Neer Dose Karnataka
Take a fresh look at your lifestyle.

ಧಾರಾವಾಹಿಯಲ್ಲಿ, ಸಿನೆಮಾಗಳಲ್ಲಿ ಬಾರಿ ಮಿಂಚುತ್ತಿರುವ ಮೇಘ ಶೆಟ್ಟಿ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಇಷ್ಟು ಚಿಕ್ಕವರ??

271

ಕಿರುತೆರೆಯ ಸೆನ್ಸೇಷನ್ ಆಗಿದ್ದ ಮೇಘಾ ಶೆಟ್ಟಿ ಇಂದು ಸಿನಿಮಾಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ. 2019ರಲ್ಲಿ ಜೀಕನ್ನಡ ವಾಹಿನಿಯಲ್ಲಿ ಶುರುವಾದ ಜೊತೆ ಜೊತೆಯಲಿ ಧಾರವಾಹಿ ಮೂಲಕ ನಟನೆಯ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಮೇಘಾ ಶೆಟ್ಟಿ ಅವರು ಅನು ಸಿರಿಮನೆ ಪಾತ್ರದ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾದರು. ಜೊತೆ ಜೊತೆಯಲಿ ಧಾರವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ತಂದುಕೊಟ್ಟಿದೆ ಅಂದ್ರೆ, ಸಾಕಷ್ಟು ಜನ ಇವರನ್ನು ಅನು ಎಂದೇ ಗುರುತಿಸುತ್ತಾರೆ. ಜೊತೆ ಜೊತೆಯಲಿ ಇಂದ ಜನರ ಪ್ರೀತಿ, ದೊಡ್ಡ ಅಭಿಮಾನಿ ಬಳಗ ಎಲ್ಲವನ್ನು ಪಡೆದುಕೊಂಡಿದ್ದಾರೆ ಮೇಘಾ.

ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನು ಸಿರಿಮನೆ ಮತ್ತು ರಾಜನಂದಿನಿ ಎರಡು ಶೇಡ್ ನ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಮೇಘಾ ಶೆಟ್ಟಿ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ಅಭಿನಯಿಸಿರುವ ತ್ರಿಬಲ್ ರೈಡಿಂಗ್ ಸಿನಿಮಾ ಬಿಡುಗಡೆಗೆ ರೆಡಿಯಿದೆ, ಇತ್ತೀಚೆಗೆ ಶುರುವಾದ ಈ ಸಿನಿಮಾದ ಹಾಡು ಜನರಿಗೆ ಬಹಳ ಇಷ್ಟವಾಯಿತು. ಇನ್ನು ಡಾರ್ಲಿಂಗ್ ಕೃಷ್ಣ ಅವರೊಡನೆ ದಿಲ್ ಪಸಂದ್ ಸಿನಿಮಾದಲ್ಲಿ ನಾಯಿಸುತ್ತಿದ್ದಾರೆ ಮೇಘಾ ಶೆಟ್ಟಿ, ದಿಲ್ ಪಸಂದ್ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಮೇಘಾ ಶೆಟ್ಟಿ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು, ಜನರು ಇಷ್ಟಪಟ್ಟಿದ್ದಾರೆ.

ಇಷ್ಟೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ ಮೇಘಾ. ಬಹಳ ಚಿಕ್ಕ ವಯಸ್ಸಿಗೆ ನಟನೆ ಶುರು ಮಾಡಿ, ಈಗ ಧಾರವಾಹಿ ಸಿನಿಮಾ ಎಂದು ಜನರ ಮನಸ್ಸು ಗೆದ್ದಿದ್ದಾರೆ ಮೇಘಾ ಶೆಟ್ಟಿ. ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅವರೊಡನೆ ಒಂದು ಜಾಹೀರಾತಿನಲ್ಲಿ ಸಹ ಕಾಣಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲೇ ಇಷ್ಟರ ಮಟ್ಟಿಗೆ ಮಿಂಚುತ್ತಿರುವ ಮೇಘಾ ಶೆಟ್ಟಿ ಅವರ ವಯಸ್ಸು ಎಷ್ಟು ಎನ್ನುವ ಚರ್ಚೆ ಈಗ ಶುರುವಾಗಿದ್ದು, ಮೇಘಾ ಶೆಟ್ಟಿ ಅವರು ಹುಟ್ಟಿತ್ತು 1998ರ ಅಗಸ್ಟ್ 4ರಂದು, ಈಗ ಮೇಘಾ ಅವರಿಗೆ 24 ವರ್ಷಗಳು. ಚಿಕ್ಕ ವಯಸ್ಸಿನಲ್ಲೇ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎಂದು ಇವರ ಅಭಿಮಾನಿಗಳು ಸಂತೋಷಪಡುತ್ತಿದ್ದಾರೆ.

Leave A Reply

Your email address will not be published.