Neer Dose Karnataka
Take a fresh look at your lifestyle.

ವಿಶ್ವಕಪ್ ಗಾಗಿ ರೂಲ್ಸ್ ಗಳನ್ನು ಬದಲಾಯಿಸಿದ ಐಸಿಸಿ: ಅದರಲ್ಲೂ ಈ ಐದು ರೂಲ್ ಗಳು ಪಂದ್ಯವನ್ನೇ ಬದಲಾಯಿಸಬಲ್ಲವು. ಯಾವ್ಯಾವು ಗೊತ್ತೇ??

ಟಿ20 ವರ್ಲ್ಡ್ ಕಪ್ ನ ಎಂಟನೇ ಸೀಸನ್, ಇನ್ನೆರಡು ವಾರಗಳಲ್ಲಿ ಶುರುವಾಗಲಿದೆ, ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಪಂದ್ಯಗಳು ಶುರುವಾಗಲಿದ್ದು, ಎಲ್ಲಾ ತಂಡಗಳು ತಯಾರಿ ನಡೆಸಿಕೊಂಡಿವೆ. ಆಕ್ಟೊಬರ್ 16ರಿಂದ ನವೆಂಬರ್ 13ರ ವರೆಗು ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿದೆ. ಈ ನಡುವೆ ಆಕ್ಟೊಬರ್ 1 ರಿಂದ ಟಿ20 ವಿಶ್ವಕಪ್ ನಲ್ಲಿ ಐಸಿಸಿ ಕೆಲವು ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದೆ. ಇದೀಗ ಆ ರೂಲ್ಸ್ ಗಳು ಪಂದ್ಯಗಳಿಗೆ ಅಪ್ಲೈ ಆಗಲಿದ್ದು, ಆ 5 ಹೊಸ ರೂಲ್ಸ್ ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

1.ಮಂಕಾಡಿಂಗ್ ರನ್ ಔಟ್ :- ಈ ರೂಲ್ಸ್ ಬಗ್ಗೆ ಹೆಚ್ಚು ಚರ್ಚೆ ಆಗುತ್ತಲೇ ಇತ್ತು. ಇದೀಗ ಈ ರೂಲ್ಸ್ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೀಗ ಐಸಿಸಿ ರೂಲ್ಸ್ ಪ್ರಕಾರ, ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ಮನ್ ಬೌಲರ್ ಬೌಲಿಂಗ್ ಮಾಡುವುದಕ್ಕಿಂತ ಮೊದಲು ಸ್ಟ್ರೈಕ್ ಇಂದ ಹೊರಬಂದರೆ ಅವರನ್ನು ರನ್ ಔಟ್ ಮಾಡಬಹುದು. ರೂಲ್ಸ್ ಹೀಗಿರುವಾಗ, ಬೌಲಿಂಗ್ ಮಾಡುವವರೆಗೂ ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ಮನ್ ಅಲ್ಲಿಯೇ ಇರಬೇಕಾಗುತ್ತದೆ.
2.ಒಬ್ಬ ಬ್ಯಾಟ್ಸ್ಮನ್ ಔಟ್ ಆದ ಬಳಿಕ ಹೊಸ ಬ್ಯಾಟ್ಸ್ಮನ್ ಸ್ಟ್ರೈಕ್ ಗೆ ಬರಬೇಕು :- ಕ್ಯಾಚ್ ಆಗಿ ಔಟ್ ಆದಾಗ, ಒಂದು ವೇಳೆ ಇಬ್ಬರು ಬ್ಯಾಟ್ಸ್ಮನ್ ಗಳು ರನ್ ಗಾಗಿ, ಕ್ರೀಸ್ ಇಂದ ಹೊರಬಂದಿದ್ದರೆ, ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ಮನ್ ಸ್ಟ್ರೈಕ್ ಗೆ ಬರುತ್ತಿದ್ದರು, ಆದರೆ ಇನ್ನುಮುಂದೆ ಹೊಸ ಬ್ಯಾಟ್ಸ್ಮನ್ ಸ್ಟ್ರೈಕ್ ಗೆ ಬರಬೇಕಾಗುತ್ತದೆ. ಒಂದು ವೇಳೆ ಓವರ್ ನ ಕಡೆಯ ಬಾಲ್ ನಲ್ಲಿ ಔಟ್ ಆಗಿದ್ದರೆ ಮಾತ್ರ ನಾನ್ ಸ್ಟ್ರೈಕ್ ನಲ್ಲಿರುವ ಬ್ಯಾಟ್ಸ್ಮನ್ ಸ್ಟ್ರೈಕ್ ಗೆ ಬರಬೇಕಾಗುತ್ತದೆ.

3.ಫೀಲ್ಡರ್ ಗಳಿಂದ ತಪ್ಪು ನಡೆದರೆ :- ಫೀಲ್ಡರ್ ಗಳು ಕೆಲವೊಮ್ಮೆ ಬೌಲಿಂಗ್ ಮಾಡುವುದಕ್ಕಿಂತ ಮೊದಲೇ ಜಾಗ ಬದಲಾಯಿಸುವುದನ್ನು ನೋಡಿರುತ್ತೇವೆ, ಈ ರೀತಿ ಮಾಡುವುದು ಇನ್ನುಮುಂದೆ ತಪ್ಪು, ಫೀಲ್ಡರ್ ಗಳು ಬೌಲಿಂಗ್ ಮಾಡುವುದಕ್ಕಿಂತ ಮೊದಲೇ ಮೂವ್ ಮಾಡಿದರೆ, ಅದನ್ನು ಡೆಡ್ ಬಾಲ್ ಎಂದು ಪರಿಗಣಿಸಿ, ಬ್ಯಾಟಿಂಗ್ ಮಾಡುತ್ತಿರುವ ತಂಡಕ್ಕೆ ಹೆಚ್ಚುವರಿಯಾಗಿ 5 ರನ್ ಗಳನ್ನು ನೀಡಲಾಗುತ್ತದೆ.
4.ಹೊಸ ಬ್ಯಾಟ್ಸ್ಮನ್ ಸ್ಟ್ರೈಕ್ ಗೆ ಬರಲು ಸಮಯ ಕಡಿತ :- ಈ ಹಿಂದೆ ಹೊಸ ಬ್ಯಾಟ್ಸ್ಮನ್ ಸ್ಟ್ರೈಕ್ ಗೆ ಬರಲು 3 ನಿಮಿಷಗಳ ಅವಕಾಶ ಇತ್ತು, ಆದರೆ ಇನ್ನುಮುಂದೆ ಓಡಿಐ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ಬ್ಯಾಟ್ಸ್ಮನ್ ಸ್ಟ್ರೈಕ್ ಗೆ ಬರಲು 2 ನಿಮಿಷಗಳ ಅವಕಾಶ, ಟಿ20 ಪಂದ್ಯಗಳಲ್ಲಿ 90 ಸೆಕೆಂಡ್ ಗಳ ಅವಕಾಶ ಸಿಗುತ್ತದೆ, ಅಷ್ಟರ ಒಳಗೆ ಬರದೆ ಹೋದರೆ, ಬ್ಯಾಟ್ಸ್ಮನ್ ಅನ್ನು ಔಟ್ ಎಂದು ಪರಿಗಣಿಸಲಾಗುತ್ತದೆ. ಪಂದ್ಯದ ಸಮಯ ಕಡಿಮೆ ಮಾಡಲು, ಈ ರೂಲ್ಸ್ ಮಾಡಲಾಗಿದೆ.

5.ಓವರ್ ರೇಟ್ ಪೆನಾಲ್ಟಿ :- ಒಂದು ಓವರ್ ಪೂರ್ಣಗೊಳಿಸಲು ಇಂತಿಷ್ಟು ಸಮಯ ಎಂದು ನೀಡಲಾಗಿರುತ್ತದೆ. ಅಷ್ಟರ ಒಳಗೆ, ಓವರ್ ಪೂರ್ಣಗೊಳಿಸಿರಬೇಕು. ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ. ಪಿಚ್ ನಲ್ಲಿ 30 ಯಾರ್ಡ್ ಸರ್ಕಲ್ ನ ಒಳಗೆ 5 ಫೀಲ್ಡರ್ ಗಳ ಬದಲಾಗಿ 4 ಫೀಲ್ಡರ್ ಗಳು ಮಾತ್ರ ಇರುತ್ತಾರೆ. ಮುಂದಿನ ಇನ್ನಿಂಗ್ ಪೂರ್ತಿ ಹೀಗಿಯೇ ಇರಬೇಕಾಗುತ್ತದೆ.
ಈ ಎಲ್ಲಾ ಹೊಸ ರೂಲ್ಸ್ ಗಳು ಜಾರಿಗೆ ಬಂದಿದ್ದು ಇನ್ನುಮುಂದೆ ಎಲ್ಲಾ ತಂಡಗಳು ಬಹಳ ಎಚ್ಚರಿಕೆಯಿಂದ ಆಡಬೇಕಿದೆ..

Comments are closed.