Neer Dose Karnataka
Take a fresh look at your lifestyle.

ಫುಲ್ ಹಠ ಮಾಡಿ ದೀಪಿಕಾ ದಾಸ್ ರವರನ್ನು ಕರೆತಂದಿರುವ ಬಿಗ್ ಬಾಸ್ ಅವರಿಗಾಗಿ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

17,907

ಜೀಕನ್ನಡ ವಾಹಿನಿಯಲ್ಲಿ ನಾಗಿಣಿ ಸೀರಿಯಲ್ ಮೂಲಕ ಹೆಚ್ಚಿನ ಜನಪ್ರಿಯತೆ ಗಳಿಸಿದ ನಟಿ ದೀಪಿಕಾ ದಾಸ್. ನಾಗಿಣಿ ಧಾರಾವಾಹಿಯಲ್ಲಿ ಇವರ ಅಭಿನಯ, ದೀಪಿಕಾ ಧರಿಸುತ್ತಿದ್ದ ಕಾಸ್ಟ್ಯೂಮ್ಸ್, ಆಭರಣಗಳು ಎಲ್ಲವೂ ಕೂಡ ಕಿರುತೆರೆ ವೀಕ್ಷಕರಿಗೆ ಬಹಳ ಇಷ್ಟವಾಗಿತ್ತು. ಧಾರಾವಾಹಿ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ನಲ್ಲಿ ಕೂಡ ಸ್ಪರ್ಧಿಸಿ, ತಮ್ಮ ಡ್ಯಾನ್ಸ್ ಸ್ಕಿಲ್ಸ್ ಇಂದ ಜಡ್ಜ್ ಗಳಿಂದ ಮೆಚ್ಚುಗೆ ಪಡೆದಿದ್ದರು. ಜೊತೆಗೆ ಜೀಕನ್ನಡ ವಾಹಿನಿಯಲ್ಲಿ ಕೂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕೂಡ ಸ್ಪರ್ಧಿಸಿದ್ದರು.

ನಂತರ ಕಳೆದ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಕೂಡ ಸ್ಪರ್ಧಿಸಿದ್ದರು. ಬಿಗ್ ಬಾಸ್ ಮೂಲಕ ಕರ್ನಾಟಕದ ಜನತೆಗೆ ಇನ್ನಷ್ಟು ಇಷ್ಟವಾದರು. ನಿಜ ಜೀವನದಲ್ಲಿ ದೀಪಿಕಾರ ಸ್ವಭಾವ ಎಂಥದ್ದು, ಎಲ್ಲರೊಡನೆ ಹೇಗಿರುತ್ತಾರೆ ಎಂಬುದು ಬಿಗ್ ಬಾಸ್ ಮನೆಯಲ್ಲಿದ್ದಾಗ ಅವರ ಅಭಿಮಾನಿಗಳಿಗೆ ಗೊತ್ತಾಯಿತು. ಇನ್ನೇನು ದೀಪಿಕಾ ಫಿನಾಲೆ ತಲುಪುತ್ತಾರೆ ಎಂದುಕೊಳ್ಳುವಷ್ಟರಲ್ಲಿ, ಎಲಿಮಿನೇಟ್ ಆಗಿ ಶಾಕ್ ನೀಡಿದ್ದರು. ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಗಳಿಸಿರುವ ದೀಪಿಕಾ ಅವರು ನಾಗಿಣಿ ಬಳಿಕ ಬೇರೆ ಯಾವುದೇ ಧಾರವಾಹಿಗಳಲ್ಲಿ ಕಾಣಿಸಿಕೊಂಡಿಲ್ಲ.

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ನವೀನರ ಪಟ್ಟಿಯಲ್ಲಿ ಬಿಗ್ ಬಾಸ್ ಮನೆಗೆ ಬಂದಿದ್ದು, ಮತ್ತೊಮ್ಮೆ ಸ್ಟ್ರಾಂಗ್ ಸ್ಪರ್ಧಿಯಾಗಿ ನಿಂತಿದ್ದಾರೆ ದೀಪಿಕಾ ದಾಸ್. ದೀಪಿಕಾ ದಾಸ್ ಅವರಿಗೆ ಸೀಸನ್ 7ರಲ್ಲೂ ಬಹಳ ಬೇಡಿಕೆ ಇತ್ತು. ಈಗಲೂ ಮತ್ತೊಮ್ಮೆ ಅವರನ್ನು ಬೇಕೇ ಬೇಕು, ವೀಕ್ಷಕರಿಗೆ ಬಹಳ ಇಷ್ಟವಾಗುತ್ತಾರೆ ಎಂದು ಕಲರ್ಸ್ ಕನ್ನಡ ವಾಹಿನಿ ದೀಪಿಕಾ ದಾಸ್ ಅವರನ್ನು ಮತ್ತೊಮ್ಮೆ ಬಿಗ್ ಬಾಸ್ ಗೆ ಕರೆತರಲಾಗಿದ್ದು, ಇದೀಗ ಅವರಿಗೆ ಕೊಡುತ್ತಿರುವ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ, ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ದೀಪಿಕಾ ದಾಸ್ ಅವರಿಗೆ ಒಂದು ವಾರಕ್ಕೆ 1 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ.

Leave A Reply

Your email address will not be published.