Neer Dose Karnataka
Take a fresh look at your lifestyle.

ವಿಜಯ್ ದೇವರಕೊಂಡ ಜೊತೆ ಸಿನಿಮಾದಲ್ಲಿ ಕಿಸ್ ಮಾಡಿದ ಬಳಿಕ ಅನುಭವಿಸಿದ ಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ರಶ್ಮಿಕಾ: ಏನಾಗಿತ್ತು ಅಂತೇ ಗೊತ್ತೇ?

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಬಗ್ಗೆ ಕೇಳಿಬರುತ್ತಿರುವ ಗಾಸಿಪ್ ಗಳ ನಮಗೆಲ್ಲ ಗೊತ್ತಿದೆ. ಕೆಲ ಸಮಯದಿಂದ ಇವರಿಬ್ಬರು ಮದುವೆ ಆಗುತ್ತಾರೆ, ಇಬ್ಬರು ಡೇಟ್ ಮಾಡುತ್ತಿದ್ದಾರೆ ಎಂದು ಹಲವು ಗಾಸಿಪ್ ಗಳು ಕೇಳಿಬರುತ್ತಲೇ ಇದೆ. ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಎರಡು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ ಗೀತಾ ಗೋವಿಂದಮ್ ಮತ್ತು ಡಿಯರ್ ಕಾಮರೆಡ್, ಈ ಎರಡು ಸಿನಿಮಾಗಳಲ್ಲೂ ಇವರಿಬ್ಬರ ಕೆಮಿಸ್ಟ್ರಿ ಜನರಿಗೆ ಬಹಳ ಇಷ್ಟವಾಗಿತ್ತು, ಜೊತೆಗೆ ಈ ಎರಡು ಸಿನಿಮಾಗಳಲ್ಲೂ ರಶ್ಮಿಕಾ ವಿಜಯ್ ಲಿಪ್ ಲಾಕ್ ಮಾಡಿದರು.

ರಶ್ಮಿಕಾ ಆಗಿನವರೆಗೂ ಯಾವ ನಟನ ಜೊತೆಗು ಅಷ್ಟರ ಮಟ್ಟಿಗೆ ಇಂಟಿಮೇಟ್ ಆಗಿ ಕಾಣಿಸಿಕೊಳ್ಳದೆ ಇದ್ದವರು, ವಿಜಯ್ ದೇವರಕೊಂಡ ಅವರ ಜೊತೆಯಲ್ಲಿ ಈ ರೀತಿಯ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು, ಎಲ್ಲರಿಗೂ ಶಾಕ್ ಆಗಿತ್ತು, ಇದರಿಂದಾಗಿ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗಿದ್ದರು. ಆ ದಿನಗಳ ಬಗ್ಗೆ ಇತ್ತೀಚೆಗೆ ರಶ್ಮಿಕಾ ಅವರು ಮಾತನಾಡಿದ್ದಾರೆ, ಆ ಸಮಯದಲ್ಲಿ ಪ್ರತಿದಿನ ತಮ್ಮ ಬಗ್ಗೆ ತಾವು ಬಹಳ ಕೆಟ್ಟದಾಗಿ ಬರೆದಿರುವುದನ್ನು ಓದಲು ತುಂಬಾ ನೋವಾಗುತ್ತಿತ್ತು, ಎಷ್ಟೋ ದಿನಗಳು ಅವುಗಳನ್ನು ಓದಿ, ಅಳುತ್ತಲೇ ಮಲಗಿದ್ದೇನೆ, ಅಳುತ್ತಲೇ ಇರುತ್ತಿದ್ದೆ, ಅಳುತ್ತಲೇ ಎದ್ದೇಳುತ್ತಿದ್ದೆ. ಆ ಸಮಯದಲ್ಲಿ ನನಗೆ ತುಂಬಾ ಒಬ್ಬಂಟಿಯಾಗಿ ಅನ್ನಿಸುತ್ತಿತ್ತು..

ನನ್ನ ಜೊತೆ ಯಾರು ಇರುತ್ತಿರಲಿಲ್ಲ, ನನ್ನನ್ನು ಬಿಟ್ಟು ಎಲ್ಲರೂ ದೂರ ಹೋಗಿದ್ದಾರೆ ಅನ್ನಿಸುತ್ತಿತ್ತು.. ಆದರೆ ಇದನ್ನು ಯಾರ ಜೊತೆಯಲ್ಲೂ ಹೇಳಲು ಆಗುತ್ತಿರಲಿಲ್ಲ, ಮನೆಯಲ್ಲಿ ಹೇಳಿದರೆ ಬೇಸರ ಮಾಡಿಕೊಳ್ಳುತ್ತಾರೆ ಎಂದು ಅವರಿಗು ಹೇಳುತ್ತಿರಲಿಲ್ಲ. ನಾನೊಬ್ಬಳೇ ಅನುಭವಿಸುತ್ತಿದ್ದೆ. ಆ ಸಮಯ ಭಯವಾಗುತ್ತಿತ್ತು..ಎಂದು ಆ ದೃಶ್ಯಗಳಿಂದ ಆದ ನೋವಿನ ಬಗ್ಗೆ ಹೇಳಿದ್ದಾರೆ ರಶ್ಮಿಕಾ ಮಂದಣ್ಣ. ಇನ್ನು ವಿಜಯ್ ರಶ್ಮಿಕಾ ಡೇಟ್ ಮಾಡುತ್ತಿದ್ದಾರೆ ಎನ್ನುವ ವಿಚಾರದ ಬಗ್ಗೆ ಸಹ ಮಾತನಾಡಿ, ನಾವಿಬ್ಬರು ಒಳ್ಳೆಯ ಸ್ನೇಹಿತರು, ನಾವು ಅಭಿನಯಿಸಿದ ಸಿನಿಮಾಗಳು ಸೂಪರ್ ಹಿಟ್ ಆಗಿದೆ ಎಂದು ಎಲ್ಲರು ಹಾಗೆ ಅಂದುಕೊಂಡಿದ್ದಾರೆ, ಅಂಥದ್ದೇನು ಇಲ್ಲ. ಅಭಿಮಾನಿಗಳಿಗೋಸ್ಕರ ನಾವಿಬ್ಬರು ಇನ್ನೊಂದು ಲವ್ ಸ್ಟೋರಿಯಲ್ಲಿ ನಟಿಸುತ್ತೇವೆ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

Comments are closed.