Neer Dose Karnataka
Take a fresh look at your lifestyle.

ಎಲ್ಲಿ ನೋಡಿದರೂ ಕನ್ನಡತಿಯರದ್ದೇ ಹವಾ: ತೆಲುಗಿನಲ್ಲಿ ಈಗ ಮಿಂಚುತ್ತಿರುವ ಟಾಪ್ ಕನ್ನಡತಿಯರು ಯಾರ್ಯಾರು ಗೊತ್ತೇ??

ಕೆಜಿಎಫ್ ಸಿನಿಮಾ ಬಿಡುಗಡೆಯಾದ ಬಳಿಕ ನಮ್ಮ ಕನ್ನಡ ಚಿತ್ರರಂಗದ ಮಾರ್ಕೆಟ್ ಬಹಳ ಎತ್ತರಕ್ಕೆ ಏರಿದೆ ಎಂದರೆ ತಪ್ಪಾಗುವುದಿಲ್ಲ. ಕನ್ನಡ ಸಿನಿಮಾಗಳನ್ನು ಈಗ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೀಕ್ಷಣೆ ಮಾಡಲಾಗುತ್ತಿದೆ. ಸೆಂಚುರಿ ಸ್ಟಾರ್ ಶಿವಣ್ಣ, ಯಶ್, ಸುದೀಪ್, ದರ್ಶನ್, ರಕ್ಷಿತ್ ಶೆಟ್ಟಿ ಎಲ್ಲರು ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ನಾಯಕರು ಮಾತ್ರವಲ್ಲದೆ ಕನ್ನಡ ಚಿತ್ರರಂಗದ ನಟಿಯರಿಗು ಕೂಡ ಈಗ ಬೇರೆ ಭಾಷೆಗಳಲ್ಲಿ ಬಹು ಬೇಡಿಕೆ ಇದೆ. ರಶ್ಮಿಕಾ ಅವರಿಂದ ಹಿಡಿದು ಶ್ರೀಲೀಲಾ ಅವರ ವರೆಗು ತೆಲುಗು ಭಾಷೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ತೆಲುಗಿನಲ್ಲಿ ಈಗ ಸದ್ದು ಮಾಡುತ್ತಿರುವ ಮತ್ತು ಮುಂದೆ ಸದ್ದು ಮಾಡಲು ಸಜ್ಜಾಗಿರುವ ಕನ್ನಡ ನಟಿಯರ ಬಗ್ಗೆ ಇಂದು ನಿಮಗೆ ತಿಳಿಸುತೇವೆ.

ನಿತ್ಯಾ ಮೆನನ್ :- ಮುದ್ದು ಮುಖದ ನಿತ್ಯಾ ಮೆನನ್ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಕನ್ನಡ ಸಿನಿಮಾ ಮೂಲಕ ನಟನೆ ಶುರು ಮಾಡಿದ ನಿತ್ಯಾ ತೆಲುಗಿನಲ್ಲಿ ಹೆಸರು ಮಾಡಿದ್ದಾರೆ, ಇತ್ತೀಚೆಗೆ ಭೀಮ್ಲಾ ನಾಯಕ್ ಸಿನಿಮಾದಲ್ಲಿ ನಟಿಸಿದರು, ತಮಿಳು ಮತ್ತು ಮಲಯಾಳಂ ನಲ್ಲಿ ಸಹ ನಿತ್ಯಾ ಮೆನನ್ ಅವರಿಗೆ ಬಹಳ ಬೇಡಿಕೆ ಇದೆ.
ಪ್ರಣೀತಾ ಸುಭಾಷ್ :- ಬೆಂಗಳೂರಿನ ಹುಡುಗಿ ಪ್ರಣೀತಾ ಸುಭಾಷ್ ದರ್ಶನ್ ಅವರೊಡನೆ ಪೊರ್ಕಿ ಸಿನಿಮಾ ಮೂಲಕ ನಾಯಕಿಯಾದರು. ಬಳಿಕ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ನಟಿಸಿದ್ದಾರೆ. ತೆಲುಗಿನ ಸ್ಟಾರ್ ನಟರ ಸಿನಿಮಾದಲ್ಲಿ ತೆರೆಹಂಚಿಕೊಂಡು ಸ್ಟಾರ್ ಸ್ಟೇಟಸ್ ಪಡೆದಿದ್ದಾರೆ ಪ್ರಣೀತಾ.
ನಿಷ್ವಿಕಾ ನಾಯ್ಡು :- ಅಮ್ಮ ಐ ಲವ್ ಯೂ ಇತ್ತೀಚಿನ ಗುರು ಶಿಷ್ಯರು ಸಿನಿಮಾ ಮೂಲಕ ಹೆಸರು ಮಾಡಿರುವ ನಿಷ್ವಿಕಾ ನಾಯ್ಡು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ.

ಸೋನಲ್ ಮೊಂಟೆರಿಯೋ :- ಕರಾವಳಿ ಬೆಡಗಿ ಆಗಿರು ಸೋನಲ್ ಹೆಚ್ಚು ಫೇಮಸ್ ಆಗಿದ್ದು ದರ್ಶನ್ ಅವರ ರಾಬರ್ಟ್ ಸಿನಿಮಾ ಮೂಲಕ. ಬುದ್ಧಿವಂತ2 ಸಿನಿಮಾಗು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಸೋನಲ್. ಇವರು ಕೂಡ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ಶ್ರದ್ಧಾ ಶ್ರೀನಾಥ್ :- ಕನ್ನಡದ ಯೂಟರ್ನ್ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಶ್ರದ್ಧಾ ಶ್ರೀನಾಥ್, ವಿಕ್ರಂ ವೇದ, ಜೆರ್ಸಿ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ.
ಭಾವನಾ ಮೆನನ್ :- ಮೂಲತಃ ಕೇರಳದವರಾದರು ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಭಾವನಾ ಅವರಿಗೆ ತೆಲುಗಿನಲ್ಲಿ ಭಾರಿ ಬೇಡಿಕೆ ಇದೆ. ತಮಿಳಿನಲ್ಲು ಕೂಡ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಐಂದ್ರಿತಾ ರೇ :- ಬೆಂಗಾಲಿಯವರಾದರು ಕರ್ನಾಟಕದಲ್ಲಿ ಬೆಳೆದು, ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವವರು ಐಂದ್ರಿತಾ. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಐಂದ್ರಿತಾ ರೇ ಅವರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.
ಶ್ರೀನಿಧಿ ಶೆಟ್ಟಿ :- ಕೆಜಿಎಫ್1 ಮತ್ತು ಕೆಜಿಎಫ್2 ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕರಾವಳಿ ಬೆಡಗಿ ಶ್ರೀನಿಧಿ ಶೆಟ್ಟಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಆಗಿದೆ , ಈಗ ತೆಲುಗಿಗು ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ.
ರಚಿತಾ ರಾಮ್ :- ಚಂದನವನದ ಮಾಸ್ ನಟಿ, ಬ್ಯುಸಿಯೆಸ್ಟ್ ನಟಿ ಎನ್ನಿಸಿಕೊಂಡಿರುವವರು ರಚಿತಾ ರಾಮ್. ಸೂಪರ್ ಮಚ್ಚಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ರಚಿತಾ ರಾಮ್ ಅವರಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ.

ಆಶಿಕಾ ರಂಗನಾಥ್ :- ರಾಂಬೋ2 ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್, ಹಲವು ಸಿನಿಮಾಗಳ ಮೂಲಕ ಕನ್ನಡದಲ್ಲಿ ಮಿಂಚಿ ಸ್ಟಾರ್ ಆಗಿದ್ದಾರೆ, ಶೀಘ್ರದಲ್ಲೇ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.
ಶಾನ್ವಿ ಶ್ರೀವಾಸ್ತವ್ :- ವಾರಣಾಸಿ ಹುಡುಗಿಯಾಗಿರುವ ಶಾನ್ವಿ ಅವರಿಗೆ ಹೆಸರು ಬಂದಿದ್ದು ಕನ್ನಡ ಚಿತ್ರರಂಗದ ಮೂಲಕ. ಇಂದು ಶಾನ್ವಿ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗಿಗು ಶೀಘ್ರದಲ್ಲೇ ಎಂಟ್ರಿ ಕೊಡಲಿದ್ದಾರೆ.
ಅದಿತಿ ಪ್ರಭುದೇವ :- ನಾಗಕನ್ನಿಕೆ ಧಾರವಾಹಿಯಿಂದ ನಟನೆ ಶುರು ಮಾಡಿದ ಅದಿತಿ ಇಂದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಎನ್ನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಇವರಿಗೆ ಭಾರಿ ಬೇಡಿಕೆ ಇದೆ, ತೆಲುಗು ಚಿತ್ರರಂಗಕ್ಕು ಎಂಟ್ರಿ ಕೊಡಲಿದ್ದಾರೆ.
ಸಂಜನಾ :- ಕನ್ನಡದ ಸೂಪರ್ ಹಿಟ್ ಸಿನಿಮಾ ಸಲಗ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಸಂಜನಾ, ಮೊದಲ ಸಿನಿಮಾದಲ್ಲೇ ಯಶಸ್ಸು ಪಡೆದರು. ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಶ್ರೀಲೀಲಾ :- ಕಿಸ್ ಸಿನಿಮಾ ಮೂಲಕ ನಾಯಕಿಯಾದ ಶ್ರೀಲೀಲಾ ತೆಲುಗಿನಲ್ಲಿ ಈಗಾಗಲೇ ಪೆಲ್ಲಿ ಸಂದಡಿ ಸಿನಿಮಾದಲ್ಲಿ ನಟಿಸಿ, ಹೆಸರು ಮಾಡಿದ್ದಾರೆ. ತೆಲುಗಿನಲ್ಲಿ ಇವರಿಗೆ ಹೆಚ್ಚಿನ ಬೇಡಿಕೆ ಇದೆ.
ಪೂಜಾ ಹೆಗ್ಡೆ :- ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಇಂದಿಗು ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ ತೆಲುಗಿನಲ್ಲಿ ಇವರಿಗೆ ಭಾರಿ ಬೇಡಿಕೆ ಇದೆ, ತೆಲುಗು ಮತ್ತು ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಎಲ್ಲಾ ಸ್ಟಾರ್ ಗಳ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ ಪೂಜಾ ಹೆಗ್ಡೆ.
ರಶ್ಮಿಕಾ ಮಂದಣ್ಣ :- ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಹೀರೋಯಿನ್ ಆದ ರಶ್ಮಿಕಾ ಮಂದಣ್ಣ, ಹೆಚ್ಚು ಯಶಸ್ಸು ಪಡೆದದ್ದು ತೆಲುಗಿನಲ್ಲಿ. ಪ್ರಸ್ತುತ, ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಯ ಸಿನಿಮಾಗಳಲ್ಲು ಬ್ಯುಸಿ ಆಗಿದ್ದಾರೆ.

Comments are closed.