಪಕ್ಕ: ಅದೆಷ್ಟು ಬೋಲ್ಡ್ ಗೊತ್ತೆ??

ಜೀಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಎಲ್ಲಾ ಕನ್ನಡ ಕಿರುತೆರೆ ವೀಕ್ಷಕರು ಬಹಳ ಇಷ್ಟಪಡುವ ಧಾರವಾಹಿ, ಪ್ರತಿವಾರ ಟಿ.ಆರ್.ಪಿ ಲಿಸ್ಟ್ ನಲ್ಲಿ ಪುಟ್ಟಕ್ಕನ ಮಕ್ಕಳು ಧಾರವಾಹಿ ಟಾಪ್ ಸ್ಥಾನದಲ್ಲಿ ಇರುತ್ತದೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರವು ಜನರಿಗೆ ಬಹಳ ಇಷ್ಟವಾಗಿದೆ. ಅದರಲ್ಲು ಪುಟ್ಟಕ್ಕನ ಮೂವರು ಹೆಣ್ಣುಮಕ್ಕಳ ಪಾತ್ರ, ಮಕ್ಕಳು ಅಂದ್ರೆ ಹಾಗಿರಬೇಕು ಎನ್ನುತ್ತಾರೆ ಜನ. ಈ ಧಾರವಾಹಿಯಲ್ಲಿ ಪುಟ್ಟಕ್ಕನ ದೊಡ್ಡ ಮಗಳ ಪಾತ್ರ ಸಹ, ಓದುವುದನ್ನು ಬಿಟ್ಟು, ತಾಯಿ ಜೊತೆಗೆ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ ಸಹನಾ. ಪುಟ್ಟಕ್ಕನಿಗು ಸಹನಾ ಅಂದ್ರೆ ಪ್ರೀತಿ ಹೆಚ್ಚು.

ಸಹನಾಗೆ ಸಪೋರ್ಟ್ ಮಾಡುತ್ತಾರೆ ಪುಟ್ಟಕ್ಕ. ಇನ್ನು ಸಹನಾಳನ್ನು ಮುರಳಿ ಮೇಷ್ಟ್ರು ಪ್ರೀತಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ, ಸಹನಾ ಸಹ ಮುರಳಿ ಮೇಷ್ಟ್ರನ್ನು ಇಷ್ಟಪಡುತ್ತಿದ್ದಾಳೆ, ಆದರೆ ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದಾಳೆ. ಸಹನಾ ಪಾತ್ರ ಹೆಸರಿಗೆ ತಕ್ಕ ಹಾಗೆ ಸಹನೆಯಿಂದಲೇ ಇರುತ್ತಾಳೆ, ಸಹನಾ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ನಿಜವಾದ ಅಕ್ಷರಾ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಹನಾ ಪಾತ್ರದಲ್ಲಿ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಅಕ್ಷರಾ, ನಿಜ ಜೀವನದಲ್ಲಿ ಬಹಳ ಮಾಡರ್ನ್.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಹನಾ ಅವರ ನಿಜ ಜೀವನದ ಫೋಟೋಗಳನ್ನು ನೋಡಿದರೆ, ಧಾರವಾಹಿಯ ಸಹನಾ ಇವರೇನಾ ಎಂದು ಒಂದು ಕ್ಷಣ ಅನುಮಾನ ಬರುವುದು ಸಹಜ. ಅಷ್ಟರ ಮಟ್ಟಿಗೆ ಗುರುತು ಹಿಡಿಯಲು ಸಾಧ್ಯವಾಗದ ಹಾಗೆ ಕಾಣಿಸುತ್ತಾರೆ ಸಹನಾ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ನಟನೆ ಶುರು ಮಾಡಿದ ಬಳಿಕ ಸಹನಾ ಅವರು ಹೆಚ್ಚು ಫೇಮಸ್ ಆಗಿದ್ದಾರೆ. ಅಭಿಮಾನಿಗಳನ್ನು ಸಹ ಹೊಂದಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಕ್ಷರಾ, ನಟನೆಯಲ್ಲಿ ಬಹಳ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅವರ ಎಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸೋಣ.

Comments are closed.