Neer Dose Karnataka
Take a fresh look at your lifestyle.

ರಶ್ಮಿಕಾಗೆ ಸ್ವಯಂವರ ನಡೆದರೇ, ಆ ಮೂವರು ನಟರು ಇರಲೇಬೇಕಂತೆ. ರಶ್ಮಿಕಾ ಸ್ವಯಂ ವರಕ್ಕೆ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಪ್ರಸ್ತುತ ಎಲ್ಲಾ ಚಿತ್ರರಂಗದಲ್ಲು ಕಾಣಿಸಿಕೊಳ್ಳುತ್ತಿರುವವರು ರಶ್ಮಿಕಾ ಮಂದಣ್ಣ. ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿರುವ ರಶ್ಮಿಕಾ ಮಂದಣ್ಣ, ಬಾಲಿವುಡ್ ನಲ್ಲಿ ತಮ್ಮ ಮೊದಲ ಸಿನಿಮಾ ಬಿಡುಗಡೆಯ ಬಗ್ಗೆ ಎಕ್ಸೈಟ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೊಡನೆ ನಟಿಸಿರುವ ಗುಡ್ ನೈ ಸಿನಿಮಾ ಮುಂದಿನ ವಾರ ಬಿಡುಗಡೆ ಆಗುತ್ತಿದ್ದು, ಸಿನಿಮಾ ಪ್ರಚಾರಗಳಲ್ಲಿ ರಶ್ಮಿಕಾ ಬ್ಯುಸಿ ಆಗಿದ್ದಾರೆ. ಹಲವು ಇಂಟರ್ವ್ಯೂಗಳಲ್ಲಿ ಬ್ಯುಸಿ ಆಗಿದ್ದಾರೆ ರಶ್ಮಿಕಾ. ಇಂಥದ್ದೇ ಒಂದು ಇಂಟರ್ವ್ಯೂನಲ್ಲಿ ರಶ್ಮಿಕಾ ಅವರ ಸ್ವಯಂವರದ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ಹಲವು ಸಂದರ್ಶನಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಅವರಿಗೆ ಒಂದು ಸಂದರ್ಶನದಲ್ಲಿ ಸ್ವಯಂವರದ ಬಗ್ಗೆ ಪ್ರಶ್ನೆ ಕೇಳಿದ್ದು, ಅದಕ್ಕೆ ರಶ್ಮಿಕಾ ಮಂದಣ್ಣ ಕೊಟ್ಟ ಉತ್ತರಕ್ಕೆ ಟೀಕೆ ವ್ಯಕ್ತವಾಗಿದ್ದು, ಟ್ರೋಲ್ ಸಹ ಆಗುತ್ತಿದೆ. ನಿಮ್ಮ ಸ್ವಯಂವರದಲ್ಲಿ ಯಾವ ನಟರು ಪಾಲ್ಗೊಳ್ಳಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿರುವ ರಶ್ಮಿಕಾ ಮಂದಣ್ಣ, ನಟ ದಳಪತಿ ವಿಜಯ್ ಅವರು ಇರಬೇಕು ಎಂದಿದ್ದಾರೆ, ವಿಜಯ್ ಅವರು ರಶ್ಮಿಕಾ ಅವರ ಚೈಲ್ಡ್ ಹುಡ್ ಕ್ರಶ್ ಆಗಿದ್ದು, ಈಗ ವಾರಿಸು ಸಿನಿಮಾದಲ್ಲಿ ವಿಜಯ್ ಅವರೊಡನೆ ನಟಿಸುತ್ತಿದ್ದಾರೆ ರಶ್ಮಿಕಾ. ಇನ್ನು ಅಲ್ಲು ಅರ್ಜುನ್ ಅವರು ತಮ್ಮ ಸ್ವಯಂವರದ ಇರಬೇಕು ಎಂದು ಹೇಳಿದ್ದಾರೆ, ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸಿದ್ದಾರೆ.. ಪುಷ್ಪ2 ಸಿನಿಮಾದಲ್ಲೂ ನಟಿಸಲಿದ್ದಾರೆ.

ಮೂರನೆಯದಾಗಿ ಬಾಲಿವುಡ್ ನ ಹ್ಯಾಂಡ್ಸಮ್ ನಟ ರಣಬೀರ್ ಕಪೂರ್ ಅವರು ತಮ್ಮ ಸ್ವಯಂವರದಲ್ಲಿ ಇರಬೇಕು ಎಂದಿದ್ದಾರೆ ರಶ್ಮಿಕಾ. ರಣಬೀರ್ ಕಪೂರ್ ಅವರೊಡನೆ ಅನಿಮಲ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ರಶ್ಮಿಕಾ. ಈ ಮೂವರು ನಟರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ರಶ್ಮಿಕಾ ಟ್ರೋಲ್ ಗೆ ಒಳಗಾಗಿದ್ದಾರೆ. ಮದುವೆ ಆಗಿರುವ ನಟರನ್ನೇ ರಶ್ಮಿಕಾ ಆಯ್ಕೆ ಮಾಡಿದ್ದು, ಒಮ್ಮೆ ಮದುವೆ ಆದವರನ್ನು ಮತ್ತೊಮ್ಮೆ ಮದುವೆ ಆಗುವುದು ಎಷ್ಟು ಸರಿ ಎಂದು ನೆಟ್ಟಿಗರು ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ..

Comments are closed.