Neer Dose Karnataka
Take a fresh look at your lifestyle.

ಅಗ್ನಿಸಾಕ್ಷಿಯಲ್ಲಿ ಮಿಂಚಿ, ಲಕ್ಷಣ ಧಾರಾವಾಹಿಯಲ್ಲಿ ಖಡಕ್ ವಿಲ್ಲನ್ ಆಗಿರುವ ಅಂಜಲಿ ರವರು ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

ಕಿರುತೆರೆ ನಟಿ ಸುಕೃತಾ ನಾಗ್ ಯಾರಿಗೆ ತಾನೇ ಗೊತ್ತಿಲ್ಲ. ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ಮುದ್ದಾದ ಸುಕೃತ ಅಂಜಲಿ ಪಾತ್ರದಲ್ಲಿ ನಟಿಸಿದ್ದರು. ನಾಯಕ ಸಿದ್ಧಾರ್ಥ್ ತಂಗಿ ಪಾತ್ರ ಎಲ್ಲರ ಫೇವರೆಟ್ ಆಗಿತ್ತು. ತಂಗಿ ಅಂದ್ರೆ ಅಂಜಲಿ ಥರಾ ಇರಬೇಕು ಎಂದೇ ಎಲ್ಲರೂ ಹೇಳುತ್ತಿದ್ದರು. ಅಷ್ಟರ ಮಟ್ಟಿಗೆ ಅಂಜಲಿ ಪಾತ್ರ ಜನಪ್ರಿಯತೆ ಗಳಿಸಿಕೊಂಡಿತ್ತು. ಇಂದಿಗೂ ಸಹ ಆ ಮುದ್ದಾದ ಅಂಜಲಿ ಪಾತ್ರವನ್ನು ಜನರು ಮರೆತಿಲ್ಲ. ಅಗ್ನಿಸಾಕ್ಷಿ ನಂತರ ನಟಿ ಸುಕೃತಾ ಒಂದು ಬ್ರೇಕ್ ತೆಗೆದುಕೊಂಡಿದ್ದರು. ಮತ್ಯಾವುದೇ ಧಾರಾವಾಹಿಯಲ್ಲಿ ನಟಿಸಿರಲಿಲ್ಲ.

ಈಗ ಲಕ್ಷಣ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಲಕ್ಷಣ ಸೀರಿಯಲ್ ನಲ್ಲಿ ಶ್ವೇತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟಿ ಸುಕೃತಾ ನಾಗ್. ಮೊದಲ ಬಾರಿಗೆ ನೆಗಟಿವ್ ಶೇಡ್ ಇರುವ ರೋಲ್ ನಲ್ಲಿ ಸುಕೃತಾ ನಟಿಸಿದ್ದಾರೆ. ವಿಲ್ಲನ್ ಪಾತ್ರವನ್ನು ಕೂಡ ಅದ್ಭುತವಾಗಿ ಮಾಡಬಲ್ಲರು ಎನ್ನುವುದನ್ನು ಪ್ರೂವ್ ಮಾಡಿದ್ದಾರೆ ಸುಕೃತಾ. ಲಕ್ಷಣ ಧಾರಾವಾಹಿ ಒಳ್ಳೆಯ ಜನಪ್ರಿಯತೆ ಪಡೆದು ಮುನ್ನುಗ್ಗುತ್ತಿದೆ. ಲಕ್ಷಣ ಮೂಲಕ ಇನ್ನು ಹೆಚ್ಚು ಪಾಪ್ಯುಲರ್ ಆಗಿದ್ದಾರೆ ಸುಕೃತಾ. ಇವರ ಫ್ಯಾನ್ ಬೇಸ್ ಸಹ ದೊಡ್ಡದಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸುಕೃತಾ, ಆಗಾಗ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಶ್ವೇತಾ ಪಾತ್ರ ದಿನದಿಂದ ದಿನಕ್ಕೆ ಹೆಚ್ಚು ಪಾಪ್ಯುಲರ್ ಆಗುತ್ತಿದ್ದು, ಈ ಪಾತ್ರದಲ್ಲಿ ನಟಿಸಲು ಸುಕೃತ ಅವರು ಪಡೆಯುವ ಸಂಭಾವನೆ ಎಷ್ಟು ಎನ್ನುವ ಚರ್ಚೆ ಶುರುವಾಗಿದ್ದು, ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ, ಸುಕೃತ ಅವರು ಒಂದು ಎಪಿಸೋಡ್ ಗೆ 45 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನು ಚಾಲೆಂಜಿಂಗ್ ಆದ ಪಾತ್ರಗಳಲ್ಲಿ ಸುಕೃತ ಅವರು ಕಾಣಿಸಿಕೊಳ್ಳಲಿ ಎಂದು ಹಾರೈಸೋಣ.

Comments are closed.