Neer Dose Karnataka
Take a fresh look at your lifestyle.

ತಾವುದೇ ಪುರುಷರಿಗಿಂತಲೂ ಕಡಿಮೆ ಇಲ್ಲದಂತೆ ವರ್ಕ್ ಔಟ್ ಮಾಡುತ್ತಿರುವ ಸಮಂತಾ. ಕಿಕ್ ಏರಿಸುವ ವಿಡಿಯೋ ಹೇಗಿದೆ ಗೊತ್ತೇ?

ನಟಿ ಸಮಂತಾ ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು, ಯಾರದ್ದೇ ಬೆಂಬಲ ಇಲ್ಲದೆ, ಸಹಾಯ ಇಲ್ಲದೆ ಸಮಂತಾ ಅವರು ಇಂದು ಈ ಮಟ್ಟಕ್ಕೆ ತಲುಪಿದ್ದಾರೆ. ಇದೀಗ ಸಮಂತಾ ಅವರು ನಾಗಚೈತನ್ಯ ಅವರೊಡನೆ ಮದುವೆಯಾಗಿ ಅಕ್ಕಿನೇನಿ ಕುಟುಂಬದ ಸೊಸೆಯಾದರು. ಇದರಿಂದ ಅವರ ಅಭಿಮಾನಿಗಳಿಗೆ ಬಹಳ ಸಂತೋಷವಾಯಿತು, ಆದರೆ ಈ ಖುಷಿ ಹೆಚ್ಚು ದಿನಗಳು ಉಳಿಯಲಿಲ್ಲ, ಸಮಂತಾ ಹಾಗು ನಾಗಚೈತನ್ಯ ವಿಚ್ಛೇದನ ಪಡೆದರು, ಇವರಿಬ್ಬರು ಬೇರೆಯಾಗಲು ಕಾರಣ ಏನು ಎಂದು ಕೂಡ ಗೊತ್ತಿಲ್ಲ. ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಗುರುತಿಸಿಕೊಂಡಿರುವ ಸಮಂತಾ, ಸ್ವಲ್ಪ ಸಮಯದಿಂದ ಮೌನವಾಗಿದ್ದಾರೆ. ಸ್ಯಾಮ್ ಯಾಕೆ ಆಕ್ಟಿವ್ ಆಗಿಲ್ಲ ಎಂದು ಅವರ ಅಭಿಮಾನಿ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಸಮಂತಾ ಅವರು ಒಂದು ಸ್ಕಿನ್ ಡಿಸಿಜ್ ಇಂದ ಬಳಲುತ್ತಿದ್ದಾರೆ ಎನ್ನುವ ವಿಷಯ ಅವರ ಎಲ್ಲಾ ಅಭಿಮಾನಿಗಳಿಗೆ ಶಾಕ್ ನೀಡಿತು. ಕಾಸ್ಮೆಟಿಕ್ಸ್, ಪೌಡರ್, ಕ್ರೀಮ್ ಇವುಗಳಿಂದಾಗಿ ಸ್ಯಾಮ್ ಅವರಿಗೆ ಚರ್ಮದ ಸಮಸ್ಯೆ ಉಂಟಾಗಿದೆ ಎನ್ನುವ ವಿಚಾರ ಸದ್ದು ಮಾಡುತ್ತಿದೆ. ಈ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಚಿತ್ರೀಕರಣಗಳಿಂದ ಬ್ರೇಕ್ ಪಡೆದು, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಾರೆ ಎನ್ನುವ ವಿಷಯ ಸಹ ತಿಳಿದುಬಂದಿದೆ. ಆದರೆ ಈ ವಿಷಯಗಳ ಬಗ್ಗೆ ಸಮಂತಾ ಅವರ ಮ್ಯಾನೇಜರ್ ಮಾತನಾಡಿ, ಇದೆಲ್ಲವೂ ಸುಳ್ಳು ಸುದ್ದಿಗಳು, ಸಮಂತಾ ಆರೋಗ್ಯವಾಗಿದ್ದರೆ ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಸಮಂತಾ ಅವರು ಅಮೆರಿಕಾಗೆ ಹೋಗುತ್ತಿರುವುದು ಯಾಕೆ ಎನ್ನುವ ಪ್ರಶ್ನೆಗೆ ಅವರು ಉತ್ತರ ಕೊಟ್ಟಿಲ್ಲ.

ಈ ವಯಸ್ಸಿನಲ್ಲಿ ಕೂಡ ಸಮಂತಾ ಅವರು ಬಹಳ ಸ್ಟ್ರಾಂಗ್ ಆಗಿದ್ದಾರೆ, ಇದಕ್ಕೆ ಕಾರಣ ಸಮಂತಾ ಅವರು ಒಂದು ದಿನವು ತಪ್ಪಿಸದೆ ವರ್ಕೌಟ್ ಮಾಡುತ್ತಾರೆ. ಪ್ರತಿದಿನ ವರ್ಕೌಟ್ ಗಾಗಿ ಸಮವ ನಿಗದಿ ಮಾಡಿರುತ್ತಾರೆ. ಭಾರ ಹೊರುವ ವರ್ಕೌಟ್, ಕಷ್ಟದ ವ್ಯಾಯಾಮಗಳನ್ನು ಸಮಂತಾ ಅವರು ಮಾಡುವುದು ಎಲ್ಲರಿಗು ಆಶ್ಚರ್ಯ ತಂದಿದೆ. ಆಹಾರದ ಬಗ್ಗೆ ಸಮಂತಾ ಅವರು ಬಹಳ ಕಾಳಜಿ ವಹಿಸುತ್ತಾರೆ, ಪ್ರತಿದಿನ ಹಸಿರು ಆಹಾರ ತಿನ್ನುತ್ತಾರೆ, ಮೊಟ್ಟೆ ಮತ್ತು ಬೆಣ್ಣೆಯನ್ನು ಇಂತಿಷ್ಟು ಎಂದು ಸೀಮಿತವಾಗಿ ಸೇವಿಸುತ್ತಾರೆ. ಆಹಾರವನ್ನು ಲಿಮಿಟೆಡ್ ಆಗಿ ಸೇವಿಸುತ್ತಾರೆ. ಇದರಿಂದಲೇ ಸಮಂತಾ ಅವರು ಈಗಲೂ ಸ್ಟ್ರಾಂಗ್ ಆಗಿದ್ದಾರೆ ಎಂದು ಗೊತ್ತಾಗುತ್ತದೆ. ನಿಮ್ಮೆಲ್ಲರಿಗೂ ಆಶ್ಚರ್ಯ ತರುವ ಸಮಂತಾ ಅವರ ವರ್ಕೌಟ್ ವಿಡಿಯೋವನ್ನು ತಪ್ಪದೆ ನೋಡಿ..

Comments are closed.