Neer Dose Karnataka
Take a fresh look at your lifestyle.

ಕಡು ಬಡತನದಲ್ಲಿ ಬೆಳೆದು ಬಂದ ವಿಜಯ್ ದೇವರಕೊಂಡ ರವರ ಈಗಿನ ಲೈಫ್ ಸ್ಟೈಲ್ ಹೇಗಿದೆ ಗೊತ್ತೇ?? ಎಷ್ಟು ಐಷಾರಾಮಿ, ಆಸ್ತಿ ಇದೆ ಗೊತ್ತೇ??

ದಕ್ಷಿಣ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಶೈಲಿಯ ವಿಭಿನ್ನವಾದ ನಟನೆಯ ಮೂಲಕ ಇಂದು ಸ್ಟಾರ್ ಆಗಿರುವವರು ನಟ ವಿಜಯ್ ದೇವರಕೊಂಡ. ಇವರ ಅಭಿನಯ ಚೆನ್ನಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಹಳ ಕಡಿಮೆ ಸಮಯದಲ್ಲಿ ವಿಜಯ್ ದೇವರಕೊಂಡ ಅವರು ಇಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದರು. ಇವರು ಡೈಲಾಗ್ ಹೇಳುವ ರೀತಿಯನ್ನು ಜನರು ತುಂಬಾ ಇಷ್ಟಪಡುತ್ತಾರೆ. ಶಾರ್ಟ್ ಫಿಲ್ಮ್ಸ್ ಗಳನ್ನು ಮಾಡುತ್ತಾ ನಟನೆಯ ಕೆರಿಯರ್ ಶುರು ಮಾಡಿದರು ವಿಜಯ್. 2017ರಲ್ಲಿ ತೆರೆಕಂಡ ಅರ್ಜುನ್ ರೆಡ್ಡಿ ಸಿನಿಮಾ ಇಂದ ನಟನೆಗೆ ಎಂಟ್ರಿ ಕೊಟ್ಟ ವಿಜಯ್ ದೇವರಕೊಂಡ, ರಾತ್ರೋರಾತ್ರಿ ಸೆನ್ಸೇಷನ್ ಆದರು, ಈ ಸಿನಿಮಾ ಇಂದ ವಿಜರ್ ಅವರಿಗೆ ಬಾಲಿವುಡ್ ಇಂದಲೂ ಆಫರ್ ಗಳು ಶುರುವಾದವು. ಮಹಾನಟಿ, ಗೀತಾ ಗೋವಿಂದಂ, ಟ್ಯಾಕ್ಸಿವಾಲಾ, ದಿಯರ್ ಕಾಮೆರೆಫ್ ಸಿನಿಮಾ ಇವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

ವಿಜಯ್ ದೇವರಕೊಂಡ ಅವರು ಲಕ್ಷುರಿ ಲೈಫ್ ನಡೆಸುತ್ತಿದ್ದಾರೆ. ಹೈದರಾಬಾದ್ ನ ಪ್ರಮುಖ ನಗರವಾದ ಜ್ಯುಬಿಲಿ ಹಿಲ್ಸ್ ನಲ್ಲಿ ಐಷಾರಾಮಿ ಮನೆ ಹೊಂದಿದ್ದಾರೆ, ಈ ಮನೆಯ ಬೆಲೆ ಸುಮಾರು 15 ಕೋಟಿ ರೂಪಾಯಿ ಆಗಿದೆ. ಈ ಹೊಸ ಮನೆ ಖರೀದಿ ಮಾಡಿದಾಗ ಮನೆಯೊಳಗೆ ತಮ್ಮ ಕುಟುಂಬದ ಜೊತೆಗೆ ಫೋಟೋ ಶೇರ್ ಮಾಡಿಕೊಂಡಿದ್ದರು. ವಿಜಯ್ ಅವರಿಗೆ ಕಾರ್ ಕ್ರೇಜ್ ಸಹ ಹೆಚ್ಚು, ಇವರ ಬಳಿ ಅನೇಕ ದುಬಾರಿ ಕಾರ್ ಕಲೆಕ್ಷನ್ ಸಹ ಇದೆ. ರೇಂಜ್ ರೋವರ್, ಬೆಂಜ್, ಆಡಿ ಅಂತಹ ದುಬಾರಿ ಕಾರ್ ಕಲೆಕ್ಷನ್ ವಿಜಯ್ ದೇವರಕೊಂಡ ಅವರ ಬಳಿ ಇದೆ. ಕಾರ್ ಗಳನ್ನು ತುಂಬಾ ಇಷ್ಟಪಡುತ್ತಾರೆ ವಿಜಯ್. ವಿಜಯ್ ದೇವರಕೊಂಡ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ, ಇವರ ಅಭಿಮಾನಿಗಳಿಗೆ ವಿಜಯ್ ದೇವರಕೊಂಡ ಅವರ ಒಟ್ಟು ಆಸ್ತಿ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಇದೆ.

ಸಧ್ಯಕ್ಕೆ ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ವಿಜಯ್ ದೇವರಕೊಂಡ ಅವರ ಒಟ್ಟು ಆಸ್ತಿ, 30 ಕೋಟಿ ರೂಪಾಯಿ ಆಗಿದೆ. ಸಿನಿಮಾ ಹಾಗೂ ಜಾಹೀರಾತುಗಳನ್ನು ಇಷ್ಟು ಆಸ್ತಿಯನ್ನು ಸಂಪಾದನೇ ಮಾಡಿದ್ದಾರೆ ವಿಜಯ್. ಒಂದು ಸಿನಿಮಾಗೆ ವಿಜಯ್ ದೇವರಕೊಂಡ ಅವರು 6 ಕೋಟಿ ರೂಪಾಯಿ ದುಬಾರಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳಿಗೂ ದೊಡ್ಡ ಮೊತ್ತದ ಹನವನ್ನೇ ಸಂಭಾವನೆಯಾಗಿ ಪಡೆಯುತ್ತಾರೆ..ನಟನೆಯನ್ನು ಹೊರತುಪಡಿಸಿ ವಿಜಯ್ ದೇವರಕೊಂಡ ಅವರು ನಿರ್ಮಾಪಕ ಸಹ ಹೌದು, ಹಿಲ್ ಎಂಟರ್ಟೈನ್ಮೆಂಟ್ಸ್ ಎನ್ನುವ ಕಂಪನಿ ಹೊಂದಿದ್ದಾರೆ, ತಮ್ಮ ಹಣವನ್ನು ಈ ಕಂಪನಿ ಮತ್ತು ರಿಯಲ್ ಎಸ್ಟೇಟ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ. ರೌಡಿ ವೇರ್ ಹೆಸರಿನ ಬಟ್ಟೆಯ ಬ್ರ್ಯಾಂಡ್ ಸಹ ಶುರು ಮಾಡಿದ್ದಾರೆ ವಿಜಯ್. ಇವರೊಬ್ಬ ಒಳ್ಳೆಯ ನಟ ಎನ್ನುವ ಜೊತೆಗೆ ಒಳ್ಳೆಯ ಮನುಷ್ಯ ಕೂಡ ಹೌದು. ಅನೇಕ ಬಾರಿ ಬಡವರಿಗೆ ಸಹಾಯ ಮಾಡಿದ್ದಾರೆ.

Comments are closed.