Neer Dose Karnataka
Take a fresh look at your lifestyle.

ಕ್ರಾಂತಿ ಸಿನೆಮಾಗೆ ರಚಿತಾ ಜೊತೆ ಮತ್ತೊಬ್ಬ ನಾಯಕಿಯ ಎಂಟ್ರಿ: ಮತ್ತಷ್ಟು ರಂಗೇರಿದ ಡಿ ಬಾಸ್ ಸಿನಿಮಾ. ಯಾರು ಗೊತ್ತೆ??

ಡಿಬಾಸ್ ದರ್ಶನ್ ಅವರ ಕ್ರಾಂತಿ ಸಿನಿಮಾ ಹವಾ ಜೋರಾಗಿಯೇ ಇದೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ ಗಳು ಮತ್ತು ಟೀಸರ್ ಇಂದ ಕ್ರಾಂತಿ ಸಿನಿಮಾ ಜೋರಾಗಿಯೇ ಸದ್ದು ಮಾಡುತ್ತಿದೆ. ಕ್ರಾಂತಿ ಸಿನಿಮಾವನ್ನು ಶೈಲಜಾ ನಾಗ್ ಅವರು ನಿರ್ಮಾಣ ಮಾಡಿದ್ದು, ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ಕ್ರಾಂತಿ ಸಿನಿಮಾ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ಅಕ್ಷರ ಕ್ರಾಂತಿ, ಕನ್ನಡ ಸರ್ಕಾರಿ ಶಾಲೆಯ ಉಳಿವಿನ ಬಗ್ಗೆ ಸಿನಿಮಾದಲ್ಲಿ ವಿಶೇಷವಾಗಿ ಚರ್ಚೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಸಿನಿಮಾದಲ್ಲಿ ಪಕ್ಕಾ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಡಿಬಾಸ್.

ದರ್ಶನ್ ಅವರ ಸಿನಿಮಾದಲ್ಲಿ ಅಭಿಮಾನಿಗಳು ಎಕ್ಸ್ಪೆಕ್ಟ್ ಮಾಡುವ ಹಾಗೆ, ಮಾಸ್ ಫೈಟ್ಸ್, ಡೈಲಾಗ್ಸ್, ಮಾಸ್ ಹಾಡುಗಳು ಎಲ್ಲವೂ ಇರಲಿದೆ, ಒಂದೊಳ್ಳೆಯ ಸಂದೇಶದ ಜೊತೆಗೆ ಮಾಸ್ ಎಲಿಮೆಂಟ್ಸ್ ಸೇರಿಸಿ ಸಿನಿಮಾ ಕಥೆ ತೋರಿಸಲಿದ್ದಾರೆ ವಿ.ಹರಿಕೃಷ್ಣ. ಕ್ರಾಂತಿ ಸಿನಿಮಾದಲ್ಲಿ ಸುಮಲತಾ ಅಂಬರೀಶ್, ವಿ ರವಿಚಂದ್ರನ್ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಈ ಸಿನಿಮಾಗೆ ನಾಯಕಿಯಾಗಿ ನಟಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ದರ್ಶನ್ ಅವರು ಮತ್ತು ರಚಿತಾ ಅವರು ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ ಎಂದು ಸುದ್ದಿ ಸಿಕ್ಕಿದೆ, ಆದರೆ ಇದೀಗ ಕ್ರಾಂತಿ ಸಿನಿಮಾಗೆ ಹೊಸ ನಾಯಕಿಯ ಎಂಟ್ರಿ ಆಗಿದೆ ಎಂದು ಸುದ್ದಿ ಸಿಕ್ಕಿದೆ.

ಸಿನಿಮಾ ಚಿತ್ರೀಕರಣ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆದಿದೆ, ಪೊಲ್ಯಾನ್ಡ್ ನಲ್ಲಿ ಎರಡು ಹಾಡುಗಳ ಚಿತ್ರೀಕರಣ ಮಾಡಲಾಗಿದೆ. ಈಗ ಹೊಸ ಹೀರೋಯಿನ್ ಎಂಟ್ರಿ ಆಗಿರುವ ಬಗ್ಗೆ ಸುದ್ದಿ ಸಿಕ್ಕಿದ್ದು, ಹೊಸದಾಗಿ ಎಂಟ್ರಿ ಆಗಿರುವ ನಟಿ ಮತ್ಯಾರು ಅಲ್ಲ, ಸಂಯುಕ್ತ ಹೊರನಾಡ್ ಅವರು. ದರ್ಶನ್ ಅವರು, ರಚಿತಾ ರಾಮ್ ಮತ್ತು ಸಂಯುಕ್ತ ಹೊರನಾಡ್ ಮೂವರು ಜೊತೆಯಾಗಿರುವ ಫೋಟೋ ಒಂದು ಈಗ ವೈರಲ್ ಆಗುತ್ತಿದ್ದು, ಇದು ಎಲ್ಲಿ ಯಾವಾಗ ಕ್ಲಿಕ್ ಮಾಡಿರುವ ಫೋಟೋ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ ಮೂಲಗಳ ಪ್ರಕಾರ ಸಂಯುಕ್ತ ಅವರು ಸಹ ಕ್ರಾಂತಿ ಸಿನಿಮಾದಲ್ಲಿ ಒಂದು ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡದಿಂದ ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ.

Comments are closed.