Neer Dose Karnataka
Take a fresh look at your lifestyle.

ನಿಮಿಷಗಳಲ್ಲಿ ಕೋಟಿ ಕೋಟಿ ದುಡಿಯುವ ಸುದೀಪ್, ಬಿಗ್ ಬಾಸ್ ನಲ್ಲಿ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

ಬಿಗ್ ಬಾಸ್ ಕಾರ್ಯಕ್ರಮವನ್ನು ಹಲವರು ನೋಡುವುದು ಮನೆಯಲ್ಲಿ ಸ್ಪರ್ಧಿಗಳು ಹೇಗಿರುತ್ತಾರೆ, ಬಿಗ್ ಬಾಸ್ ಕೊಡುವ ಟಾಸ್ಕ್ ಗಳು ಇದೆಲ್ಲವನ್ನು ನೋಡುವ ಸಲುವಾಗಿ ಬಿಗ್ ಬಾಸ್ ನೋಡುತ್ತಾರೆ. ಇನ್ನು ಕೆಲವರು ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರನ್ನು ನೋಡುವ ಸಲುವಾಗಿ ಬಿಗ್ ಬಾಸ್ ಶೋ ನೋಡುತ್ತಾರೆ. ಪ್ರತಿ ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಆ ಗತ್ತು ಗಾಂಭೀರ್ಯದಲ್ಲಿ ಪಂಚಾಯಿತಿ ಎಪಿಸೋಡ್ ನಡೆಸಿಕೊಡುವುದನ್ನು ನೋಡುವುದು ಚಂದ ಎನ್ನುವುದು ಹಲವು ಅಭಿಮಾನಿಗಳ ಅಭಿಪ್ರಾಯ.

ಅದು ನಿಜವು ಹೌದು, ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುವ ಶೈಲಿ, ಮನೆಯಲ್ಲಿರುವ ಸ್ಪರ್ಧಿಗಳ ಜೊತೆಗೆ ವ್ಯವಹರಿಸಿ, ಅವರವರು ಮಾಡಿದ ತಪ್ಪನ್ನು ತಿಳಿಸಿ ಹೇಳಿ, ಅಗತ್ಯವಿದ್ದಾಗ ಗಂಭೀರವಾಗಿ ಮಾತನಾಡಿ, ಇನ್ನುಳಿದ ಸಮಯದಲ್ಲಿ ತಮಾಷೆಯಾಗಿ ಮಾತನಾಡಿ ಇಡೀ ಮನೆಯವರನ್ನು ನಕ್ಕು ನಗಿಸುವ ಸುದೀಪ್ ಅವರ ಹಾಗೆ ಇನ್ಯಾರು ಬಿಗ್ ಬಾಸ್ ಶೋನ ಸಾರಥ್ಯ ವಹಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಕಿರುತೆರೆ ವೀಕ್ಷಕರು. ಸುದೀಪ್ ಅವರು ಒಂದು ರೀತಿ ಬಿಗ್ ಬಾಸ್ ಶೋನ ಆಧಾರ ಸ್ಥಂಭ ಇದ್ದ ಹಾಗೆ ತಪ್ಪಲ್ಲ, ಕನ್ನಡದಲ್ಲಿ ಬಿಗ್ ಬಾಸ್ ಶೋ 8 ಸೀಸನ್ ಕಳೆದು 9ನೇ ಸೀಸನ್ ಈಗ ನಡೆಯುತ್ತಿದೆ.

ಇಷ್ಟು ವರ್ಷಗಳಲ್ಲಿ ಬಿಗ್ ಬಾಸ್ ಶೋ ನಿರೂಪಕರಾಗಿ ಸುದೀಪ್ ಅವರನ್ನು ಬಿಟ್ಟು ಬೇರೆ ಯಾರನ್ನು ಸಹ ಊಹೆ ಮಾಡಿಕೊಳ್ಳಲು ಸಹ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಬಿಗ್ ಬಾಸ್ ಶೋ ಎಂದರೆ ಸುದೀಪ್ ಅವರು ಎಂದು ಹೇಳುವ ಹಾಗೆ ಶೋ ಜೊತೆಗಿದ್ದಾರೆ ಕಿಚ್ಚ, ಬೇರೆ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರು ಸಹ ಪ್ರತಿ ವೀಕೆಂಡ್ ತಪ್ಪಿಸದೆ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಬರುತ್ತಾರೆ, ಅದೇ ರೀತಿ ಸುದೀಪ್ ಅವರಿಗೆ ಬಿಗ್ ಬಾಸ್ ಶೋ ನಿರೂಪಣೆ ಮಾಡಲಿ ಅಷ್ಟೇ ದೊಡ್ಡ ಸಂಭಾವನೆಯನ್ನು ನೀಡಲಾಗುತ್ತಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಬಿಗ್ ಬಾಸ್ ಶೋ ನ ಒಂದೊಂದು ವೀಕೆಂಡ್ ಎಪಿಸೋಡ್ ಗಳ ನಿರೂಪಣೆಗೆ ಸುದೀಪ್ ಅವರಿಗೆ 9 ಕೋಟಿ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ, ಇದನ್ನು ಕೇಳಿದ ಕಿರುತೆರೆ ವೀಕ್ಷಕರು ಶಾಕ್ ಆಗಿದ್ದು, ನಿಮಿಷಕ್ಕೆ ಕೋಟಿ ಗಳಿಸುತ್ತಿದ್ದಾರೆ ಸುದೀಪ್ ಎನ್ನುತ್ತಿದ್ದಾರೆ.

Comments are closed.