Neer Dose Karnataka
Take a fresh look at your lifestyle.

ನಾನು ನಿಜಕ್ಕೂ ಅಷ್ಟು ಸಂಭಾವನೆ ಕೇಳಿಲ್ಲ ಎಂದು ನಿಜ ಒಪ್ಪಿಕೊಂಡ ಶ್ರೀನಿಧಿ ಶೆಟ್ಟಿ. ಹೇಳಿದ್ದೇನು ಗೊತ್ತೇ?

ಕೆಜಿಎಫ್ ಕ್ವೀನ್ ನಟಿ ಶ್ರೀನಿಧಿ ಶೆಟ್ಟಿ ಅವರು ಮೊದಲ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ನಟಿ ಎಂದು ಗುರುತಿಸಿಕೊಂಡವರು. ಕರಾವಳಿ ಬೆಡಗಿ ಶ್ರೀನಿಧಿ, ಮೂರು ಸಿನಿಮಾಗಳ ಮೂಲಕ ಬಹಳ ಪಾಪ್ಯುಲಾರಿಟಿ ಪಡೆದುಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್1, ಕೆಜಿಎಫ್ ಚಾಪ್ಟರ್2 ಮತ್ತು ಕೋಬ್ರಾ ಈ ಮೂರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಶ್ರೀನಿಧಿ ಅವರಿಗೆ ಒಳ್ಳೆಯ ಫ್ಯಾನ್ ಬೇಸ್ ಸಹ ಇದೆ. ಆದರೆ ಈ ನಟಿಯ ಬಗ್ಗೆ ಕೆಲವು ದಿನಗಳ ಹಿಂದೆ ಒಂದು ರೂಮರ್ ಕೇಳಿಬಂದಿತ್ತು. ಶ್ರೀನಿಧಿ ಅವರು ಭಾರಿ ಸಂಭಾವನೆ ಕೇಳುತ್ತಿರುವ ಕಾರಣ ಅವರಿಗೆ ಯಾವುದೇ ಆಫರ್ ಬಂದಿಲ್ಲ ಎನ್ನಲಾಗಿತ್ತು.

ಸಿನಿಮಾ ನಿರ್ಮಾಪಕರು ನಿರ್ದೇಶಕರು ಭಾರಿ ಮೊತ್ತದ ಸಂಭಾವನೆ ಕೇಳಿ ಅವರೊಡನೆ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಹ ಸುದ್ದಿಗಳು ಕೇಳಿಬಂದಿದ್ದವು. ಆ ಎಲ್ಲಾ ಸುದ್ದಿಗಳಿಗು ಕೂಡ ಶ್ರೀನಿಧಿ ಅವರು ಕ್ಲಾರಿಟಿ ನೀಡಿದ್ದಾರೆ. ಇತ್ತೀಚೆಗೆ ಲೈವ್ ಬಂದು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಶ್ರೀನಿಧಿ ಅವರು, ಈ ಸಂಭಾವನೇ ವಿಚಾರದ ಬಗ್ಗೆ ಸಹ ಮಾತನಾಡಿದ್ದಾರೆ, ನಾನು ಅಷ್ಟು ದುಬಾರಿ ಸಂಭಾವನೆ ಕೇಳಿಲ್ಲ, ಸಂಭಾವನೆ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಸ್ಪ್ರೆಡ್ ಮಾಡಲಾಗಿದೆ, ಅಷ್ಟು ದುಬಾರಿ ಮೊತ್ತದ ಸಂಭಾವನೆ ನಾನು ಡಿಮ್ಯಾಂಡ್ ಮಾಡಿಲ್ಲ, ಕೆಲವು ಕಥೆಗಳನ್ನು ಕೇಳುತ್ತಿದ್ದೇನೆ ಶೀಘ್ರದಲ್ಲೇ ಹೊಸ ಸಿನಿಮಾ ಸೈನ್ ಮಾಡುತ್ತೇನೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಅಭಿಮಾನಿಗಳ ಇನ್ನು ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ, ಮದುವೆ ಬಗ್ಗೆ ಮಾತನಾಡಿ ಸಧ್ಯಕ್ಕೆ ಮದುವೆ ಆಗುವ ಯೋಚನೆ ಇಲ್ಲ ಎಂದು ಹೇಳಿದ್ದಾರೆ. ಹಾಗು ತೆಲುಗು ಚಿತ್ರರಂಗದಲ್ಲಿ ಎಸ್.ಎಸ್.ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಇದೆ, ಆ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ತಾವು ನಟಿಸಿದ ಮೂರು ಸಿನಿಮಾಗಳನ್ನು ನೋಡಿ ಪ್ರೋತ್ಸಾಹ ನೀಡಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದ ತಿಳಿಸಿ ತಮಗೆ ಹೀಗೆ ಪ್ರೋತ್ಸಾಹ ಪ್ರೀತಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ ಶ್ರೀನಿಧಿ ಶೆಟ್ಟಿ.

Comments are closed.