Neer Dose Karnataka
Take a fresh look at your lifestyle.

ಭುವಿ ರವರಿಂತ ಉತ್ತಮವಾಗಿ ಆಡುವ ಸಾಮರ್ಥ್ಯ ವಿದ್ದರೂ ಕೂಡ ರಾಹುಲ್, ರೋಹಿತ್ ಕಡೆಗಣಿಸುತ್ತಿರುವ ಟಾಪ್ 3 ಬೌಲರ್ಸ್ ಯಾರು ಗೊತ್ತೇ??

ಭಾರತ ತಂಡದ ಬೌಲಿಂಗ್ ವಿಭಾಗದಲ್ಲಿದ್ದ ಭುವನೇಶ್ವರ್ ಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿಲ್ಲ. ಇವರು ಭಾರತ ತಂಡದ ಸೋಲಿಗೆ ಕಾರಣವಾಗಿದ್ದಾರೆ. ಕೆಲವು ಪಂದ್ಯಗಳಲ್ಲಿ ಇವರ ಕಳಪೆ ಪ್ರದರ್ಶನವೆ ತಂಡದ ಸೋಲಿಗೆ ಕಾರಣವಾಗಿದೆ. ಭುವನೇಶ್ವರ್ ಕುಮಾರ್ ಅವರನ್ನು ನಂಬಿದ್ದ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರು ಈ ಮೂವರು ಪ್ರತಿಭಾನ್ವಿತ ಬೌಲರ್ ಗಳನ್ನು ಕಡೆಗಣಿಸುತ್ತಿದ್ದಾರೆ. ಇದೆ ಕಾರಣದಿಂದ ಭುವನೇಶ್ವರ್ ಕುಮಾರ್ ಅವರು ಭಾರತ ತಂಡದ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆದಿಲ್ಲ. ಅಭಿಮಾನಿಗಳು ಸಹ ಭುವನೇಶ್ವರ್ ಕುಮಾರ್ ಅವರು ಪ್ಲೇಯಿಂಗ್ 11 ನಲ್ಲಿ ಇರುವುದು ಬೇಡ ಎಂದೇ ಹೇಳುತ್ತಿದ್ದಾರೆ. ಇವರ ಬದಲು ಆ ಮೂವರು ಬೌಲರ್ ಗಳಲ್ಲಿ ಒಬ್ಬರಿಗೆ ಅವಕಾಶ ಕೊಟ್ಟರು ಸಹ, ಭುವನೇಶ್ವರ್ ಕುಮಾರ್ ಅವರ ಕೆರಿಯರ್ ಕೊನೆಗೊಳ್ಳುವುದು ಖಚಿತ ಎನ್ನಲಾಗುತ್ತಿದೆ. ಹಾಗಾಗಿ ಈ ಮೂವರು ಬೌಲರ್ ಗಳು ಯಾರು ಎಂದು ತಿಳಿಸುತ್ತೇವೆ ನೋಡಿ..

ಉಮ್ರಾನ್ ಮಲಿಕ್ :- ಈ ವರ್ಷ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ, 14 ಪಂದ್ಯಗಳಲ್ಲಿ 22 ವಿಕೆಟ್ಸ್ ಪಡೆದು ಎಲ್ಲರನ್ನು ಇಂಪ್ರೆಸ್ ಮಾಡಿದ್ದರು. ಪ್ರಸ್ತುತ ಭಾರತ ತಂಡದಲ್ಲಿ ಅತ್ಯಂತ ವೇಗದ ಬೌಲರ್ ಇವರು ಎಂದರೆ ತಪ್ಪಲ್ಲ, ಐಪಿಎಲ್ ನಲ್ಲಿ 157 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಇವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನ ಶೋಯೆಬ್ ಅಕ್ತರ್ ಎಂದು ಕರೆಯಲಾಗುತ್ತಿದೆ. ಇವರು ಭಾರತ ತಂಡಕ್ಕೆ ಬಂದರೆ ಭುವನೇಶ್ವರ್ ಕುಮಾರ್ ಅವರ ಸ್ಥಾನ ಅಲುಗಾಡುವುದು ಖಂಡಿತ.

ಮೋಹಸಿನ್ ಖಾನ್ :- ಭಾರತದಲ್ಲಿ ಇರುವ ಕೆಲವೇ ಕೆಲವು ಎಡಗೈ ವೇಗಿಗಳಲ್ಲಿ ಒಬ್ಬರು ಮೋಹಸಿನ್ ಖಾನ್. ಐಪಿಎಲ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ ಮೋಹಸಿನ್ ಖಾನ್ ಅವರು ಆಡಿದ 9 ಪಂದ್ಯಗಳಲ್ಲಿ 14 ವಿಕೆಟ್ಸ್ ಪಡೆದಿದ್ದಾರೆ. ಎಡಗೈಯಲ್ಲಿ ವೇಗವಾಗಿ ಬೌಲಿಂಗ್ ಮಾಡಿ ಬಾಲ್ ಅನ್ನು ಸ್ವಿಂಗ್ ಮಾಡುವುದರಲ್ಲಿ ಮೋಹಸಿನ್ ಖಾನ್ ನಿಸ್ಸಿಮರಾಗಿದ್ದಾರೆ. ಇವರು ಬೌಲಿಂಗ್ ಮಾಡುವ ಶೈಲಿ, ಭಾರತ ತಂಡದ ಬಲಿಷ್ಠ ಆಟಗಾರ ಜಹೀರ್ ಖಾನ್ ಅವರ ರೀತಿ ಇದೆ ಎಂದು ಎಲ್ಲರು ಹೇಳುತ್ತಿದ್ದರು. ಮೋಹಸಿನ್ ಖಾನ್ ಅವರು ಯಾವಾಗ ಬೇಕಾದರೂ ಭಾರತ ತಂಡಕ್ಕೆ ಎಂಟ್ರಿ ಕೊಡಬಹುದು. ಇವರು ಭಾರತ ತಂಡಕ್ಕೆ ಬಂದರೆ, ಭುವನೇಶ್ವರ್ ಕುಮಾರ್ ಅವರಿಗೆ ಗೇಟ್ ಪಾಸ್ ಸಿಗಬಹುದು.

ಟಿ.ನಟರಾಜನ್ :- ಭಾರತ ತಂಡದ ಯಾರ್ಕರ್ ಕಿಂಗ್ ಎಂದೇ ಹೆಸರು ಮಾಡಿರುವ ಟಿ.ನಟರಾಜನ್ ಅವರು ಕೆಲ ಸಮಯದಿಂದ ಭಾರತ ತಂಡದಿಂದ ಹೊರಗಿದ್ದಾರೆ, ಇವರು ಜಸ್ಪ್ರೀತ್ ಬುಮ್ರ, ಶ್ರೀಲಂಕಾದ ಲೆಜೆಂಡ್ ಮಲಿಂಗ ಅವರ ರೀತಿಯಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇವರು ಶೀಘ್ರದಲ್ಲೇ ಭಾರತ ತಂಡಕ್ಕೆ ರೀಎಂಟ್ರಿ ಕೊಡುವ ಸಂಭವ ಇದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇವರು ಬಂದರೆ ಭುವನೇಶ್ವರ್ ಕುಮಾರ್ ಅವರನ್ನು ಹೊರಗೆ ಹಾಕುತ್ತಾರೆ.

Comments are closed.