Neer Dose Karnataka
Take a fresh look at your lifestyle.

ತನ್ನ ಹಳೆ ಬಾಯ್ ಫ್ರೆಂಡ್ ಗಳ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ರಶ್ಮಿಕಾ: ಈಗಲೂ ಕಾಂಟಾಕ್ಟ್ ನಲ್ಲಿ ಇದ್ದಾರೆ, ಅವರ ಪೋಷಕರನ್ನು ಭೇಟಿ ಆಗ್ತೇನೆ ಎಂದು ಹೇಳಿದ್ದೇನು ಗೊತ್ತೇ??

ನಟಿ ರಶ್ಮಿಕಾ ಮಂದಣ್ಣ ಈಗ ಬಹಳ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಅಭಿನಯದ ಮೊದಲ ಹಿಂದಿ ಸಿನಿಮಾ ಗುಡ್ ಬೈ ಮುಂದಿನ ಶುಕ್ರವಾರ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಅವರು ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಇದು ಬಹಳ ಸ್ಪೆಶಲ್ ಎಂದು ಹೇಳಬಹುದು. ಈ ಸಿನಿಮಾ ಪ್ರೊಮೋಶನ್ ಗಳಿಗಾಗಿ ಬೇರೆ ಬೇರೆ ಊರುಗಳಿಗೆ ಹೋಗಿ ಪ್ರಚಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಿನಿಮಾ ಬಗೆಗಿನ ಸಂದರ್ಶನದಲ್ಲಿ ತಮ್ಮ ಎಕ್ಸ್ ಗಳ ಬಗ್ಗೆ ಮಾತನಾಡಿದ್ದಾರೆ.

ಎಕ್ಸ್ ಗಳ ವಿಚಾರದ ಬಗ್ಗೆ ಪ್ರಶ್ನೆ ಕೇಳಿದಾಗ, ನಾನು ಈಗಲೂ ನನ್ನ ಎಕ್ಸ್ ಗಳ ಜೊತೆಗೆ ಫ್ರೆಂಡ್ಲಿ ಆಗಿದ್ದೇನೆ.. ಅವರ ಪೋಷಕರ ಜೊತೆಗು ನಾನು ಮಾತನಾಡುತ್ತೇನೆ. ಇದು ಒಳ್ಳೆಯ ಅಭ್ಯಾಸ ಅಲ್ಲ ಎಂದು ನನಗೆ ಗೊತ್ತಿದೆ. ಆದರೆ ನಾನು ಅವರೊಡನೆ ಫ್ರೆಂಡ್ಲಿ ಆಗಿದ್ದೇನೆ, ಅದು ಒಳ್ಳೆಯದು.. ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಈ ಹಿಂದೆ ರಶ್ಮಿಕಾ ಅವರು ನಟ ರಕ್ಷಿತ್ ಶೆಟ್ಟಿ ಅವರೊಡನೆ ಎಂಗೇಜ್ಮೆಂಟ್ ಮಾಡಿಕೊಂಡು, ನಂತರ ಮುರಿದುಕೊಂಡರು. ಬಳಿಕ ವಿಜಯ್ ದೇವರಕೊಂಡ ಅವರೊಡನೆ ರಶ್ಮಿಕಾ ರಿಲೇಶನ್ಷಿಪ್ ನಲ್ಲಿದ್ದಾರೆ ಎಂದು ಸುದ್ದಿಗಳು ಕೇಳಿಬಂದಿದ್ದವು. ಆದರೆ ರಶ್ಮಿಕಾ ಮತ್ತು ವಿಜಯ್ ಇಬ್ಬರು ಸಹ ಈ ಮಾತನ್ನು ತಳ್ಳಿ ಹಾಕುತ್ತಲೇ ಬಂದಿದ್ದಾರೆ.

ಕೆಲವು ಮಾಧ್ಯಮಗಳು ಬೇರೆ ವರದಿಯನ್ನೇ ಮಾಡಿದೆ, ವಿಜಯ್ ದೇವರಕೊಂಡ ಅವರೊಡನೆ ರಶ್ಮಿಕಾ ರಿಲೇಶನ್ಷಿಪ್ ನಲ್ಲಿದ್ದರು, ಈಗ ಇಬ್ಬರು ಜೊತೆಯಾಗಿಲ್ಲ ಎಂದು ವರದಿ ಮಾಡಲಾಗಿದೆ. ಆದರೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ರಶ್ಮಿಕಾ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ, ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

Comments are closed.