Neer Dose Karnataka
Take a fresh look at your lifestyle.

ನನ್ನ ಹುಡುಗಿಯ ಜೊತೆ ಹೊರಹೋಗಬೇಕು 300 ರೂಪಾಯಿ ಕೊಡಿ ಎಂದ ಕ್ರಿಕೆಟ್ ಅಭಿಮಾನಿಗೆ ಅಮಿತ್ ಮಿಶ್ರಾ ಮಾಡಿದ್ದೇನು ಗೊತ್ತೇ??

ಭಾರತದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಟ್ವಿಟರ್ ನಲ್ಲಿ ತಮಾಷೆ ಭರಿತ ಟ್ವೀಟ್ ಗಳನ್ನು ಮಾಡುತ್ತಾ, ಜನರಿಗೆ ರಿಪ್ಲೈ ಕೊಡುತ್ತಾ ಭಾರಿ ಸುದ್ದಿಯಲ್ಲಿರುತ್ತಾರೆ. ಇವರ ಟ್ವೀಟ್ ಇಂದ ಜನರಿಗೆ ನಗು ಬರುವುದಂತು ಖಂಡಿತ. ತಮ್ಮ ಟ್ವೀಟ್ ಗಳು ಮತ್ತು ರಿಪ್ಲೈ ಗಳಿಂದಲೇ ಅಮಿತ್ ಮಿಶ್ರಾ ಅವರು ಹಲವು ಸಾರಿ ಹೆಡ್ ಲೈನ್ಸ್ ಆಗಿದ್ದಾರೆ. ಇದೀಗ ಮಿಶ್ರಾ ಅವರು ಅಭಿಮಾನಿಯೊಬ್ಬರ ಟ್ವೀಟ್ ಗೆ ಮಾಡಿರುವ ರಿಪ್ಲೈ ಭಾರಿ ಸದ್ದು ಮಾಡುತ್ತಿದೆ.

ಅಮಿತ್ ಮಿಶ್ರ ಅವರ ಅಭಿಮಾನಿಯೊಬ್ಬರು ತಮ್ಮ ಗರ್ಲ್ ಫ್ರೆಂಡ್ ಡೇಟ್ ಗೆ ಹೋಗಲು 300 ರೂಪಾಯಿ ಹಣ ಬೇಕು ಎಂದು ಕೇಳಿದ್ದು, ಮಿಶ್ರ ಅವರು ಆತನಿಗೆ 500 ರೂಪಾಯಿ ಹಣ ಕಳಿಸಿ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಗುರುವಾರ ನಡೆದ, ರೋಸ್ ಸೇಫ್ಟಿ ವರ್ಲ್ಡ್ ಸೀರೀಸ್ ಪಂದ್ಯದಲ್ಲಿ ಸುರೇಶ್ ರೈನಾ ಅವರು ಆಡಿದ ಶೈಲಿಯನ್ನು ಹೊಗಳಿ ಒಂದು ಟ್ವೀಟ್ ಮಾಡಿದ್ದರು, ಅದಕ್ಕೆ ಆದಿತ್ಯ ಕುಮಾರ್ ಸಿಂಗ್ ಎನ್ನುವ ವ್ಯಕ್ತಿ ರಿಪ್ಲೈ ಮಾಡಿ, ತಮ್ಮ ಗರ್ಲ್ ಫ್ರೆಂಡ್ ಅನ್ನು ಡೇಟ್ ಗೆ ಕರೆದೊಯ್ಯಲು 300 ರೂಪಾಯಿ ಕೊಡುವಂತೆ ಕೇಳಿ, ತಮ್ಮ ಯುಪಿಐ ಐಡಿ ಸಹ ಟ್ವೀಟ್ ಮಾಡಿದ್ದರು.

ಅಮಿತ್ ಮಿಶ್ರಾ ಅವರು ಆತನಿಗೆ 500 ರೂಪಾಯಿ ಕಳಿಸಿ, ಅದರ ಸ್ಕ್ರೀನ್ ಶಾಟ್ ಅನ್ನು ಟ್ವೀಟ್, ಕಳಿಸಿದ್ದೇನೆ, ನಿಮ್ಮ ಡೇಟ್ ಗೆ ಆಲ್ ದಿ ಬೆಸ್ಟ್ ಎಂದು ರಿಪ್ಲೈ ಮಾಡಿದ್ದು.. ಈ ಟ್ವೀಟ್ ನೋಡಿದ ಆದಿತ್ಯ ಕುಮಾರ್ ಸಿಂಗ್ ತಾನು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದೀಗ ಅಮಿತ್ ಮಿಶ್ರಾ ಅವರು ಮಾಡಿರುವ ಈ ಟ್ವೀಟ್ ಮತ್ತು ಹಣ ಕಳಿಸಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಮಿತ್ ಮಿಶ್ರಾ ಅವರು ಕೊನೆಯದಾಗಿ, 2021ರ ಐಪಿಎಲ್ ನಲ್ಲಿ ಕಾಣಿಸಿಕೊಂಡಿದ್ದರು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಡಿದ್ದರು.

Comments are closed.