ಬುಮ್ರಾ ಇಂಜುರಿ ಬಗ್ಗೆ ಮಾತನಾಡಿದ ವಾಸಿಂ ಜಾಫರ್ ಹೇಳಿದ್ದೇನು ಗೊತ್ತೇ?? ಸಲಹೆ ಕೇಳಿ ನೆಟ್ಟಿಗರು ಗರಂ ಆಗಿದ್ದು ಗೊತ್ತೇ??
ಜಸ್ಪ್ರೀತ್ ಬುಮ್ರ ಅವರಿಗೆ ಮತ್ತೊಮ್ಮೆ ಬೆನ್ನು ನೋವು ಉಲ್ಬಣವಾಗಿರುವ ವಿಚಾರ ಈಗ ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಗಿದೆ. ಭಾರತ ತಂಡದ ಯಾರ್ಕರ್ ಕಿಂಗ್ ಎಂದು ಹೆಸರು ಮಾಡಿದ್ದ ಬುಮ್ರ ಅವರು ಕೆಲ ದಿನಗಳಿಂದ ಬೆನ್ನುನೋವಿನ ಸಮಸ್ಯೆ ಇಂದ ಭಾರತ ತಂಡದಿಂದ ಹೊರಗೆ ಉಳಿದಿದ್ದರು. ಆಸ್ಟ್ರೇಲಿಯಾ ವಿರುದ್ಧದ 2ನೇ ಸರಣಿ ಪಂದ್ಯಕ್ಕೆ ವಾಪಸ್ ಬಂದ ಬುಮ್ರ ಅವರು ಆರೋನ್ ಫಿಂಚ್ ಅವರ ವಿಕೆಟ್ ಪಡೆದು, ಅದ್ಭುತವಾದ ಬೌಲಿಂಗ್ ಮಾಡಿದರು. ಆದರೆ ಮೂರನೆಯ ಹಾಗೂ ಕೊನೆಯ ಪಂದ್ಯದಲ್ಲಿ 4 ಓವರ್ ಗಳಲ್ಲಿ 50 ರನ್ ಬಿಟ್ಟುಕೊಟ್ಟರು.
ಎರಡು ಪಂದ್ಯಗಳನ್ನಾಡಿದ ಬಳಿಕ ಬುಮ್ರ ಅವರು ಬೆನ್ನು ನೋವು ಎಂದು ತಿಳಿಸಿದ ಕಾರಣ, ಸೌತ್ ಆಫ್ರಿಕಾ ಸರಣಿಯ ಮೊದಲ ಪಂದ್ಯದಲ್ಲಿ ಬುಮ್ರ ಅವರು ಕಾಣಿಸಿಕೊಳ್ಳಲಿಲ್ಲ. ಬಳಿಕ ಈಗ ಕೇಳಿ ಬರುತ್ತಿರುವ ವಿಚಾರ ಏನೆಂದರೆ, ಬುಮ್ರ ಅವರಿಗೆ ಬೆನ್ನು ನೋವು ಹೆಚ್ಚಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಸುವ ಅವಶ್ಯಕತೆ ಇಲ್ಲದೆ ಹೋದರು, 4 ರಿಂದ 5 ತಿಂಗಳು ಬೆಡ್ ರೆಸ್ಟ್ ಅವಶ್ಯಕತೆ ಇದೆ ಎಂದು ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ಈಗ ಭಾರತ ತಂಡದ ಮಾಜಿ ಆಟಗಾರ ವಾಸಿಂ ಜಾಫರ್ ಅವರು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಬುಮ್ರ ಅವರಿಗೆ ಇನ್ನು ಸ್ವಲ್ಪ ಸಮಯ ನೀಡಿದ್ದರು ಪೂರ್ತಿಯಾಗಿ ಚೇತರಿಸಿಕೊಂಡು ಬರುತ್ತಿದ್ದರು. ಬುಮ್ರ ಅವರ ವಿಚಾರದಲ್ಲಿ ಭಾರತ ತಂಡದ ಆಯ್ಕೆ ಸಮಿತಿ ಆತುರ ಮಾಡಿತು, ಅಸ್ಟ್ರೇಲಿಯಾ ವಿರುದ್ಧದ ಸರಣಿ ಪಂದ್ಯಕ್ಕೆ ಬುಮ್ರ ಬರಬೇಕು ಎಂದು ತಾಕೀತು ಮಾಡಿದ ಕಾರಣ, ಎರಡು ಪಂದ್ಯಗಳ ಬಳಿಕ ಅವರಿಗೆ ಬೆನ್ನು ನೋವು ಹೆಚ್ಚಾಗಿ, ಮತ್ತೆ ಆರೋಗ್ಯ ಹದಗೆಡುವ ಹಾಗೆ ಆಯಿತು. ಒತ್ತಡ ಕೊಡದೆ ಹಾಗೆಯೇ ಬಿಟ್ಟಿದ್ದರು, ವಿಶ್ವಕಪ್ ಶುರುವಾಗುವ ಹೊತ್ತಿಗೆ ಬುಮ್ರ ಅವರು ಸಂಪೂರ್ಣವಾಗಿ ಗುಣಮುಖರಾಗಿರುತ್ತಿದ್ದರು..” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ವಾಸಿಂ ಜಾಫರ್.. ಪ್ರಸ್ತುತ ಬುಮ್ರ ಅವರು ವಿಶ್ವಕಪ್ ಇಂದ ಹೊರಗುಳಿದಿರುವುದು ಭಾರತ ತಂಡಕ್ಕೆ ತಲೆನೋವಾಗಿದ್ದು, ಇವರ ಬದಲಾಗಿ ಯಾವ ಆಟಗಾರನನ್ನು ಮ್ಯಾನೇಜ್ಮೆಂಟ್ ಆಯ್ಕೆ ಮಾಡುತ್ತದೆ ಎಂದು ಕಾದು ನೋಡಬೇಕಿದೆ.