Neer Dose Karnataka
Take a fresh look at your lifestyle.

ಅವಕಾಶ ಕೊಟ್ಟು ಬೆಳೆಸಿದ ಕಿರಿಕ್ ಪಾರ್ಟಿ ತಂಡಕ್ಕೆ ಸರಿಯಾಗಿಯೇ ಬತ್ತಿ ಇಟ್ಟ ರಶ್ಮಿಕಾ: ತಂಡದ ಬಗ್ಗೆ ಹೇಳಿದ್ದೇನು ಗೊತ್ತೇ??

1,177

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಸಾಲು ಸಾಲು ಸಿನಿಮಾಗಳಲ್ಲಿ, ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಮುಂದಿನವಾರ ರಶ್ಮಿಕಾ ಅಭಿನಯದ ಹಿಂದಿ ಸಿನಿಮಾ ಗುಡ್ ಬೈ ತೆರೆಕಾಣುತ್ತಿದ್ದು, ಈ ಸಿನಿಮಾಗಾಗಿ ಹಲವು ಹಿಂದಿ ಇಂಟರ್ವ್ಯೂಗಳಲ್ಲಿ ಭಾಗಿಯಾಗುತ್ತಿದ್ದಾರೆ ರಶ್ಮಿಕಾ, ಇಂಟರ್ವ್ಯೂನಲ್ಲಿ ಮಾತನಾಡುವಾಗ, ಮೊದಲ ಸಿನಿಮಾ ಕಿರಿಕ್ ಪಾರ್ಟಿಯಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಹೇಗೆ ಎಂದು ತಿಳಿಸಿ, ಮೊದಲ ಸಿನಿಮಾ ತಂಡದ ಬಗ್ಗೆಯೇ ಶಾಕಿಂಗ್ ಹೇಳಿಕೆ ನೀಡಿದ್ದಾರೆ ರಶ್ಮಿಕಾ. ಅಷ್ಟಕ್ಕೂ ರಶ್ಮಿಕಾ ಹೇಳಿದ್ದೇನು ಗೊತ್ತಾ?

“ಸಿನಿಮಾದಲ್ಲಿ ನಟಿಸಿ ಅಂತ ಅವರು ನನ್ನ ಹಿಂದೆ ಬಿದ್ದಿದ್ರು.. ನಾನೇ ಆಗಲ್ಲ ಅಂತ ಅವಾಯ್ಡ್ ಮಾಡ್ತಾ ಇದ್ದೆ..”ಎಂದಿದ್ದಾರೆ ರಶ್ಮಿಕಾ. ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. “ನಾನು ಆಗ ತಾನೇ ಫ್ರೆಶ್ ಫೇಸ್ ಕಾಂಟೆಸ್ಟ್ ಗೆದ್ದಿದ್ದೆ, ಆಗ ನನ್ನ ಫೋಟೋ ಪತ್ರಿಕೆಯಲ್ಲಿ ಬಂದಿತ್ತು, ಅವರು ಅದೇ ರೀತಿಯ ಚಿಕ್ಕ ವಯಸ್ಸಿನ ಮೇಚ್ಯುರ್ಡ್ ಫೇಸ್ ಇರುವ ಹುಡುಗಿಗಾಗಿ ಹುಡುಕುತ್ತಿದ್ದರು, ನನಗೆ ಕಾಲ್ ಮಾಡಿ ಈ ಥರ ಸಿನಿಮಾದಲ್ಲಿ ನಟಿಸಬೇಕು ಎಂದು ಹೇಳಿದರು, ನಾನು ಯಾವುದೋ ಪ್ರಾಂಕ್ ಕಾಲ್ ಎಂದುಕೊಂಡು, ಆಗಲ್ಲ ಎಂದು ಹೇಳಿ ಅವಾಯ್ಡ್ ಮಾಡಿ, ಆ ನಂಬರ್ ಬ್ಲಾಕ್ ಮಾಡಿಬಿಟ್ಟಿದ್ದೆ. ನಂತರ ಅವರು ನನ್ನ ಫ್ರೆಂಡ್ಸ್ ಗೆಲ್ಲ ಕರೆಮಾಡಿ, ಅವರನ್ನ ಭೇಟಿ ಮಾಡೋದಕ್ಕೆ ಹೇಳಿ ಕೇಳಿಕೊಂಡಿದ್ದರು. ನನ್ನ ಟೀಚರ್ ಅನ್ನ ಕೂಡ ಸಂಪರ್ಕ ಮಾಡಿದ್ದರು.

ಆಕೆ ನಿಮ್ಮ ಕಾಲೇಜ್ ಹುಡುಗಿ ಅಂತ ಗೊತ್ತಿದೆ, ದಯವಿಟ್ಟು ಒಂದು ಸಾರಿ ಭೇಟಿ ಮಾಡೋಕೆ ಹೇಳಿ ಅಂತ ಕೇಳಿದ್ರು. ಆಗ ನನ್ನ ಟೀಚರ್ ಅವರನ್ನ ಯಾಕೆ ಅಷ್ಟು ಸತಾಯಿಸುತ್ತಾ ಇದ್ದೀಯಾ, ಒಂದು ಸಾರಿ ಭೇಟಿ ಮಾಡೋದ್ರಿಂದ ಏನನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ರು, ನನ್ನ ಟೀಚರ್ ಹೇಳಿದ ಆ ಮಾತು ಕೇಳಿ, ನಿರ್ಮಾಪಕರು ಮತ್ತು ನಿರ್ದೇಶಕರನ್ನು ಭೇಟಿ ಮಾಡಿದೆ. ಅವರು ನನ್ನ ಜೊತೆ ಸಾಮಾನ್ಯವಾಗಿಯೇ ಮಾತನಾಡಿದರು. ನಂತರ ಕೆಲವು ಡೈಲಾಗ್ಸ್ ಕೊಟ್ಟರು. ನಾನು ಸಹಜವಾಗಿ ಓದಿದೆ. ಅವರು ನನ್ನ ಜೊತೆ ಮಾತನಾಡುವಾಗ ಒಂದು ಕ್ಯಾಮೆರಾ ಇಟ್ಟಿದ್ದರು, ಅದು ನನಗೆ ಗೊತ್ತಿರಲಿಲ್ಲ. ನಾನು ಡೈಲಾಗ್ ಹೇಳಿದ ನಂತರ ವಿಡಿಯೋ ತೋರಿಸಿ, ನಮಗೆ ಇದೇ ಬೇಕಿತ್ತು ಎಂದರು.. ನಾನು ಸಿನಿಮಾಗೆ ಒಪ್ಪಿಕೊಂಡೇ..” ಎಂದಿದ್ದಾರೆ ರಶ್ಮಿಕಾ. ಒಟ್ಟಿನಲ್ಲಿ ತಾವೇ ಅವಾಯ್ಡ್ ಮಾಡುತ್ತಿದ್ದದ್ದಾಗಿಯೂ ಚಿತ್ರತಂಡವೆ ತಮ್ಮ ಹಿಂದೆ ಬಂದಿತು ಎಂದಿದ್ದಾರೆ ನ್ಯಾಷನಲ್ ಕ್ರಶ್.

Leave A Reply

Your email address will not be published.