Neer Dose Karnataka
Take a fresh look at your lifestyle.

ಹೊರಗಡೆ ಹೋರಾಟ ಮಾಡಿದಂತೆ ಬಿಗ್ ಬಾಸ್ ನಲ್ಲೂ ಹೋರಾಟ ಮಾಡುತ್ತಿರುವ ರೂಪೇಶ್ ರಾಜಣ್ಣ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿ ಒಂದು ವಾರ ಕಳೆದು, ಮನೆಯ ಸ್ಪರ್ಧಿಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ. ಮೊದಲ ವಾರ ಐಶ್ವರ್ಯ ಪಿಸ್ಸೇ ಅವರು ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗ 17 ಸ್ಪರ್ಧಿಗಳು ಉಳಿದಿದ್ದಾರೆ. ಮೊದಲ ವಾರ ಮನೆಯಲ್ಲಿ ಹೈಲೈಟ್ ಆಗಿರುವ ಸ್ಪರ್ದಿಗಳಲ್ಲಿ ಒಬ್ಬರು ರೂಪೇಶ್ ರಾಜಣ್ಣ. ಬಿಗ್ ಬಾಸ್ ಮನೆಯಲ್ಲಿ ಇವರನ್ನು ಕನ್ನಡದ ಕಂದ ಎಂದೇ ಕರೆಯುತ್ತಿದ್ದಾರೆ. ರೂಪೇಶ್ ರಾಜಣ್ಣ ಅವರು ಹೊರಗಡೆ ಪ್ರಪಂಚದಲ್ಲಿ ಕನ್ನಡಪರ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಚಾರಗಳ ಬಗ್ಗೆ ಇವರು ಮಾತನಾಡುವುದನ್ನು ನೋಡಿದ್ದೇವೆ.

ಬಿಗ್ ಬಾಸ್ ಮನೆಯಲ್ಲಿ ಸಹ ಆರಂಭದಲ್ಲಿ ಅದೇ ರೀತಿ ಇದ್ದರು. ಕನ್ನಡದಲ್ಲೇ ಮಾತನಾಡಿ, ಆಂಗ್ಲಭಾಷೆಯಲ್ಲಿ ಮಾತನಾಡಬೇಡಿ, ಹೀಗೆ ಮಾಡಬೇಡಿ ಹಾಗೆ ಮಾಡಬೇಡಿ ಎಂದು ಹೇಳಿ, ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದ್ದರು. ಬಳಿಕ ಇದನ್ನು ಅರ್ಥ ಮಾಡಿಕೊಂಡು ಎಲ್ಲರಿಗು ಮನರಂಜನೆ ನೀಡುತ್ತಿದ್ದಾರೆ, ಮಿಮಿಕ್ರಿ ಮಾಡುತ್ತಾ, ಅಣ್ಣಾವ್ರು, ಧೀರೇಂದ್ರ ಗೋಪಾಲ್ ಅವರ ಹಾಗೆ ಮಿಮಿಕ್ರಿ ಮಾಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡರು. ಜೊತೆಗೆ ಮೊದಲ ವಾರದಲ್ಲಿ ಕಳಪೆ ಪ್ರದರ್ಶನ ಎಂದು ಇವರನ್ನೇ ಸ್ಪರ್ಧಿಗಳು ಆಯ್ಕೆ ಮಾಡಿ ಮೊದಲ ವಾರವೇ ಇವರು ಜೈಲು ಸೇರುವ ಹಾಗೆ ಆಯಿತು.

ಇದೇ ಕಳಪೆ ಪ್ರದರ್ಶನದ ವಿಚಾರಕ್ಕೆ ಮನೆಯೊಳಗೆ ದೀಪಿಕಾ ದಾಸ್, ಅನುಪಮಾ ಗೌಡ ಮತ್ತು ನೇಹಾ ಗೌಡ ಅವರೊಡನೆ ಜಗಳ ಮಾಡಿಕೊಂಡರು. ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ರೂಪೇಶ್ ರಾಜಣ್ಣ ಅವರ ಎಕ್ಸ್ಪ್ರೆಷನ್ ಗಳ ಬಗ್ಗೆ ಮಾತನಾಡಿ, ರಾಜಣ್ಣ ಅವರು ಸಹ ತಾವು ಕೊಡುವ ಎಸ್ಕ್ಪ್ರೆಷನ್ ಗಳ ಬಗ್ಗೆ ಮಾತನಾಡಿ, ಎಲ್ಲರೂ ನಕ್ಕಿದ್ದರು. ರೂಪೇಶ್ ರಾಜಣ್ಣ ಅವರು ಎರಡನೇ ವಾರ ನಾಮಿನೇಟ್ ಆಗಿದ್ದಾರೆ. ಇದೀಗ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯೊಳಗೆ ಇರಲು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂದು ಚರ್ಚೆ ಶುರುವಾಗಿದ್ದು, ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ರೂಪೇಶ್ ರಾಜಣ್ಣ ಅವರಿಗೆ ಒಂದು ವಾರಕ್ಕೆ 40 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತದೆ.

Comments are closed.