Neer Dose Karnataka
Take a fresh look at your lifestyle.

ಮತ್ತೆ ಕನ್ನಡಕ್ಕೆ ಬಂದ ತಕ್ಷಣವೇ ಸುನಾಮಿ ಎಬ್ಬಿಸಿದ ನಟಿ ರಮ್ಯಾ: ಡಿ ಬಾಸ್ ಕುರಿತು ಹೇಳಿದ್ದೇನು ಗೊತ್ತೇ?? ಈಗ ಇವೆಲ್ಲ ಬೇಕಿತ್ತಾ??

117

ನಟಿ ರಮ್ಯಾ ಅವರು ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಎಂದೇ ಹೆಸರು ಪಡೆದಿದ್ದಾರೆ, ರಮ್ಯಾ ಅವರು ಸಿನಿಮಾ ಇಂದ ದೂರ್ಸ್ ಉಳಿದಿದ್ದರು ಸಹ, ಅವರಿಗೆ ಇರುವ ಕ್ರೇಜ್ ಇಂದಿಗು ಕಡಿಮೆ ಆಗಿಲ್ಲ. ಪ್ರಸ್ತುತ ರಮ್ಯಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ, ಇತ್ತೀಚೆಗೆ ಆಪಲ್ ಬಾಕ್ಸ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಶುರು ಮಾಡಿದ ರಮ್ಯಾ ಅವರು ಮೊನ್ನೆ ದಸರಾ ಹಬ್ಬದ ದಿನ ತಾವು ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ಸ್ವಾತಿ ಮುತ್ತಿನ ಮಳೆಹನಿಯೇ ಟೈಟಲ್ ನಲ್ಲಿ ರಮ್ಯಾ ಅವರು ಸಿನಿಮಾ ಮಾಡುತ್ತಿದ್ದು, ಪ್ರೊಡ್ಯುಸರ್ ಮಾತ್ರವಲ್ಲದೆ ನಾಯಕಿಯಾಗಿ ಸಹ ನಟಿಸುತ್ತಿದ್ದಾರೆ, ಸ್ಯಾಂಡಲ್ ವುಡ್ ನ ಟ್ಯಾಲೆಂಟೆಡ್ ನಿರ್ದೇಶಕ ಮತ್ತು ನಟ ರಾಜ್ ಬಿ ಶೆಟ್ಟಿ ಅವರೊಡನೆ ಈ ಸಿನಿಮಾ ಮಾಡುತ್ತಿದ್ದಾರೆ ರಮ್ಯಾ. ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿರುವುದು ಅವರ ಅಭಿಮಾನಿ ಬಳಗಕ್ಕೆ ಮತ್ತು ಕನ್ನಡ ಸಿನಿಪ್ರಿಯರಿಗೆ ಬಹಳ ಸಂತೋಷ ಆಗಿದೆ. ಇದೇ ಸಂತೋಷದ ಸಮಯದಲ್ಲಿ ರಮ್ಯಾ ಅವರು ನಟ ದರ್ಶನ್ ಅವರ ಬಗ್ಗೆ ಮಾತನಾಡಿದ್ದು, ರಮ್ಯಾ ಅವರು ಹೇಳಿರುವ ಮಾತುಗಳು ವೈರಲ್ ಆಗುತ್ತಿದೆ.

ದರ್ಶನ್ ಅವರ ಜೊತೆಗೆ ಮತ್ತೊಮ್ಮೆ ನಟಿಸುತ್ತೀರಾ ಎಂದು ಕೇಳಿರುವ ಪ್ರಶ್ನೆಗೆ ಉತ್ತರ ಕೊಟ್ಟಿರುವ ರಮ್ಯಾ ಅವರು, “ದರ್ಶನ್ ಅವರ ಜೊತೆ ದತ್ತ ಸಿನಿಮಾದಲ್ಲಿ ನಟಿಸಿದ್ದೆ, ಆಗ ದರ್ಶನ್ ಅವರು ತುಂಬಾ ತಮಾಷೆ ಮಾಡ್ತಾ ಇದ್ರು, ಮಾತಾಡ್ತಾನೆ ಕಾಲೇಳಿತಾ ಇದ್ರು, ಅವರ ಪತ್ನಿ ವಿಜಯಲಕ್ಷ್ಮಿ ನನಗೆ ತುಂಬಾ ಒಳ್ಳೆಯ ಫ್ರೆಂಡ್ ಆಗಿದ್ದಾರೆ. ಅವಕಾಶ ಸಿಕ್ಕರೆ ಮತ್ತೊಮ್ಮೆ ದರ್ಶನ್ ಅವರ ಜೊತೆ ನಟಿಸುತ್ತೇನೇ..” ಎಂದಿದ್ದಾರೆ ನಟಿ ರಮ್ಯಾ. 16 ವರ್ಷಗಳ ಹಿಂದೆ ದರ್ಶನ್ ಹಾಗು ರಮ್ಯಾ ಅವರು ನಟಿಸಿದ ದತ್ತ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು, ಈ ಜೋಡಿ ಮತ್ತೊಮ್ಮೆ ನಟಿಸಿದರೆ, ಅವರ ಅಭಿಮಾನಿಗಳು ಹಬ್ಬ ಮಾಡುವುದಂತು ಖಂಡಿತ.

Leave A Reply

Your email address will not be published.