Neer Dose Karnataka
Take a fresh look at your lifestyle.

ತಿಂಗಳ ಮೊದಲ ಗ್ರಹದ ಸ್ಥಾನ ಪಲ್ಲಟ: ಈ ಚಲನೆಯಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸ್ಥಾನ ಬದಲಾವಣೆಗೆ ವಿಶೇಷವಾದ ಮಹತ್ವ ಇದೆ, ಕೆಲಗೂ ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಶುಭ ಪರಿಣಾಮ ಬೀರಿದರೆ, ಇನ್ನು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ. ಹೀಗೆ ಗ್ರಹಗಳ ಸ್ಥಾನ ಬದಲಾವಣೆ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ತಿಂಗಳಲ್ಲಿ ಮೊದಲ ಗ್ರಹದ ಸ್ಥಾನ ಬದಲಾವಣೆ ಅಕ್ಟೋಬರ್ 16ರಂದು ನಡೆಯಲಿದ್ದು, ಮಂಗಳ ಗ್ರಹವು ತನ್ನ ರಾಶಿ ಬದಲಾಯಿಸಿ ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ, ಇದರಿಂದಾಗಿ ಕೆಲವು ರಾಶಿಗಳಿಗೆ ಲಾಭ ಮತ್ತು ಪ್ರಯೋಜನ ಹೆಚ್ಚಾಗಲಿದೆ. ಇನ್ನು ಕೆಲವು ರಾಶಿಗಳು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮಂಗಳ ಗ್ರಹದ ರಾಶಿ ಪರಿವರ್ತನೆಯಿಂದ ಯಾವ ರಾಶಿಗೆ ಯಾವ ಫಲ ಇದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಕೆಲಸದಲ್ಲಿ ಉತ್ಸಾಹ ಇರುತ್ತದೆ. ಮಾತನಾಡುವಾಗ ಎಚ್ಚರಿಕೆಯಿಂದ ಇರಿ, ನಿಮ್ಮ ಮನಸ್ಸಿಗೆ ಶಾಂತಿ ಇರುವುದಿಲ್ಲ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಧರ್ಮ ಕರ್ಮದ ಮೇಲೆ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ತಾಯಿಯಿಂದ ಬೆಂಬಲ ಸಿಗುತ್ತದೆ, ತಾಯಿಯಿಂದ ಧನಲಾಭವಾಗುತ್ತದೆ. ಸ್ನೇಹಿತರ ಭೇಟಿಯಾಗಬಹದು. ಒಳ್ಳೆಯ ಕ್ಷೇತ್ರಕ್ಕೆ ಯಾತ್ರೆಗೆ ಹೋಗುವ ಅವಕಾಶವಿದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಖರ್ಚು ಜಾಸ್ತಿಯಾಗಬಹುದು.

ವೃಷಭ ರಾಶಿ :- ತಾಳ್ಮೆಯ ಕಡಿಮೆಯಾಗುತ್ತದೆ, ಸಂಯಮದಿಂದ ವರ್ತಿಸಿ. ಓದುವ ಕೆಲಸದಲ್ಲಿ ಅಡಚಣೆ ಉಂಟಾಗಬಹುದು. ಸ್ನೇಹಿತರ ಸಹಾಯದಿಂದ ವ್ಯಾಪಾರ ವಿಸ್ತರಣೆ ಆಗುತ್ತದೆ, ಲಾಭ ಹೆಚ್ಚಾಗುತ್ತದೆ. ಮನೆಯ ವಾತಾವರಣ ಸುಖವಾಗಿರುತ್ತದೆ. ಕೆಲಸದಲ್ಲಿ ಶ್ರಮ ಹೆಚ್ಚಾಗಿರುತ್ತದೆ. ಆದಾಯದಲ್ಲಿ ಅಡಚಣೆ ಉಂಟಾಗಿ, ಖರ್ಚು ಹೆಚ್ಚಾಗುತ್ತದೆ. ನಿಮ್ಮ ಮನೆಯವರ ಜೊತೆಗೆ ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ಕೆಲಸದ ವಿಚಾರದಲ್ಲಿ ಬದಲಾವಣೆ ಆಗಬಹುದು.

ಮಿಥುನ ರಾಶಿ :- ಉತ್ತಮ ಆಹಾರದ ಕಡೆಗೆ ಗಮನ ಹರಿಸಿ. ನಿಮಗೆ ಆತ್ಮವಿಶ್ವಾಸ ಕಡಿಮೆಯಾಗಬಹುದು, ಶಾಂತಿ ಉಳಿಸಿಕೊಳ್ಳಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ, ಕುಟುಂಬದ ದೇವರ ಕಾರ್ಯಗಳು ನಡೆಯುತ್ತದೆ. ಸ್ನೇಹಿತರ ಜೊತೆ ಸೇರಿ ಆಸ್ತಿಯಲ್ಲಿ ಹೂಡಿಕೆ ಮಾಡುತ್ತೀರಿ. ನಿಮ್ಮ ಸಂಪತ್ತು ಕಡಿಮೆ ಆಗುವ ಸಾಧ್ಯತೆ ಇದೆ. ಬರೆಯುವವರಿಗೆ ಮತ್ತು ಬೌದ್ಧಿಕ ಕೆಲಸ ಮಾಡುವವರಿಗೆ ಹಣ ಸಿಗುತ್ತದೆ. ಬಟ್ಟೆಗಾಗಿ ಹೆಚ್ಚು ಖರ್ಚು ಮಾಡುತ್ತೀರಿ. ಕಲೆ ಮತ್ತು ಸಂಗೀತದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತೀರಿ. ಕೆಲಸಕ್ಕಾಗಿ ಶ್ರಮ ಮತ್ತು ಖರ್ಚು ಎರಡು ಕೂಡ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ :- ಆತ್ಮವಿಶ್ವಾಸದಲ್ಲಿ ಕೊರತೆ ಉಂಟಾಗಲಿದೆ, ಭಾವನೆಗಳನ್ನು ಹಿಡಿತದಲ್ಲಿಡಿ. ಕೋಪ ಕಡಿಮೆ ಮಾಡಿ, ಕುಟುಂಬದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಮನೆಯ ಹಿರಿಯರಿಂದ ಲಾಭ ಪಡೆಯುತ್ತೀರಿ, ಮನೆಯವರ ಜೊತೆಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಒಡಹುಟ್ಟಿದವರ ಬೆಂಬಲ ಸಿಗುತ್ತದೆ, ಅರ್ಧಕ್ಕೆ ನಿಂತು ಬರದೆ ಇರುವ ಹಣ ನಿಮ್ಮ ಬಳಿಗೆ ಬರುತ್ತದೆ. ವೃತ್ತಿಯಲ್ಲಿ ಅಧಿಕಾರಿಗಳ ಬೆಂಬಲ ಸಿಗುತ್ತದೆ.

ಸಿಂಹ ರಾಶಿ :- ಆತ್ಮವಿಶ್ವಾಸದ ಕೊರತೆಯಾಗುತ್ತದೆ, ಮನಸ್ಸಿಗೆ ಹತಾಶೆ ಮತ್ತು ಅಸಮಾಧಾನ ಉಂಟಾಗುತ್ತದೆ. ಓದಿನ ಕಡೆಗೆ ಆಸಕ್ತಿ ಕಡಿಮೆ ಆಗುತ್ತದೆ ಆದರೆ ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ. ಕೆಲಸದಲ್ಲಿ ಬಡ್ತಿ ಸಿಗುತ್ತದೆ. ತಾಯಿಯ ಬೆಂಬಲ ಸಿಗುತ್ತದೆ, ಖರ್ಚು ಹೆಚ್ಚಾಗುತ್ತದೆ, ಜೊತೆಗೆ ಆಸ್ತಿ ಕೂಡ ಹೆಚ್ಚಾಗಬಹುದು. ವಾಹನ ನಿರ್ವಹಣೆಯಲ್ಲಿ ಖರ್ಚು ಹೆಚ್ಚಾಗುತ್ತದೆ, ಓದಿನ ವಿಚಾರದಲ್ಲಿ ಒಳ್ಳೆಯ ಫಲಿತಾಂಶ ಸಿಗುತ್ತದೆ. ಉನ್ನತ ಅಧಿಕಾರಿಗಳ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಬದಲಾವಣೆ ಆಗುತ್ತದೆ. ಸಿಹಿ ಪದಾರ್ಥದ ಮೇಲೆ ಆಸಕ್ತಿ ಹೆಚ್ಚಾಗುತ್ತದೆ.

ಕನ್ಯಾ ರಾಶಿ :- ವ್ಯಾಪಾರ ವಿಸ್ತರಣೆ ಮಾಡುತ್ತೀರಿ, ಒಡಹುಟ್ಟಿದವರ ಬೆಂಬಲ ಸಿಗುತ್ತದೆ, ಜೊತೆಗೆ ಶ್ರಮವು ಹೆಚ್ಚಾಗುತ್ತದೆ. ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ. ಯೋಜನೆಗೂ ಮೀರಿ ಖರ್ಚು ಹೆಚ್ಚಾಗುತ್ತದೆ. ಬಟ್ಟೆಗಳು ಉಡುಗೊರೆಯಾಗಿ ಸಿಗಬಹುದು. ಕೆಲಸ ಬದಲಾಗಿ ಬೇರೆ ಊರಿಗೆ ಹೋಗಬಹುದು. ಆಮದು ರಫ್ತು ಮಾಡುವವರಿಗೆ ಲಾಭ ಹೆಚ್ಚಾಗುತ್ತದೆ. ತಾಯಿ ಜೊತೆ ಸಮಯ ಕಳೆಯುತ್ತೀರಿ, ವಾಹನದ ಸುಖ ಹೆಚ್ಚಾಗುತ್ತದೆ. ಕೆಲಸದಲ್ಲಿ ಅಧಿಕಾರಿಗಳ ಬೆಂಬಲ ಸಿಗುತ್ತದೆ.

ತುಲಾ ರಾಶಿ :- ಮಾತಿನಲ್ಲಿ ಕಠೋರತೆ ಬರಬಹುದಾದ ಕಾರಣ ಮಾತು ಹಿತಮಿತವಾಗಿರಲಿ, ಬಟ್ಟೆ ಮೇಲೆ ಪ್ರೀತಿ ಹೆಚ್ಚಾಗುತ್ತದೆ. ತಾಯಿ ಜೊತೆಗೆ ವೈಮನಸ್ಸು ಉಂಟಾಗಬಹುದು ಆದರೆ ಧನಲಾಭ ಆಗುತ್ತದೆ. ವೃತ್ತಿಯಲ್ಲಿ ಅಧಿಕಾರಿಗಳ ಬೆಂಬಲ ಸಿಗುತ್ತದೆ. ಉದ್ಯೋಗದಲ್ಲಿ ಏಳಿಗೆ ಕಾಣುತ್ತೀರಿ. ಸ್ಥಾನ ಪಲ್ಲಟ ಉಂಟಾಗಬಹುದು, ವಾಹನದ ಸುಖ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ :- ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ, ಆದರೆ ಸೋಮಾರಿ ಆಗುತ್ತೀರಿ, ಸಂಯಮದಿಂದ ಇರಿ. ಕುಟುಂಬದಲ್ಲಿ ಸೌಕರ್ಯ ಹೆಚ್ಚಾಗುತ್ತದೆ. ಬಾಳಸಂಗಾತಿಯ ಜೊತೆಗೆ ವೈಮನಸ್ಸು ಉಂಟಾಗಬಹುದು. ಕೆಲಸದಲ್ಲಿ ಬದಲಾವಣೆ ಉಂಟಾಗಬಹುದು. ತಾಯಿಯ ಬೆಂಬಲ ಸಿಗುತ್ತದೆ. ಲಾಭ ಹೆಚ್ಚಾಗುತ್ತದೆ, ಕೆಲಸದಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ. ಕಠಿಣ ಪರಿಶ್ರಮ ಇರುತ್ತದೆ.

ಧನು ರಾಶಿ :- ಆತ್ಮವಿಶ್ವಾಸ ಹೆಚ್ಚಿರುತ್ತದೆ, ಓದಿನ ಕಡೆಗೆ ಆಸಕ್ತಿ ಹೆಚ್ಚಾಗುತ್ತದೆ. ಆಸ್ತಿ ನಿರ್ವಹಣೆ ಖರ್ಚು ಜಾಸ್ತಿಯಾಗುತ್ತದೆ. ನಿಮ್ಮ ಸಂಗಾತಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು, ಇದರರಿಂದ ವೈದ್ಯಕೀಯ ಖರ್ಚುಗಳು ಹೆಚ್ಚಾಗುತ್ತದೆ. ಕೆಲಸದಲ್ಲಿ ಬದಲಾವಣೆ ಇಂದ ಬೇರೆ ಜಾಗಕ್ಕೆ ಹೋಗುತ್ತೀರಿ. ಒಡಹುಟ್ಟಿದವರ ಸಹಕಾರ ಸಿಗುತ್ತದೆ, ಕಠಿಣ ಪರಿಶ್ರಮ ಇರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಜೀವನದಲ್ಲಿ ಸ್ಥಿತಿಗಳು ಅಹಿತಕರವಾಗಿರುತ್ತದೆ.

ಮಕರ ರಾಶಿ :- ಕಾರ್ಯಕ್ರಮಕ್ಕೆ ಭೇಟಿ ನೀಡಬೇಕಾಗಿ ಬರಬಹುದು, ಸಿಹಿಯಾದ ಪದಾರ್ಥಗಳನ್ನು ಇಷ್ಟಪಡುತ್ತೀರಿ. ಜೀವನ ಅಹಿತಕರವಾಗಿ ಇರುತ್ತದೆ. ಆಸ್ತಿ ವಿವಾದ ಜಾಸ್ತಿಯಾಗಬಹುದು, ಕೆಲಸದಲ್ಲಿ ಬದಲಾವಣೆ ಉಂಟಾಗಬಹುದು. ವೃತ್ತಿಯಲ್ಲಿ ಅಧಿಕಾರಿಗಳ ಬೆಂಬಲ ಸಿಗುತ್ತದೆ. ಏಳಿಗೆ ಕಂಡುಬರುತ್ತದೆ. ಆದಾಯ ಹೆಚ್ಚಾಗುತ್ತದೆ, ಸ್ಥಾನ ಪರಿವರ್ತನೆ ಉಂಟಾಗುತ್ತದೆ.

ಕುಂಭ ರಾಶಿ :- ಮನಸ್ಸು ಸಂತೋಷವಾಗುತ್ತದೆ, ಆದರೆ ಸಂಯಮದಿಂದ ಇರಿ, ತಾಯಿ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕೆಲಸಕ್ಕಾಗಿ ಬೇರೆ ಕಡೆಗೆ ಹೋಗಬೇಕಾಗಿ ಬರಬಹುದು. ಆದಾಯ ಹೆಚ್ಚಾಗಬಹುದು, ಜೀವನದಲ್ಲಿ ನೋವಿರುತ್ತದೆ, ಅಧಿಕಾರಿಗಳ ಮತ್ತು ಕುಟುಂಬದವರ ಬೆಂಬಲ ಸಿಗುತ್ತದೆ. ಬಟ್ಟೆ ಮೇಲೆ ಖರ್ಚು ಹೆಚ್ಚಾಗಬಹುದು. ತಾಯಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು, ಜೀವನದಲ್ಲಿ ಅಹಿತಕರ ಘಟನೆ ಸಂಭವಿಸಬಹುದು.

ಮೀನ ರಾಶಿ :- ಆತ್ಮವಿಶ್ವಾಸ ಕಡಿಮೆಯಾಗುತ್ತದೆ, ಕುಟುಂಬದ ಬೆಂಬಲ ಸಿಗುತ್ತದೆ. ಮನೆಯವರ ಜೊತೆಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುತ್ತೀರಿ, ಆರೋಗ್ಯದಲ್ಲಿ ತೊಂದರೆ ಆಗಬಹುದು, ಆಹಾರದ ಬಗ್ಗೆ ಕಾಳಜಿ ವಹಿಸಿ. ಕಾರ್ಯಕ್ಷೇತ್ರದಲ್ಲಿ ನಿಮಗೆ ಇಷ್ಟವಿಲ್ಲದಿದ್ದರೂ ಹೆಚ್ಚಾಗುವ ಸಾಧ್ಯತೆ ಇದೆ. ಮಾತಿನಲ್ಲಿ ತಾಳ್ಮೆ ಇರಲಿ, ಖರ್ಚು ಹೆಚ್ಚಾಗುತ್ತದೆ. ಬಟ್ಟೆಗಳು ಉಡುಗೊರೆಯಾಗಿ ಸಿಗುತ್ತದೆ.

Comments are closed.