Neer Dose Karnataka
Take a fresh look at your lifestyle.

ವೇದಿಕೆ ಮೆಲಿಯೇ ಫುಲ್ ಲವ್: ಪ್ರಭಾಸ್ ಬೆವರುತ್ತಿದ್ದಾಗ ಕೃತಿ ಸನೋನ್ ಮಾಡಿದ್ದೇನು ಗೊತ್ತೆ?? ಫ್ಯಾನ್ಸ್ ಹೆಚ್ಚಾಯ್ತು ಅನುಮಾನ.

ಕೆಲ ದಿನಗಳಿಂದ ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಭಾರಿ ಸುದ್ದಿಯಾಗುತ್ತಿರುವ ವಿಚಾರ ಪ್ರಭಾಸ್ ಮತ್ತು ಕೃತಿ ಸನೊನ್ ಅವರ ಡೇಟಿಂಗ್ ಬಗ್ಗೆ. ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಭಾರಿ ಸುದ್ದಿಯಾಗಿತ್ತು. ಆದರೆ ಇವರಿಬ್ಬರು ಕೂಡ ಈ ಡೇಟಿಂಗ್ ವದಂತಿ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ, ಅದಕ್ಕೆ ಸ್ಪಷ್ಟನೆಯನ್ನು ನೀಡಿರಲಿಲ್ಲ. ಆದರೆ ಈಗ ಆದಿಪುರುಷ್ ಸಿನಿಮಾ ಟೀಸರ್ ಲಾಂಚ್ ನಲ್ಲಿ ಸಿನಿಪ್ರಿಯರಿಗೆ ಈ ವಿಚಾರದ ಬಗ್ಗೆ ಉತ್ತರ ಸಿಕ್ಕ ಹಾಗೆ ಕಾಣುತ್ತಿದೆ. ಅಯೋಧ್ಯೆಯಲ್ಲಿ ಆದಿಪುರುಷ್ ಸಿನಿಮಾದ ಆಡಿಯೋ ಲಾಂಚ್ ನಡೆಯಿತು.

ಆದಿಪುರುಷ್ ಸಿನಿಮಾದ ಟೀಸರ್ ಜನರಿಗೆ ಇಷ್ಟವಾಗದೆ ಹೋದರು, ಕೃತಿ ಸನೊನ್ ಮತ್ತು ಪ್ರಭಾಸ್ ಅವರ ಕೆಮಿಸ್ಟ್ರಿ ಜನರಿಗೆ ಬಹಳ ಇಷ್ಟವಾಗಿದೆ, ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಇವರಿಬ್ಬರ ಆಫ್ಲೈನ್ ಕೆಮಿಸ್ಟ್ರಿಯನ್ನು ಸಹ ನೋಡಿರುವ ಅಭಿಮಾನಿಗಳು, ಇವರಿಬ್ಬರು ಡೇಟಿಂಗ್ ಮಾಡುತ್ತಿರುವುದು ನಿಜವೇ ಎಂದು ಹೇಳಿ, ಟೀಸರ್ ಲಾಂಚ್ ನ ಕೆಲವು ವಿಡಿಯೋ ಕ್ಲಿಪ್ ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಪ್ರಭಾಸ್ ಮತ್ತು ಕೃತಿ ಇಬ್ಬರು ಸಹ ಕೈಕೈ ಹಿಡಿದು ಓಡಾಡುತ್ತಿದ್ದಾರೆ. ಜೊತೆಗೆ ಪ್ರೇಮಪಕ್ಷಿಗಳ ಹಾಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇವರಿಬ್ಬರ ಕೆಮಿಸ್ಟ್ರಿ ನೋಡಿ ಫಿದಾ ಆಗಿದ್ದು, ಈ ಜೋಡಿ ಮುದ್ದಾಗಿದೆ ಎನ್ನುತ್ತಿದ್ದಾರೆ.

ಜೊತೆಯಾಗಿ ಕ್ಲೋಸ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ಕೃತಿ ಸನೊನ್ ಅವರು ಮಾಡಿರುವ ಅದೊಂದು ಕೆಲಸ ಈ ಡೇಟಿಂಗ್ ಗಾಸಿಪ್ ನಿಜವೇ ಇರಬಹುದು ಎನ್ನುವ ಹಾಗೆ ತೋರುತ್ತಿದೆ, ಅದೇನೆಂದರೆ, ವೇದಿಕೆಯ ಮೇಲೆ ಪ್ರಭಾಸ್ ಅವರು ಬೆವರುತ್ತಿದ್ದಾಗ, ಕೃತಿ ಸನೊನ್ ಅವರು ತಮ್ಮ ದುಪ್ಪಟ್ಟ ನೀಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಎಷ್ಟು ಕ್ಯೂಟ್ ಆಗಿದೆ ಎನ್ನುತ್ತಿದ್ದು, ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿರುವುದು ಸತ್ಯವೇ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಕೊನೆಗೂ ಪ್ರಭಾಸ್ ಅಗರಿಗೆ ಕಂಕಣ ಭಾಗ್ಯ ಕೂಡಿಬಂತ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಏನೇ ಆದರೂ, ಇಬ್ಬರ ಕಡೆಯಿಂದ ಅಧಿಕೃತ ಮಾಹಿತಿ ಬರುವವರೆಗು ಅಭಿಮಾನಿಗಳು ಕಾಯಬೇಕು.

Comments are closed.