Neer Dose Karnataka
Take a fresh look at your lifestyle.

ಒಹ್ ಹೊ: ಕೊನೆಗೂ ಫಿಕ್ಸ್ ಆಯಿತು ಅನುಷ್ಕಾ ಮದುವೆ; ಹುಡುಗ ಅದೆಂತಹ ವ್ಯಾಪಾರ ಮಾಡುತ್ತಿದ್ದಾನೆ ಗೊತ್ತೇ??

3,156

ಟಾಲಿವುಡ್ ನಲ್ಲಿ ವಯಸ್ಸು ಹೆಚ್ಚಾದರು ಇನ್ನು ಮದುವೆ ಆಗದೆ ಇರುವ ಕಲಾವಿದರು ಯಾರು ಎಂದು ಕೇಳಿದರೆ, ಪ್ರಭಾಸ್ ಅನುಷ್ಕಾ ಎಂದು ಅಭಿಮಾನಿಗಳು ಬಹಳ ಸುಲಭವಾಗಿ ಹೇಳುತ್ತಾರೆ. ಏಕೆಂದರೆ ಇವರಿಬ್ಬರು ಸಕ್ಸಸ್ ಫುಲ್ ಆನ್ ಸ್ಕ್ರೀನ್ ಜೋಡಿ, ಈ ಹಿಂದೆ ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ, ಮದುವೆ ಆಗುತ್ತಾರೆ ಎಂದು ಸುದ್ದಿಗಳು ಜೋರಾಗಿಯೇ ಕೇಳಿಬಂದಿದ್ದವು. ಬಿಲ್ಲಾ ಸಿನಿಮಾದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ ಈ ಜೋಡಿ, ಬಾಹುಬಲಿ 2 ಪಾರ್ಟ್ ಬಂದು ಹೋದರು ಸಹ ಇನ್ನು ಮದುವೆಯಾಗಿಲ್ಲ. ಬಾಹುಬಲಿ ಬಳಿಕ ಅನುಷ್ಕಾ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ಬಾಹುಬಲಿ2 ಬಿಡುಗಡೆ ಆಗುವ ಮೊದಲು ಸೈಜ್ ಜೀರೋ ಸಿನಿಮಾದಲ್ಲಿ ನಟಿಸಿದರು, ಈ ಸಿನಿಮಾಗಳು ಅನುಷ್ಕಾ ಅವರಿಗೆ ಕೊನೆಯ ಸಿನಿಮಾಗಳಾದವು ಎನ್ನುವ ಮಾತಿದೆ ಏಕೆಂದರೆ ಅನುಷ್ಕಾ ಅವರಿಗೆ ವಯಸ್ಸು ಹೆಚ್ಚಾಗುತ್ತಾ ಹೋಯಿತು. ಅವರ ಎತ್ತರಕ್ಕೆ ಮ್ಯಾಚ್ ಆಗುವ ಹೀರೋಗಳು ಸಹ ಇಲ್ಲ, ಪ್ರಭಾಸ್ ಅವರೊಡನೇ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದರು. ಈಗಿನ ಹೀರೋಗಳ ಜೊತೆಗೆ ಅನುಷ್ಕಾ ಅವರು ನಾಯಕಿಯಾಗಿ ನಟಿಸಲು ಚಾನ್ಸ್ ಇಲ್ಲ. ಕೆಲವರ ಜೊತೆಗೆ ನಟಿಸಿದರು ಸಹ, ಅನುಷ್ಕಾ ಅವರಿಗೆ ಈಗ ಹೇಳಿಕೊಳ್ಳುವ ಹಾಗೆ, ದೊಡ್ಡ ಆಫರ್ ಗಳು ಯಾವುದು ಬರುತ್ತಿಲ್ಲ. ಇಂಡಸ್ಟ್ರಿಗೆ ಹೊಸ ನಟಿಯರು ಬಂದ ಕಾರಣ ಅನುಷ್ಕಾ ಅವರ ಕ್ರೇಜ್ ಕಡಿಮೆ ಆಯಿತು ಎನ್ನಲಾಗುತ್ತಿದೆ. ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ರೀತಿಯಲ್ಲಿ ಹೆಸರು ಮಾಡಿದ ನಟಿ ವಿಜಯಶಾಂತಿ ಅವರ ಹಾಗೆ ಬೆಳೆದವರು ಅನುಷ್ಕಾ ಶೆಟ್ಟಿ.

ಇವರನ್ನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಅಮ್ಮನ ಪಾತ್ರಗಳಲ್ಲಿ ನಟಿಸಿ ಎಂದು ಕೇಳುವ ಸಾಹಸಕ್ಕೆ ನಿರ್ಮಾಪಕರು ಮತ್ತು ನಿರ್ದೇಶಕರು ಕೈಹಾಕುತ್ತಿಲ್ಲ. ಸಿನಿಮಾ ಮಾಡುತ್ತಿಲ್ಲವಲ್ಲ ಮದುವೆ ಮಾಡ್ಕೊ ಎಂದು ತಂದೆ ತಾಯಿ ಹೇಳಿದರೆ ಅದಕ್ಕೆ ನೋ ಎನ್ನುತ್ತಿದ್ದಾರಂತೆ ಅನುಷ್ಕಾ. ಪ್ರಭಾಸ್ ಅನುಷ್ಕಾ ಜೋಡಿ ಚೆನ್ನಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ, ಆದರೆ ಇವರಿಬ್ಬರು ಮಾತ್ರ, ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂದು ಹೇಳಿ, ಮದುವೆಗೆ ನೋ ಎನ್ನುತ್ತಿದ್ದಾರೆ. ಅನುಷ್ಕಾ ಅವರ ತಂದೆ ತಾಯಿ ತಮ್ಮ ಮಗಳಿಗಾಗಿ ಚಿನ್ನದ ವ್ಯಾಪಾರ ಮಾಡುವ ಬ್ಯುಸಿನೆಸ್ ಮ್ಯಾನ್ ಒಬ್ಬರನ್ನು ನೋಡಿದ್ದಾರಂತೆ, ಅವರಿಗೆ ಹೈದರಾಬಾದ್ ನಲ್ಲಿ 25 jewellery shop ಗಳು ಇದೆಯಂತೆ. ಶೀಘದಲ್ಲೇ ಅವರಿಬ್ಬರ ಮದುವೆ ನಡೆಯಲಿದೆ ಎಂದು ಇಂಡಸ್ಟ್ರಿಯಲ್ಲಿ ಹೊಸ ವಿಷಯ ಸದ್ದು ಮಾಡುತ್ತಿದೆ. ಇದು ಖಚಿತವಾದ ವಿಷಯ ಎಂದು ಅನುಷ್ಕಾ ಅವರ ಆಪ್ತರ ಕಡೆಯಿಂದ ಕೇಳಿಬಂದಿರುವ ವಿಚಾರ ಆಗಿದೆ.

Leave A Reply

Your email address will not be published.