Neer Dose Karnataka
Take a fresh look at your lifestyle.

ವಿರಾಟ್ ಜೊತೆ ಸೇರಿ ಅಸಲಿ “ವಿರಾಟರೂಪ” ತೋರಿಸಿ ಹೊಸ ವಿಶ್ವದಾಖಲೆ ನಿರ್ಮಾಣ ಮಾಡಿದ ಸೂರ್ಯ ಕುಮಾರ್ ಯಾದವ್. ಏನು ಗೊತ್ತೇ??

ಸೂರ್ಯಕುಮಾರ್ ಯಾದವ್ ಅವರು ಪ್ರಸ್ತುತ ಭಾರತ ತಂಡದಲ್ಲಿ ಮಿಂಚುತ್ತಿರುವ ಬ್ಯಾಟ್ಸ್ಮನ್, ಭಾರತ ತಂಡದ ರನ್ ಮಷಿನ್ ಎಂದರೆ ತಪ್ಪಾಗುವುದಿಲ್ಲ. ನಿನ್ನೆ ನಡೆದ ಭಾರತ ವರ್ಸಸ್ ಸೌತ್ ಆಫ್ರಿಕಾ ಎರಡನೇ ಟಿ20 ಪಂದ್ಯದಲ್ಲಿ ವಿರಾಟ್ ಕೋಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಜೊತೆಯಾಟದಲ್ಲಿ ಭಾರತ ತಂಡ ಸಾಕಷ್ಟು ರನ್ ಗಳನ್ನು ಕಲೆ ಹಾಕಿತು. ವಿರಾಟ್ ಕೋಹ್ಲಿ ಅವರೊಡನೆ ಸೇರಿ ಸೂರ್ಯಕುಮಾರ್ ಅವರು ನಿಜಕ್ಕೂ ವಿರಾಟರೂಪವನ್ನೇ ತೋರಿಸಿದರು ಎಂದರೆ ತಪ್ಪಲ್ಲ. ಕೇವಲ 22 ಎಸೆತಗಳಲ್ಲಿ ಬರೋಬ್ಬರಿ 61 ರನ್ ಸಿಡಿಸಿದ್ದರು ಸೂರ್ಯಕುಮಾರ್ ಯಾದವ್. 33 ವರ್ಷದ ಇವರು ಇಂತಹ ಅದ್ಭುತವಾದ ಫಾರ್ಮ್ ನಲ್ಲಿರುವುದು ಭಾರತ ತಂಡಕ್ಕೆ ವರದಾನವೇ ಆಗಿದೆ..

ಕೇವಲ 18 ಎಸೆತಗಳಲ್ಲಿ ಸೂರ್ಯಕುಮಾರ್ ಯಾದವ್ ಅವರು ಅರ್ಧ ಶತಕ ಪೂರ್ತಿಗೊಳಿಸಿದರು, ಈ ಹಿಂದೆ ಕೆ.ಎಲ್.ರಾಹುಲ್ ಅವರು 2021ರ ಟಿ20 ವರ್ಲ್ಡ್ ಕಪ್ ನಲ್ಲಿ ಸ್ಕಾಟ್ಲೆಂಡ್ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು, ಇದೀಗ ಸೂರ್ಯಕುಮಾರ್ ಯಾದವ್ ಅವರು ಕೆ.ಎಲ್.ರಾಹುಲ್ ಅವರಿಗೆ ಸಮವಾಗಿ 18 ಎಸೆತಗಳಲ್ಲಿ ಅರ್ಧ ಶತಕ, 22 ಎಸೆತಗಳಲ್ಲಿ 61 ರನ್ ಭಾರಿಸಿದ್ದಾರೆ. ಅತಿ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿರುವ ಭಾರತದ ಆಟಗಾರರ ಸಾಲಿನಲ್ಲಿ ಇದು ಎರಡನೇ ಸ್ಥಾನ ಆಗಿದ್ದು, ಮೊದಲ ಸ್ಥಾನ ಯುವರಾಜ್ ಸಿಂಗ್ ಅವರದ್ದು, 2007ರ ಟಿ20 ವರ್ಲ್ಡ್ ಕಪ್ ನಲ್ಲಿ, ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದ್ದರು. ಸೂರ್ಯಕುಮಾರ್ ಅವರು ನಿನ್ನೆಯ ಪಂದ್ಯದಲ್ಲಿ 360 ಡಿಗ್ರಿ ರನ್ ಹೊಡೆದು, ಎದುರಾಳಿ ಟೀಮ್ ಎದುರು ಗುಡುಗಿದರು ಎಂದೇ ಹೇಳಬಹುದು.

ನಿನ್ನೆಯ ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ಅವರು ಮತ್ತೊಂದು ದಾಖಲೆ ಬರೆದಿದ್ದಾರೆ. ಅತಿ ಕಡಿಮೆ ಎಸೆತಗಳಲ್ಲಿ 1000 ರನ್ ಗಳ ಮೈಲುಗಲ್ಲು ಸೃಷ್ಟಿಸಿರುವ ಆಟಗಾರ ಆಗಿದ್ದಾರೆ ಸೂರ್ಯಕುಮಾರ್ ಯಾದವ್. ಕೇವಲ 573 ಎಸೆತಗಳಲ್ಲಿ 1000 ರನ್ ಕಲೆಹಾಕಿದ್ದಾರೆ, 2ನೇ ಸ್ಥಾನದಲ್ಲಿ 604 ಎಸೆತಗಳಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರು 1000 ರನ್ ಪೂರ್ತಿಗೊಳಿಸಿದ್ದಾರೆ. 3ನೇ ಸ್ಥಾನದಲ್ಲಿ ಕೋಲಿನ್ ಮುನ್ರೋ ಅವರು 635 ಎಸೆತಗಳಲ್ಲಿ 1000ರನ್ ಗಳಿಸಿದ್ದಾರೆ. 640 ಎಸೆತಗಲ್ಲಿ 1000 ರನ್ ಗಳಿಸಿ 4ನೇ ಸ್ಥಾನದಲ್ಲಿದ್ದಾರೆ ಎವಿನ್ ಲೆವೀಸ್. ಅಷ್ಟೇ ಅಲ್ಲದೆ, ಟಿ20 ರಾಕಿಂಗ್ ನಲ್ಲಿ 2ನೇ ಸ್ಥಾನ ಅಲಂಕರಿಸಿಕೊಂಡಿದ್ದಾರೆ ಸೂರ್ಯಕುಮಾರ್ ಯಾದವ್. ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಸಹ ಉತ್ತಮವಾದ ಇನ್ನಿಂಗ್ಸ್ ಆಡಿದರು. 28 ಎಸೆತಗಳಲ್ಲಿ 49 ರನ್ ಭಾರಿಸಿದರು ಕಿಂಗ್ ಕೋಹ್ಲಿ.

Comments are closed.